ಕಲಬುರಗಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ನಾಗೇಂದ್ರಪ್ಪ ಉದನೂರ ಅವಿರೋಧ ಆಯ್ಕೆ

ಕಲಬುರಗಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ನಾಗೇಂದ್ರಪ್ಪ ಉದನೂರ ಅವಿರೋಧ ಆಯ್ಕೆ

ಕಲಬುರಗಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ನಾಗೇಂದ್ರಪ್ಪ ಉದನೂರ ಅವಿರೋಧ ಆಯ್ಕೆ

ಕಲಬುರಗಿ: ದಿನಾಂಕ 29/12/2025 ರಂದು ಕಲಬುರಗಿ ಜಿಲ್ಲಾ ವಕೀಲರ ಸಂಘದ ಹಳೆಯ ಕಟ್ಟಡದಲ್ಲಿ ಕಲಬುರಗಿ ಜಿಲ್ಲಾ ನೋಟರಿ ಸಂಘದ ಮಹತ್ವದ ಸಭೆ ಜರುಗಿತು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರ ಸಮ್ಮತಿಯೊಂದಿಗೆ ಶ್ರೀ ನಾಗೇಂದ್ರಪ್ಪ ಎಂ. ಉದನೂರ ಅವರನ್ನು ಕಲಬುರಗಿ ಜಿಲ್ಲಾ ನೋಟರಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಂತರ ಸಂಘದ ಗೌರವ ಅಧ್ಯಕ್ಷರಾಗಿ ಎಂ.ಎಸ್. ಪಾಟೀಲ,ಉಪಾಧ್ಯಕ್ಷರಾಗಿ ಶಾಮರಾಯ ದೊಡ್ಡಮನಿ ಹಾಗೂ ಸಂಜೀವಕುಮಾರ ಪತಂಗೆ,ಕಾರ್ಯದರ್ಶಿಯಾಗಿ ರವಿ ಬಿ. ಚವ್ಹಾಣ,

ಉಪ-ಕಾರ್ಯದರ್ಶಿಯಾಗಿ ತಿಪ್ಪಣ್ಣ ಪೂಜಾರಿ,ಖಜಾಂಚಿಯಾಗಿ ಶಿವರಾಜ ಬಾಜೆನೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ಪ್ರಕಾಶ ಡಿಗ್ಗಿ, ರಾಜ್ಯ ಉಪಾಧ್ಯಕ್ಷರಾದ ಸಂಜೀವಕುಮಾರ ಜೋಗ, ಕುಸುಮಾಕರ್ ಆರ್.ವಿ., ಹಣಮಂತ ಕಂದಳ್ಳಿ, ಮಹೇಂದ್ರಕುಮಾರ ಮೂಳೆ, ಅಯ್ಯುಬ್ ಖಾನ, ರತ್ನಾಕರ್ ಕುಪೇಂದ್ರ, ಪ್ರಭು ಹೊಸಮನಿ, ಬಸವರಾಜ ಕೋಬಾಳ, ಶರಣಬಸಪ್ಪ ಚಿತಲಿ, ಧನಸಿಂಗ್ ಚವ್ಹಾಣ, ತೇನಸಿಂಗ್ ಮದನಕರ್, ಬಸವರಾಜ ತಳವಾರ, ಶ್ರೀಮಂತ ಲೇಂಗಟಿಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ನಾಗೇಂದ್ರಪ್ಪ ಎಂ. ಉದನೂರ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷರಾದ ನಾಗೇಂದ್ರಪ್ಪ ಉದನೂರ ನಂದೂರ (ಕೆ) ಇವರಿಗೆ ಶರಣಗೌಡ ಪಾಟೀಲ ಪಾಳಾ, ಡಾ. ಆನಂದ ಸಿದ್ದಾಮಣಿ, ಸಿದ್ರಾಮ ರಾಜಮಾನೆ ಹಾಗೂ ಅಂಬಾರಾಯ ಕೋಣೆ ಅವರು ಗೌರವಿಸಿ ಸನ್ಮಾನಿಸಿದರು.

ಈ ಸಭೆಯ ಮಾಹಿತಿ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಬಿ. ಚವ್ಹಾಣ, ಅಡಿಕ ವಕೀಲರು ಮತ್ತು ನೋಟರಿ ಪಬ್ಲಿಕ್ (ಭಾರತ ಸರ್ಕಾರ), ಕಲಬುರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

--