ಕಡಲೆ ಇಟ್ಟಂಗಿ ತಾಮ್ರ ರೋಗ ನಿರ್ವಹಣೆಗೆ ಸಲಹೆ
ಕಡಲೆ ಇಟ್ಟಂಗಿ ತಾಮ್ರ ರೋಗ ನಿರ್ವಹಣೆಗೆ ಸಲಹೆ
ಉತ್ತರ ಭಾರತದ ಶೀತ ಗಾಳಿ ಸೋಲಾಪುರ್, ಕಲಬುರಗಿ ಬಾಗಕ್ಕೂ ತಟ್ಟಿದ್ದು ಜಿಲ್ಲೆಯ ಮಳೆ ಅಶ್ರಿತ ಕಪ್ಪು ಮಣ್ಣಿನಲ್ಲಿ ಬೆಳೆದ ಕಡಲೆ ಬೆಳೆಯ ಎಲೆ ತಾಮ್ರ ಬಣ್ಣಕ್ಕೆ ತಿರುಗಿದ್ದು ಬಹುತೇಕ ಹೂ ಕಾಯಿ ರಚನೆ ಧಕ್ಕೆಯಾಗುತ್ತಿದೆ. ರಾತ್ರಿ ಚಳಿ ಸನ್ನಿವೇಶ, ಇತ್ತಾ ಬಂಗಾಳ ಕೊಲ್ಲಿಯ ಬಾಗದಿಂದ ಮೇಲಮೈ ಸುಳಿ ಗಾಳಿ ಸನ್ನಿವೇಶ ಕಡಲೆ ಬೆಳೆದ ಭೂಮಿ ಬಿರುಕು ಆಗಿದ್ದು ಅದ್ರತೆ ತೇವದ ಕೊರತೆ ಇಳುವರಿ ಮೇಲೆ ಪ್ರಭಾವ ಬಿರುತ್ತಿದೆ. ಬೇರುಗಳ ಮೂಲಕ ಪೋಷಕ ಸರಬರಾಜು ಮಾಡುವ ಅಂಗಶ ಸಕ್ರಿಯ ಗೊಳ್ಳಲು ಮಣ್ಣಿನ ತೇವ ಅತ್ಯಾಗತ್ಯ. ರೈತರು ಹೂ ಹಂತದಲ್ಲಿ ನೀರಿನಲ್ಲಿ ಕರಗುವ ಎನ್ ಪಿ ಕೆ 5 ಗ್ರಾಂ ಹಾಗೂ ಕಾರ್ಬೇಡಾಜಿಮ್ 1 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಕೃಷಿ ವಿಜ್ಜಾನ ಕೇಂದ್ರ ಸಸ್ಯ ರೋಗ ಶಾಸ್ತ್ರ ವಿಜ್ಜಾನಿ ಡಾ. ಜಹೀರ್ ಅಹಮದ ತಿಳಿಸಿದ್ದಾರೆ. ಚಳಿ ಹೆಚ್ಚಾದಲ್ಲಿ ಕಡಲೆ ಎಲೆ ಹುಳಿ ಅಂಶ ಹೆಚ್ಚುತ್ತದೆ, ಕಾಯಿ ರಚನೆ ಉತ್ತಮಗೊಳ್ಳುತ್ತದೆ.
