ಢಕ್ಕೆಯ ಬೊಮ್ಮಣ್ಣ

ಢಕ್ಕೆಯ ಬೊಮ್ಮಣ್ಣ

ಢಕ್ಕೆಯ ಬೊಮ್ಮಣ್ಣ 

ಮರೆದವರ ಮನದಲ್ಲೆಲ್ಲವೂ ಮಾರಿ.

ಅರಿದವರ ಮನದಲ್ಲೆಲ್ಲವೂ ಸ್ವಯಂಜ್ಯೋತಿ.

ಡಕ್ಕೆಯ ದನಿ ಉಳ್ಳನ್ನಕ್ಕ ನಿಶ್ಚೈಸಿಕೊಳ್ಳಿ, ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ.

   ಢಕ್ಕೆಯ ಬೊಮ್ಮಣ್ಣ 

                  ವಚನ ಅನುಸಂಧಾನ*

ಪ್ರಖರ ವೈಚಾರಿಕ ಚಿಂತನೆಯ,ವಿಸ್ತೃತ ವೈಜ್ಞಾನಿಕ ಮನೋಭಾವದ ನೈಸರ್ಗಿಕ ತತ್ವಗಳನ್ನ ಇಂಬಿಟ್ಪು ಕೊಂಡು, ಸರ್ವಸಮಾನತೆಯ ಸಮಾಜಿಕತೆಯ ನಡೆಯನ್ನು ಮೈಗೂಡಿಸಿಕೊಂಡು,ನೈತಿಕ ನಿಷ್ಠೆಯ

ಸಮಷ್ಟಿ ಪ್ರಜ್ಞೆಯನ್ನು ಸಹಜ ಮತ್ತು ಸರಳವಾಗಿ ಜೀವಿಸುತ್ತಾ ಕಾಯಕತತ್ವ ಮತ್ತು ದಾಸೋಹತತ್ವ

ಗಳನ್ನ ವ್ರತದಂತೆ ಆಚರಿಸುವ ಮೂಲಕ ಆರ್ಥಿಕ

ಸದೃಢತೆಯ ಜೊತೆಗೆ ವ್ಯಕ್ತಿತ್ವದ ಅಹಂ ನಿರಶನ ಮಾಡಿಕೊಂಡು ವರ್ತಮಾನದ ಬದುಕನ್ನವರು, ತಮ್ಮ ನಡೆನುಡಿಯ ಸಾಂಗತ್ಯದಿಂದ ಸಹ್ಯ ಮತ್ತು ಸುಂದರಗೊಳಿಸಿಕೊಂಡು ಜಗದೊಳಗೆ ಬೆಳಗುತ್ತ ಬೆಳಗಾಗಿ ಬಾಳಿದ ಶರಣರು ಜೀವನವನ್ನು ಸದಾ ಧನಾತ್ಮಕವಾಗಿ ಚಿಂತನೆಯ ಮಾಡಿ ನೆಮ್ಮದಿಯ ನಿಜ ಸುಖವನ್ನು ಉಂಡವರು. ಅರಿವು ಮರೆವಿನ ಸಂಶಯದ ಗೆರೆಯನ್ನು ಅಳಿಸಿ, ಹಚ್ಚಿಟ್ಟ ಹಣತೆ ಯಂತೆ ಬೆಳಗುತ್ತಾ ಬಾಳಿದವರು. ಈ ಮೇಲಿನ ಢಕ್ಕೆಯ ಬೊಮ್ಮಣ್ಣ ಶರಣರ ಪುಟ್ಟ ವಚನವನ್ನು ಇಲ್ಲಿ ಈಗ ಅನುಸಂಧಾನ ಮಾಡಿ ಹೆಚ್ಚಿನ ವಿವರ ಗಳನ್ನು ಶೋಧಿಸಿ ನೋಡೋಣ.

*ಮರೆದವರ ಮನದಲ್ಲೆಲ್ಲವೂ ಮಾರಿ.*

*ಅರಿದವರ ಮನದಲ್ಲೆಲ್ಲವೂ #ಸ್ವಯಂಜ್ಯೋತಿ.*

ಪುಟ್ಟ ವಚನದ ಈ ಎರಡು ಸಾಲುಗಳು ಅತ್ಯಂತ ಸರಳವಾಗಿ ಸಹಜವಾಗಿಯೇ ಗಹನವಾದ ವಸ್ತು ವಿಷಯಯನ್ನು ತಮ್ಮೊಳಗೆ ವಿನ್ಯಾಸವನ್ನ ಮಾಡಿ ಕೊಂಡಿರುವುದು ಸೋಜಿಗದ ಸಂಗತಿಯಾಗಿದೆ. ಅರಿವು ಶರಣರ ಬಹು ಮುಖ್ಯವಾದ ತತ್ವವಾಗಿದೆ

ಶರಣರ ತಾತ್ವಿಕತೆಯ ಪ್ರವೇಶಕ್ಕೆ ಈ ಅರಿವೆನ್ನುವ ಆಯುಧವು ಅತ್ಯಗತ್ಯವಾಗಿದೆ. ಇದರ ಬಲದಿಂದ ಮನದೊಳಗೆ ಇರುವ ಮಲಿನವನ್ನ ತೆಗೆದು ಹಾಕಿ

 ಪರಿಶುದ್ಧ ಮಾಡಿ ಕೊಳ್ಳಲು ಸಾಧ್ಯವಿದೆ. ಇದನ್ನೇ ಮರೆತವರ ಮನದಲ್ಲಿ ಅಶುದ್ಧತೆಯು ತುಂಬುವ ಜೊತೆಗೆ ಅಲ್ಲಿ ಋಣಾತ್ಮಕ ಶಕ್ತಿಯು ಶೇಖರಣೆ ಆಗಿ ಮನವು ಮಾರಿಯ ಮನೆಯಾಗಿ ಹೋಗುತ್ತ ದೆ ಎನ್ನುವರು ಢಕ್ಕೆಯ ಬೊಮ್ಮಣ್ಣ ಶರಣರು. ಈ ಅರಿವು ಹೊಂದಿರುವವರ ಮನವು ಪರಿಶುದ್ಧವು ಮತ್ತು ಧನಾತ್ಮಕ ಶಕ್ತಿಯನ್ನ ಹೊಂದುವ ಜೊತೆಗೆ

ಆ ಮನವು ಸ್ವಯಂ ಜ್ಯೋತಿಯಾಗಿ ಮನವನ್ನು ಬೆಳಗುವುದು ಎಂದು ವಚನಕಾರರು ಈ ಸಾಲಲ್ಲಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

*ಡಕ್ಕೆಯ ದನಿ ಉಳ್ಳನ್ನಕ್ಕ ನಿಶ್ಚೈಸಿಕೊಳ್ಳಿ,* *ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ.*

ಢಕ್ಕೆಯ ದನಿ ಎನ್ನುವುದು ಹೃದಯದ ಬಡಿತವನ್ನ

ಕುರಿತಾಗಿದೆ. ತಮ್ಮ ಕಾಯಕದ ಈ ಸಾಧನವನ್ನು ಬೊಮ್ಮಣ್ಣ ಶರಣರು ಎಷ್ಟೊಂದು ಉನ್ನತ ನೆಲೆ ಯಲ್ಲಿಟ್ಟು ತಮ್ಮ ಕಾಯಕವನ್ನು ಮಾಡಿದ್ದಾರೆ ಎನ್ನುವುದು ಅವರ ಪಾರಮಾರ್ಥಿಕ ಚಿಂತನೆಯ ವ್ಯಾಪ್ತಿಯ ಹಾಸು ಬೀಸನ್ನು ಬಿಂಬಿಸುತ್ತದೆ. ಇಲ್ಲಿ ಹೃದಯದ ಬಡಿತ ಇರುವಾಗಲೇ ಅಂದರೆ ಜೀವ ಹೋಗುವ ಮೊದಲೇ ಕಾಲಾಂತಕ ಭೀಮೇಶ್ವರ ಲಿಂಗವನ್ನು ಅರಿವುದಕ್ಕೆ ನಿಶ್ಚಯವನ್ನು ಮಾಡಿ ಕೊಳ್ಳಲು ಕರೆ ನೀಡಿದ್ದಾರೆ. ಕಳೆದು ಹೋದ ಕಾಲ ಮತ್ತು ಭವಿಷ್ಯದ ಕಾಲದ ಬಗ್ಗೆ ವ್ಯರ್ಥ ಚಿಂತೆಯ ಮಾಡದಿರಲು ಸೂಚಿಸುತ್ತಲೇ ವರ್ತಮಾನದ ಈ ಜೀವ ಇರುವ ಕಾಲದಲ್ಲಿಯೇ ಅರಿವು ಆಚರಣೆ ಮೂಲಕ ಲಿಂಗ ಪ್ರಜ್ಞೆಯನ್ನ ಹೊಂದಲು ನಿಶ್ಚಯ

ಮಾಡಿ ಇದೇ ಜನ್ಮವನ್ನು ಕಡೆ ಮಾಡಿ ಕೊಳ್ಳಲು ಕರೆ ಕೊಟ್ಟಿದ್ದಾರೆ. ಸಕಾಲದಲ್ಲಿ ಎಚ್ಚತ್ತುಕೊಂಡು ನಡೆಯಿರಿ ಎನ್ನುವುದು ಪ್ರಸ್ತುತ ವಚನದ ಮುಖ್ಯ ಆಶಯವಾಗಿದೆ.

                 ಅಳಗುಂಡಿ ಅಂದಾನಯ್ಯ.*