ಚಿಂಚನ್‌ಸೂರ್‌ನಲ್ಲಿ 2.3 ತೀವ್ರತೆಯ ಭೂಕಂಪ - ಸಮುದಾಯಕ್ಕೆ ಆತಂಕದ ಅಗತ್ಯವಿಲ್ಲ

ಚಿಂಚನ್‌ಸೂರ್‌ನಲ್ಲಿ 2.3 ತೀವ್ರತೆಯ ಭೂಕಂಪ - ಸಮುದಾಯಕ್ಕೆ ಆತಂಕದ ಅಗತ್ಯವಿಲ್ಲ
ಆಳಂದ : ಬೆಳಿಗ್ಗೆ 8:17 ರ ಸಮಯದಲ್ಲಿ ಆಳಂದ ತಾಲೂಕಿನ ಚಿಂಚನ್‌ಸೂರ್ ಗ್ರಾಮ ಪಂಚಾಯಿತಿಯ ಜವಾಳಗಾ ಗ್ರಾಮದಿಂದ 0.5 ಕಿ.ಮೀ ಆಗ್ನೇಯದಲ್ಲಿ ತೀವ್ರತೆ 2.3 ಇರುವ ಭೂಕಂಪವೊಂದು ದಾಖಲಾಗಿದೆ ಎಂದು ಕರ್ನಾಟಕ ಆರ್ಥಣ ಡೇಟಾ ಮತ್ತು ಮಾನಿಟರಿಂಗ್ ಸೆಂಟರ್ (KSNDMC) ತಿಳಿಸಿದೆ. ಈ ಭೂಕಂಪದ ಕೇಂದ್ರಬಿಂದು 7 ಕಿ.ಮೀ ಆಳದಲ್ಲಿದ್ದು, ಸಿರಚಂದ್ (2.4 ಕಿ.ಮೀ), ಚಿಂಚನ್‌ಸೂರ್ (4.0 ಕಿ.ಮೀ) ಮತ್ತು ಕಲಬುರಗಿ ನಗರ (22 ಕಿ.ಮೀ) ಸೇರಿದಂತೆ 20-25 ಕಿ.ಮೀ ತ್ರಿಕೋನಾಕಾರ ಪ್ರದೇಶದವರೆಗೆ ಸ್ವಲ್ಪ ಕಂಪನ ಅನುಭವವಾಗಬಹುದು ಎಂದು ವರದಿ ತಿಳಿಸಿದೆ.
ವಿಶ್ಲೇಷಣೆಯ ಪ್ರಕಾರ, ಈ ಭೂಕಂಪದ ತೀವ್ರತೆ ಕಡಿಮೆಯಾಗಿದ್ದು, ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿ ಸಂಭವಿಸುವ ಸಾಧ್ಯತೆ ಇಲ್ಲ. ಭೂಕಂಪೀಯ ಪ್ರದೇಶ III ಯಲ್ಲಿ ಬಿದ್ದಿರುವ ಈ ಭೂಕಂಪವು ಯಾವುದೇ ಟೆಕ್ಟಾನಿಕ್ ಅಸಂನಿಯಮಗಳಿಲ್ಲದ ಪ್ರದೇಶದಲ್ಲಿ ಸಂಭವಿಸಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಖಚಿತಪಡಿಸಿದ್ದಾರೆ. ಆಳಂದ ತಹಶೀಲ್ದಾರ್ ಅಣ್ಣಾರಾವ ಪಾಟೀಲ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ ಗ್ರಾಮಸ್ಥರು ಹೆದರುವ ಅವಶ್ಯಕತೆ ಇಲ್ಲ ಎಂದರು.
ವರದಿ ಡಾ. ಅವಿನಾಶ್ ದೇವನೂರ್