ಅಖಿಲ ಭಾರತೀಯ ಕೋಲಿ ಸಮಾಜ, ನವದೆಹಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಗೆ ಕರ್ನಾಟಕ ರಾಜ್ಯದಿಂದ ನೂತನ ಸದಸ್ಯರ ನೇಮಕ

ಅಖಿಲ ಭಾರತೀಯ ಕೋಲಿ ಸಮಾಜ, ನವದೆಹಲಿ  ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಗೆ ಕರ್ನಾಟಕ ರಾಜ್ಯದಿಂದ ನೂತನ ಸದಸ್ಯರ ನೇಮಕ

ಅಖಿಲ ಭಾರತೀಯ ಕೋಲಿ ಸಮಾಜ, ನವದೆಹಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಗೆ ಕರ್ನಾಟಕ ರಾಜ್ಯದಿಂದ ನೂತನ ಸದಸ್ಯರ ನೇಮಕ

ಕಲಬುರಗಿ: ಅಖಿಲ ಭಾರತೀಯ ಕೋಲಿ ಸಮಾಜದ ಕರ್ನಾಟಕದ ರಾಜ್ಯಾಧ್ಯಕ್ಷ ಶ್ರೀ ದತ್ತಾತ್ರೇಯ ರೆಡ್ಡಿ ಮುದಿರಾಜ್ ಅವರ ಶಿಫಾರಸಿನ ಮೇರೆಗೆ, ರಾಷ್ಟ್ರೀಯ ಅಧ್ಯಕ್ಷ ಗೌರವಾನ್ವಿತ ಶ್ರೀ ವೀರೇಂದ್ರ ಕಶ್ಯಪ್ ಅವರು ಕರ್ನಾಟಕದಿಂದ ಶ್ರೀಮತಿ ಮಾಲಾ ಬಿ. ನಾರಾಯಣರಾವ್ ಹಾಗೂ ಶ್ರೀ ದತ್ತರಾಜ ಶಿವಲಿಂಗಪ್ಪ ಕಿನ್ನೂರ್ ಅವರನ್ನು ರಾಷ್ಟ್ರೀಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

ಸಮಾಜದ ಹಿತಕ್ಕಾಗಿ ಇವರ ತ್ಯಾಗಭಾವ, ನಿಷ್ಠೆ ಹಾಗೂ ಸಮಾಜ ಸೇವಾಭಾವವನ್ನು ಪರಿಗಣಿಸಿ ಈ ನೇಮಕಾತಿ ಮಾಡಲಾಗಿದೆ. ಸಂಸ್ಥೆಯ ಸಂವಿಧಾನದ ಪ್ರಕಾರ, ಪ್ರಾಮಾಣಿಕತೆ, ಭಕ್ತಿ ಮತ್ತು ನಿಷ್ಠೆಯಿಂದ ಸಮಾಜ ಹಾಗೂ ಸಂಸ್ಥೆಗೆ ಸೇವೆ ಸಲ್ಲಿಸುವುದು ಸದಸ್ಯರ ಕರ್ತವ್ಯವಾಗಿದೆ.

ಸಂಸ್ಥೆಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದ್ದು,ಈ ಕುರಿತ ಮಾಹಿತಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಅವಂಟಿ ಹಾಗೂ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕೆ ಚಿಗರಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.