ನಿಧನ ವಾರ್ತೆ: ಮದುಮಗನಾಗಿ ಮಷಣ ಸೇರಿದ ನತದೃಷ್ಷ
ನಿಧನ ವಾರ್ತೆ: ಮದುಮಗನಾಗಿ ಮಷಣ ಸೇರಿದ ನತದೃಷ್ಷ
ನಿಧನ ವಾರ್ತೆ:
ರಾಜೇಂದ್ರ (ಸನ್ನಿ) ತಂದೆ ಜಾವಿಂದ್ರ ಸಿಂಗ್ ವಾಲಿಯ ವಯಸ್ಸು 36
ವಾಡಿ: ಪಟ್ಟಣದ ಪಿಲಕಮ್ಮಾ ಬಡಾವಣೆಯ ನಿವಾಸಿ ರಾಜೇಂದ್ರ (ಸನ್ನಿ) ತಂದೆ ಜಾವಿಂದ್ರ ಸಿಂಗ್ ವಾಲಿಯ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮದುವೆಯಾಗಿ ಮೆರವಣಿಗೆ ಮೂಲಕ ಮನೆಗೆ ಅಗಮಿಸಿದ ರಾಜೇಂದ್ರ ಪ್ರಜ್ಞೆ ತಪ್ಪಿದ್ದರು,ತಕ್ಷಣ ಕಲಬುರಗಿ ಆಸ್ಪತ್ರೆಗೆ ಸೇರಿಸಲಾಯಿತು,ನಂತರ ಸೊಲ್ಲಾಪುರಕ್ಕೆ ಸಾಗಿಸಿ ಅಲ್ಲಿನ
ಒಳಶಂಕರ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಿದರು.
ಸುಮಾರು ಹದಿನೈದು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಜೇಂದ್ರ ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ದಂದು
ಬೆಳಗಿನ ಜಾವ 02:00ಗಂಟೆಗ ಕೊನೆಯುಸಿರೆಳೆದರು.
ತಂದೆ,ಓರ್ವ ಸಹೋದರ, ಓರ್ವ ಸಹೋದರಿ ಹಾಗೂ ಪತ್ನಿ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.
ಮದುವೆ ಯಾದ ಕೆಲವೆ ಗಂಟೆಗಳಿಲ್ಲಿ ಆಸ್ಪತ್ರೆ ಸೇರಿ ಸಾವನಪ್ಪಿದ ನತದೃಷ್ಟ ರಾಜೇಂದ್ರ ನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.
ರಾಜೇಂದ್ರ ನ ತಂದೆ ಒಂದು ವರ್ಷದ ಹಿಂದೆ ಪತ್ನಿ ಯನ್ನು ಈಗ ಮಗನನ್ನು ಕಳೆದುಕೊಂಡ ಗೊಳಾಡುತ್ತಿರುವ ದೃಶ್ಯ ಮನ ಕುಲಕುವಂತಿತ್ತು.
ರವಿವಾರ 01/09/24 ಮಧ್ಯಾಹ್ನ 02:00ಗಂಟೆಗೆ ರೈಲ್ವೆ ಯಾರ್ಡ್ ನ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆನೆರವೇರಿತು.