52ನೇ ಜನ್ಮದಿನದ ಸಂಭ್ರಮದಲ್ಲಿ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ

52ನೇ ಜನ್ಮದಿನದ ಸಂಭ್ರಮದಲ್ಲಿ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ

52ನೇ ಜನ್ಮದಿನದ ಸಂಭ್ರಮದಲ್ಲಿ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ.

ಮನುಷ್ಯ ತನನಲ್ಲಿರುವ ಕೆಲವು ವಿಶಿಷ್ಟ ಗುಣಗಳಿಂದಾಗಿ ಹಾಗೂ ತನನಲ್ಲರುವ ವಿಶಿಷ್ಟ ಜ್ಞಾನಶಕ್ತಿಯಿಂದಾಗಿ 

ಸಕಲ ಪ್ರಾಣಿಗಳಲ್ಲಿಯೇ ಶ್ರೇಷ್ಠನೆನಿಸಿಕೊಂಡಿದ್ದಾನೆ. ಮಾನವನಿಗೆ ಸೃಷ್ಟಿಕರ್ತ ಕೊಟ್ಟ ಶಕ್ತಿಯನ್ನು 

ಸದುಪಯೇಗಪಡಿಸಿಕೊಂಡಾಗ ಮಾನವ ಮಹಾಮಾನವನಾಗಬಲಿನೆಂಬ ಮತ್ತು 

ಮಹಾತ್ಮನಾಗಬಲ್ಲನೆಂಬದು ಜಗತ್ತಿಗೆ ಪರಿಚಯಸಿಕೊಟ್ಟವರು ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರು. ಇಂತಹ ಶರಣರು ನಡೆದಾಡಿದ 

ಕಲ್ಯಾಣ ನಾಡಿನ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ‌ ಬೇಲೂರು ಒಂದು ಐತಿಹಾಸಿಕ ಪಾವನ ನೆಲ, ಶರಣರ ಪವಿತ್ರ ಭೂಮಿಯಾಗಿದೆ.

ಇಲ್ಲಿ ಹಲವು ಮಠಗಳಿವೆ.ಅವುಗಳಲ್ಲಿ ಹನ್ನೆರಡನೆಯ ಶತಮಾನದ ಶರಣರ ಕಾಲದ ಉರಿಲಿಂ‌ಗ ಪೆದ್ದಿ ಮಠವೂ ಒಂದಾಗಿದೆ. 

ಶ್ರೀಮಠದ ಜವಾಬ್ದಾರಿ ಹೊತ್ತುಕೊಂಡು 

ಶ್ರೀ ಪಂಚಾಕ್ಷರಿ ಪೂಜ್ಯರು ಬೇಲೂರಿನ ಶ್ರೀ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿಯಾಗಿ ಸಧ್ಯ ಜನಪರ ಸೇವಾ ಕೈಂಕರ್ಯಗಳು ಮಾಡುತ್ತಾ, ಕಲ್ಯಾಣ ನಾಡಿಗೆ ಚಿರಪರಿಚಿತರಾಗಿದ್ದಾರೆ.              

ಶ್ರೀಗಳು ಬೇಲೂರಿನ ಗ್ರಾಮದಲ್ಲಿ ೦9-೦9-1974 ರಂದು

ಶೇಷಬಾಯಿ ಮತ್ತು ಶಿವಕುಮಾಸ್ವಾಮಿಗಳವರ ದಂಪತಿಗಳ ಮಗನಾಗಿ ಜನಿಸಿದವರು.

ಇವರ ಏಕೈಕ ಪುತ್ರರಾಗಿದವರು. ಇವರು ಬಸವಕಲ್ಯಾಣದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು, ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಿಗೆ ಅರ್ಪಿಸಿಕೊಂಡರು. ತರುವಾಯ ಇವರ ಸೇವಾ ಕಾರ್ಯಗಳನ್ನು ಗುರುತಿಸಿ ಬೇಲೂರಿನ ಶ್ರೀಮಠಕ್ಕೆ 

ಪೀಠಾಧಿಪತಿಗಳಾಗಿ ನೇಮಕಗೊಂಡು ಜನಪರ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಅಂತೆಯೇ ಪ್ರತಿ ವರ್ಷವೂ ಶ್ರೀ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಮಾಡುತ್ತಾ, ಭಾವೈಕ್ಯತೆಯ ಜೊತೆಗೆ ಸೌಹಾರ್ದತೆಯ ಸಂದೇಶಗಳನ್ನು ಸಾರುತ್ತಿದ್ದಾರೆ.

ಅದರಂತೆ ಪ್ರತಿವರ್ಷ ವಿಶಿಷ್ಟವಾದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಸಾಹಿತಿಗಳನ್ನು ಪ್ರೋತ್ಸಾಹಿಸಿ, ಬೆಳೆಸುತ್ತಿದ್ದಾರೆ. ಬೀದರ ಜಿಲ್ಲಾ ಗಡಿನಾಡು ಸಮ್ಮೇಳನ,ಹೈ.ಕ.ಸಾಹಿತ್ಯ ಸಮ್ಮೇಳನ, ತತ್ವಪದಕಾರರ ಸಮ್ಮೇಳನ, ಜಿಲ್ಲಾ ಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ, ದಲಿತ ಶರಣರ ಸಾಹಿತ್ಯ ಸಮ್ಮೇಳನ,ಜಾನಪದ ಸಂಭ್ರಮ, ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನ,ಹೈ.ಕ.ಮಹಿಳಾ ಸಾಹಿತ್ಯ ಸಮ್ಮೇಳನ,ಜಿಲ್ಲಾ ಶರಣ ಸಾಹಿತ್ಯ ಸಂಶೋಧನಾ ಸಮ್ಮೇಳನ, ಸಾಮಾಜಿಕ ಸಾಮರಸ್ಯ ಸಮ್ಮೇಳನ,

ಸಂವಿಧಾನ ರಕ್ಷಣಾ ಸಮ್ಮೇಳನ,ಶೋಷಿತರ ಸಾಹಿತ್ಯ ಸಮ್ಮೇಳನ,ವಿಮರ್ಶಾ ಸಾಹಿತ್ಯ ಸಮ್ಮೇಳನ,ಜಾನಪದ ಮಹಿಳಾ ಸಮ್ಮೇಳನ,ಗ್ರಂಥಾಲಯ ಸಮ್ಮೇಳನಗಳು ಇವರ ಶ್ರೀಮಠದಲ್ಲಿ ನಡೆಸಿಕೊಟ್ಟಿದ್ದಾರೆ.ಅಲ್ಲದೆ ಮಠದಲ್ಲಿ ವಿವಿಧ ರೀತಿಯ ಹದಿನೈದು ವೈಚಾರಿಕ ಸಮ್ಮೇಳನಗಳನ್ನು ಪ್ರಥಮವಾಗಿ ಆಯೋಜಿಸಿ, ದಾಖಲೆ ನಿರ್ಮಿಸಿದ್ದಾರೆ. ಪ್ರತಿ ವರ್ಷವೂ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಇಬ್ಬರೂ ಮಹನೀಯರಿಗೆ ಗುರುತಿಸಿ ಉರಿಲಿಂಗ ಪೆದ್ದಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇಲ್ಲಿಯವರೆಗೆ 41 ಜನರಿಗೆ ಪ್ರಶಸ್ತಿ ನೀಡಿರುತ್ತಾರೆ. ಇದರಂತೆ ಕಾಳವ್ವೆ ಪ್ರಶಸ್ತಿಯನ್ನು ಪ್ರತಿವರ್ಷವೂ ಒಬ್ಬರಿಗೆ ನೀಡುತ್ತಿದ್ದಾರೆ. ಜೊತೆಗೆ ವಿಶೇಷವಾಗಿ ಐದು ಜನರಿಗೆ ಗೌರವ 

ಪ್ರಶಸ್ತಿ,ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ಸೇವಾ ಪ್ರಶಸ್ತಿಗಳು ಪ್ರಧಾನ ಮಾಡುತ್ತಿದ್ದಾರೆ. ಹೀಗೆ ಇಲ್ಲಿಯವರೆಗೆ ನೂರಾರು ಸಾಧಕರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಿದಾರೆ.

ಹಾಗೆಯೇ ಶ್ರೀಮಠದಿಂದ ಹದಿನಾಲ್ಕು ಪುಸ್ತಕಗಳನ್ನು ಪ್ರಕಟಿಸಿ, ಅಕ್ಷರ ಪ್ರೀತಿಯ ದಾಸೋಹವನ್ನು ಸರ್ವರಿಗೂ ಉಣಬಡಿಸುತ್ತಿದ್ದಾರೆ. ಇನ್ನು 

ಗಡಿ ನಾಡು ಭಾಗದಲ್ಲಿ ಕನ್ನಡ ಕಟ್ಟುವ,ಸಾಹಿತಿಗಳಿಗೆ ಮುಕ್ತ ವೇದಿಕೆ ಕಲ್ಪಿಸಿ, ಅವರುಗಳನ್ನು ಬೆಳೆಸುವ ಕಾಯಕ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಂದಹಾಗೆ ಶ್ರಿಮಠಕ್ಕೆ ಯಾವುದೇ ಆಸ್ತಿ,ಅಂತಸ್ತು ಇಲ್ಲದೇ ಇದ್ದರೂ ಸಹ ಅನೇಕ ಜನಪರ,ರೈತಪರ, ಸಾಹಿತಿಗಳ ಪರವಾಗಿ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಸರ್ವರಿಗೂ ಪಂಚಾಕ್ಷರಿ ಶ್ರೀಗಳು ಪ್ರೇರಣದಾಯಕರಾಗಿದ್ದಾರೆ.  

ಶ್ರೀಗಳ ಸೇವೆ: ಶ್ರೀ ಮಠದಲ್ಲಿ ಬಸವಾದಿ ಶರಣರ, ಉರಿಲಿಂಗಪೆದ್ದಿಗಳು ಮತ್ತು ಕಾಳವ್ವೆಯ ಜೀವನವು ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಪ್ರತಿನಿತ್ಯವೂ ಚಾಚೂ ತಪ್ಪದೆ ಸಾರುತ್ತಿದ್ದಾರೆ. ವಿಶೇಷವಾಗಿ ಉರಿಲಿಂಗಪೆದ್ದಿ ಅವರ ವಚನಗಳು ಶರಣರ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿ, ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದಂತೆ ಈಗಿನ ಶ್ರೀಗಳು ಸಮಾನತೆಗಾಗಿ ದುಡಿಯುತ್ತಿದ್ದಾರೆ. ಉರಿಲಿಂಗ ಪೆದ್ದಿ ಶರಣರ ವಚನಗಳು ಕೇವಲ ಧಾರ್ಮಿಕ ವಿಚಾರಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಎಲ್ಲ ವರ್ಗದ ಜನರ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರೇರಣೆ ನೀಡಿದವು. ಇದರಂತೆ ಈಗಿನ ಪೀಠಾಧಿಪತಿಗಳು ಸೇವಾ ಕೈಂಕರ್ಯಗಳು ಮಾಡುತ್ತಿದ್ದಾರೆ.

52ನೇ ಜನ್ಮದಿನದ ಸಂಭ್ರಮದಲ್ಲಿ ಶ್ರೀಗಳು - ಪರಮ ಪೂಜ್ಯ ಪಂಚಾಕ್ಷರಿ ಶ್ರೀಗಳವರು 52ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ನಾಳೆ ಅಂದರೆ 09-09-2025 ರಂದು ಬಸವಕಲ್ಯಾಣದ ತ್ರಿಪುರಾಂತದಲ್ಲಿ ಅವರ ಭಕ್ತವರ್ಗದವರಿಂದ ಶ್ರೀಗಳ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಲಿದ್ದಾರೆ ಎಂದು ಹಾರೈಸುವೆ.

ಲೇಖಕ -ಸಂಗಮೇಶ ಎನ್ ಜವಾದಿ 

ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ,ಬೀದರ ಜಿಲ್ಲೆ.