“ಅಮ್ಮ” ಸಂಸ್ಮರಣ ಗ್ರಂಥ ಲೋಕಾರ್ಪಣೆ ಹಾಗೂ ಶ್ರೀಮತಿ ಶಿವಲೀಲಾ ಮೂಲಗೆ ಅವರ 50ನೇ ಜನ್ಮ ದಿನೋತ್ಸವ

ಕಲಬುರಗಿ, ಫೆ.27: ನಗರದ ರುಚಿ ಉಪಹಾರ ಗೃಹದಲ್ಲಿ ಮಾರ್ಚ್ 1ರಂದು ಬೆಳಿಗ್ಗೆ 11 ಗಂಟೆಗೆ ಕಮಲಾಪೂರದ ಬಮ್ಮಣ ಫಾರ್ಮ್ಸ್ ವತಿಯಿಂದ “ಅಮ್ಮ” ಸಂಸ್ಮರಣ ಗ್ರಂಥದ ಲೋಕಾರ್ಪಣೆ ಹಾಗೂ ಶ್ರೀಮತಿ ಶಿವಲೀಲಾ ಮೂಲಗೆ ಅವರ 50ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಪರಮ ಪೂಜ್ಯ ಡಾ ಅಪ್ಪಾರಾವ್ ದೇವಿ ಮುತ್ಯ (ಶ್ರೀನಿವಾಸ ಸರಡಗಿಯ ಶಕ್ತಿ ಪೀಠದ ಪೀಠಾಧಿಪತಿಗಳು) ದಿವ್ಯ ಸಾನಿಧ್ಯ ವಹಿಸಲಿದ್ದು, ಪೂಜ್ಯ ನಾಗೇಶ್ ಮುತ್ಯಾ (ಗಣಜಲಖೇಡ) ಸಾನಿಧ್ಯ ವಹಿಸಲಿದ್ದಾರೆ.

ಖ್ಯಾತ ಸಾಹಿತಿಗಳಾದ ಅಪ್ಪಾರಾವ ಅಕ್ಕೊಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶರಣ ಚಿಂತಕ ರೇವಪ್ಪ ಬಮ್ಮಣ್ಣ ಅವರು ಗ್ರಂಥವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸಾಹಿತಿ ರೇವಣಸಿದ್ದಪ್ಪ ದುಕಾನ ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ ಮತ್ತಿಮೂಡ, ವೀರಶೈವ ಸಮಾಜದ ಮುಖಂಡ ಸುಭಾಷ್ ಬಿರೆದಾರ್, ಕೃಷಿ ಪಂಡಿತ ಸಿದ್ರಾಮಪ್ಪ ಪಾಟೀಲ ದಂಗಾಪುರ, ನಿವೃತ್ತ ಪೊಲೀಸ್ ಅಧಿಕಾರಿ ಸೋಮಯ್ಯ ಮಠಪತಿ, ವಿನಯ್ ಪಾಟೀಲ್, ರುದ್ರೇಶ್ ಕಲ್ಯಾಣಿ ಹಾಗೂ ಅಮೃತ ಗೌರೆ ಭಾಗವಹಿಸಲಿದ್ದಾರೆ.

ಹಿರಿಯ ಸಾಹಿತಿಗಳಾದ ಡಾ ವಿಜಯಕುಮಾರ್ ಜಿ ಪರುತೆ ಹಾಗೂ ಡಾ ಶಾಂತಾ ಮಠ ಅವರು ಗೌರವಉಪಸ್ಥಿತಿ ವಹಿಸಲಿದ್ದಾರೆ ಎಂದು ಬಮ್ಮಣ ಪರಿವಾರದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.