ಡಾ. ವಿಷ್ಣುವರ್ಧನ್ ಸ್ಮಾರಕ ತೆರವು : ಆರೋಪಿಗಳನ್ನು ಕೂಡಲೇ ಬಂಧಿಸಲಿ : ಮಹಾಂತಗೌಡ ಆರ್. ಪಾಟೀಲ್ ಆಗ್ರಹ

ಡಾ. ವಿಷ್ಣುವರ್ಧನ್ ಸ್ಮಾರಕ ತೆರವು : ಆರೋಪಿಗಳನ್ನು ಕೂಡಲೇ ಬಂಧಿಸಲಿ : ಮಹಾಂತಗೌಡ ಆರ್. ಪಾಟೀಲ್ ಆಗ್ರಹ

ಡಾ. ವಿಷ್ಣುವರ್ಧನ್ ಸ್ಮಾರಕ ತೆರವು : ಆರೋಪಿಗಳನ್ನು ಕೂಡಲೇ ಬಂಧಿಸಲಿ : ಮಹಾಂತಗೌಡ ಆರ್. ಪಾಟೀಲ್ ಆಗ್ರಹ

ಕಲಬುರಗಿ ಸುದ್ದಿ:ನಟಸಾರ್ವಭೌಮ, ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿನ ಸ್ಮಾರಕವನ್ನು ಮಧ್ಯರಾತ್ರಿ ದುಷ್ಕರ್ಮಿಗಳು ತೆರವುಗೊಳಿಸಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಅಹಿಂದ ಸಂಘಟನೆಯ ಯಡ್ರಾಮಿ ತಾಲೂಕಾಧ್ಯಕ್ಷ ಮಹಾಂತಗೌಡ ಆರ್. ಪಾಟೀಲ್ ಹಂಗರಗಾ ಕೆ. ಅವರು ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರವನ್ನು ಗಂಭೀರ ಕ್ರಮಕ್ಕೆ ಆಗ್ರಹಿಸಿದರು.

ಅವರು ಪ್ರಕಟಣೆಯಲ್ಲಿ, “ಡಾ. ವಿಷ್ಣುವರ್ಧನ್ ಅವರು ಕರ್ನಾಟಕದ ಸಂಸ್ಕೃತಿ, ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸ್ಮಾರಕವನ್ನು ಧ್ವಂಸಗೊಳಿಸುವುದು ಅಸಹ್ಯಕರ ಕೃತ್ಯ. ಇದನ್ನು ಕೈಗೊಂಡ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಬೇಕು” ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ನ್ಯಾಯ ಸಿಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಈ ಕುರಿತು ಹಿಂದೂ ಪರ ಸಂಘಟನೆಗಳ ಹೋರಾಟಗಾರರೂ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.

ವರದಿ: ಜೇಟ್ಟೆಪ್ಪ ಎಸ್. ಪೂಜಾರಿ