ಮಾತಾ ಮಾಣಿಕೇಶ್ವರಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ 16ಕ್ಕೆ

ಮಾತಾ ಮಾಣಿಕೇಶ್ವರಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ 16ಕ್ಕೆ

ಮಾತಾ ಮಾಣಿಕೇಶ್ವರಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ 16ಕ್ಕೆ

ಕಲಬುರಗಿ: ಇಲ್ಲಿನ ಬ್ರಹ್ಮಪುರದ ಚೌಡೇಶ್ವರ ಕಾಲೊನಿಯಲ್ಲಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮಾತಾ ಮಾಣಿಕೇಶ್ವರಿ ದೇವಸ್ಥಾನ ಉದ್ಘಾಟನೆ ಮತ್ತು ಅಮ್ಮನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆ.16ರಂದು ಹಮ್ಮಿಕೊಳ್ಳಲಾ-ಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ ತಿಳಿಸಿದರು.

ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಆ.15ರಂದು ಬೆಳಿಗ್ಗೆ 9 ಗಂಟೆಗೆ ಶರಣಬಸವೇಶ್ವರ ದೇವಸ್ಥಾನದಿಂದ ಮಾತಾ ಮಾಣಿಕೇಶ್ವರಿ ದೇವಸ್ಥಾನದವರೆಗೆ ಕಳಸ ಮತ್ತು ಪ್ರಭಾವಳಿ ಮೆರವಣಿಗೆ ನಡೆಯಲಿದೆ.

ನಂತರ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನ 3ರಿಂದ ಪ್ರವಚನ ಹಾಗೂ ಸಂಜೆ ಸಂಗೀತ ಕಾರ್ಯಕ್ರಮ ಜರುಗಲಿದೆ' ಎಂದರು.

“ಆ.15ರಂದು ರಾತ್ರಿ 11.15 ಪ್ರತಿಷ್ಠಾಪನೆ ಜರುಗಲಿದ್ದು, ಆ.16ರಂದು ಬೆಳಗಿನ ಜಾವ 4.30ರಿಂದ ಹೋಮ ಯಜ್ಞಾದಿಗಳ ಮೂಲಕ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ಬೆಳಿಗ್ಗೆ 7.15ಕ್ಕೆ ಕಳಸಾರೋಹಣ, ಬೆಳಿಗ್ಗೆ 11.30ಕ್ಕೆ ವಿವಿಧ ಮಠಾಧೀಶರು, ಸಚಿವರು, ರಾಜಕೀಯ ಮುಖಂಡರಿಂದ ಮಂದಿರ ಮತ್ತು ಮೂರ್ತಿ ಉದ್ಘಾಟನೆ ನಡೆಯಲಿದೆ' ಎಂದು ತಿಳಿಸಿದರು.

ಅರ್ಜುನ ಜಮಾದಾರ, ವಿಜಯಕುಮಾರ ಬಿ.ಹದಗಲ್‌, ರಾಜು ಸೊನ್ನ, ನೀಲಕಂಠ ಸೋಮನೂರ ಹಾಜರಿದ್ದರು.

ಕಲಬುರಗಿ ಸುದ್ದಿ : ನಾಗರಾಜ್ ದಂಡಾವತಿ