ಡಾ// ವಿಷ್ಣುವರ್ಧನ್ ಸಮಾಧಿ ಅಕ್ರಮವಾಗಿ ನೆಲಸಮ ಮಾಡಿದವರ ವಿರುದ್ಧ. ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು:-ಕರವೇ ಆಗ್ರಹ

ಡಾ// ವಿಷ್ಣುವರ್ಧನ್ ಸಮಾಧಿ ಅಕ್ರಮವಾಗಿ ನೆಲಸಮ ಮಾಡಿದವರ ವಿರುದ್ಧ. ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು:-ಕರವೇ ಆಗ್ರಹ
ಗುರುಮಠಕಲ್ :-ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಕರ್ನಾಟಕ ರಾಜ್ಯ ಖ್ಯಾತ ಮೇರು ನಟ ಡಾ|| ವಿಷ್ಣುವರ್ಧನ್‌ರವರ ಸಮಾಧಿಯನ್ನು ತೆರವುಗೊಳಿಸಿದ ಪುಂಡರ ಮೇಲೆ ಪ್ರಕರಣ ದಾಖಲು ಮಾಡಿ ಅವರನ್ನು ಗಡಿಪಾರು ಮಾಡಿ ಪುನಃ ಅದೇ ಸ್ಥಳದಲ್ಲಿ ಡಾ|| ವಿಷ್ಣುವರ್ಧನ್‌ರವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು,
ಡಾ|| ವಿಷ್ಣುವರ್ಧನ್‌ರವರು ಕರ್ನಾಟಕ ರಾಜ್ಯದಲ್ಲಿ ತಮ್ಮದೇ ಆದ ಅಭಿನಯ ಕಲೆಯ ಮೂಲಕ ಚಾಪು ಮೂಡಿಸಿರುತ್ತಾರೆ. ಯಾವುದೇ ರೀತಿ ಆಸೆ ಅಮಿಷಾ ಬಯಸದೆ ತನ್ನ ಜೀವನವನ್ನೆ ರಂಗ ಭೂಮಿಗೆ ಮೀಸಲಿಟ್ಟು ಸುಮಾರು ೨೨೦ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಕರ್ನಾಟಕ ರಾಜ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಅಂತಹ ಮೇರು ನಟನ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವ ಬಾಲಣ್ಣ ಕುಟುಂಬದವರು ನೇರಹೊಣೆಯಾಗಿರುತ್ತಾರೆ. ಅದಕ್ಕೆ ಬೆಂಬಲ ನೀಡಿರುವ ಪೋಲಿಸ್ ಸಿಬ್ಬಂದಿ ಇವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು. ಇವರ ಸಮಾಧಿಯನ್ನು ತೆರವುಗೊಳಿಸಿದ ಪುಂಡರ ಮೇಲೆ ತಕ್ಷಣವೇ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಿ ಮೊದಲು ಇದ್ದ ಸ್ಥಳದಲ್ಲಿಯೇ ಪುನರ್,ಡಾ|| ವಿಷ್ಣುವರ್ಧನ್‌ರವರ ಸಮಾಧಿ ನಿರ್ಮಿಸಿ ಗೌರವ ಸಲ್ಲಿಸಬೇಕು.
ಸಮಾಧಿ ಸ್ಥಳವು ಒಬ್ಬ ವ್ಯಕ್ತಿಯ ಆಸ್ತಿ ಆಗಿರುವುದಿಲ್ಲ. ಅದು ಸರಕಾರಿ ಗೈರಾಣು ಜಮೀನು ಇದ್ದು ಅದನ್ನು ಪುಂಡರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಸರಕಾರಕ್ಕೆ ಮೋಸಮಾಡುತ್ತಿದ್ದಾರೆ. ಇಂತವರ ವಿರುದ್ಧ ತನಿಖೆ ಮಾಡಿ ಕ್ರಿಮಿನಲ್ ಪ್ರಕರಣ ದಾಖಲೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ಡಾ|| ವಿಷ್ಣುವರ್ಧನ್‌ರವರ ಅಭಿಮಾನಿಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆಗಳು ಬೀದಿಗಳಿದು ಸರಕಾರದ ವಿರುದ್ಧ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ. ಮುಂದೇ ಆಗುವ ಅನಾಹುತಗಳಿಗೆ ನೇರವಾಗಿ ಸರಕಾರವೇ ಹೊಣೆ ಎಂದು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಶರಣಬಸಪ್ಪ, ಗೌರವಾಧ್ಯಕ್ಷ ಭೀಮಶಂಕರ್ ಪಡಿಗೆ. ಜಗದೀಶ್ ನಸಲ್ವಾಯಿ. ಶರಣು ವೇದ. ವೆಂಕಟೇಶ್ ಚಿಟ್ಕಂಪಲ್ಲಿ. ಸಾಯ್ಬಣ್ಣ ಸಿದ್ದಾಪುರ. ಜಾಫರ್ ಗುರುಮಿಟ್ಕಲ್. ಭೀಮಶಂಕರ್ ಎಲ್ಲೇರಿ. ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.