ಹುಣಸಿಹಡಗಿಲ ಬಸವಲಿಂಗ ಶರಣರ ಲೀಲೆ

ಹುಣಸಿಹಡಗಿಲ ಬಸವಲಿಂಗ ಶರಣರ ಲೀಲೆ

ಹುಣಸಿಹಡಗಿಲ ಬಸವಲಿಂಗ ಶರಣರ ಲೀಲೆ 

“ ಹುಣಸಿಹಡಗಿಲ ಬಸವಲಿಂಗ ಶರಣರ ೨೦ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಈ ಲೇಖನ”

ಆದಿಯಲ್ಲಿ ಗುರು ಬೀಜವಾದ ಪಿಂಡಕ್ಕೆ ಅನಾದಿ ಎಂಬುದನು

ಒಬ್ಬರು ತಿಳಹಲರುವೆ

ಆದಿ ಕಾಯ-ಅನಾದಿ ಪ್ರಾಣವಾಗಿಪ್ಪ ಯೋಗ ಭೇದಿಸಿ

ತಾನೇ ತಿಳಿದು ನೋಡಲು

ಅಹಂವೆಂಬುದು ತಾನೇ ಸತ್ಯನೋಡಾ

ಗುಹೇಶ್ವರ ಲಿಂಗದ ನೀಲವು ಹೇಳಿ ಕೂಡಿಹನೆಂದರೆ,

ಅಸಾದ್ಯ ಕಾಣ ಸಿದ್ದರಾಮಯ್ಯ ಪಾಪ ಪುಣ್ಯಗಳೆಂಬ ಕರ್ಮದ್ವಂಗಳಿಂದ ನಿರ್ಲಿಪ್ತ ಪರಿಪೂರ್ಣ ವೈರಾಗ್ಯ ಶಾಲೆ ಮಾಯೆಯಂಬುವದನ್ನು ಜಯಿಸಿದ ವೀರ ವಿರಕ್ತ ಅಂತರ್ಮುಖಿ ಜೀವನಮುಕ್ತ ನಿರಂಜನಮೂರ್ತಿ ಜಗಜಂಗಮ ಹಾಗೂ ವೀರಶೈವರ ಇತಿಹಾಸದಲ್ಲಿಯೇ ಅದ್ವಿತೀಯ ಮಹಾಪುರಷರೆನಿಸಿಕೊಂಡ ಅಲ್ಲಮಪ್ರಭು ಪ್ರಭುದೇವರು. ಇವರ ಅತವಾರಿಪುರುಷರೆನಿಸಿಕೊಂಡ ಬಸವಲಿಂಗ ಶರಣರು.

ಶಿವನ ಸ್ವರೂಪಿಯಾದ ಬಸವಲಿಂಗ ಜನಿಸಿದ ಒಂದು ವರ್ಷ ಆರು ತಿಂಗಳಲ್ಲಿ ತಂದೆ ಸಿದ್ರಾಮಪ್ಪರು ಸ್ವರ್ಗಸ್ಥರಾದರು ತಾಯಿ ಶಿವಮ್ಮರು ಪತಿಯನ್ನಗಲಿ ದುಃಖಿಸುತ್ತ ಕಣ್ಣಿರಲ್ಲಿ ಕೈತೊಳೆದಳು. ಇಬ್ಬರು ಮಕ್ಕಳಾದ ನಾಗಮ್ಮ ಬಸವಲಿಂಗ ಇವರ ಜೋಪಾನ ಮಾಡುವ ಭಾರ ಹೊತ್ತಳು. ಮಗ ಬಸವಲಿಂಗನಿಗೆ ಚಿಕ್ಕವನಿದ್ದಾಗಲೇ ಬಸವ ಪಟ್ಟಣದ ನರಸಪ್ಪ ಸಂಗಮ್ಮಳ ದಂಪತಿಯ ಸುಪತ್ರಿಯಾದ ಶರಣಮ್ಮಳೊಂದಿಗೆ ಚಿಕ್ಕವನಿದ್ದಾಗಲೇ ಮದುವೆ ಮಾಡಿದರು.

     ಮುಂದೆ ಬಸವಲಿಂಗ ಬೆಳೆದು ದೊಡ್ಡವನಾಗಿ ಎಂಟು ವರ್ಷ ತುಂಬಿತು, ಆವಾಗ ತಾಯಿ ಶಿವಮ್ಮರಿಗೆ ವಿಪರಿತ ಹೊಟ್ಟೆ ಬೇನೆ ಕಷ್ಟ ತಾಳಲಾರದೇ ಒಂದೆ ಸವನೆ ಹೊರಳಾದುತ್ತಿದ್ದಳು. ಹೊರಗಿನಿಂದ ಮಗ ಬಸವಲಿಂಗನು ಓಡಿ ಬಂದು ಅವ್ವ ನನಗೆ ಮಲೆ ಕೊಡಿಸಮ್ಮ ಎಂದು ಹಟ ಮಾಡುತ್ತಿದ್ದನು, ಆ ವೇಳೆ ಸಿಟ್ಟಿನಿಂದ ಎಲ್ಲಿಯೆ ಮಲೆ ಕುಡಿಸಲಿ ನನ್ನ ಹೊಟ್ಟಿ ಬೇನೆ ಹೆಚ್ಚಾಗಿದೆ, ಏಳಲು ಸಹ ಬಾರದಾಗಿದೆ, ನಾನು ಸಾಯಿತ್ತಿರುವಾಗ ನಿನಗೆ ಎಲ್ಲಿಂದ ಮಲೆ ಕೊಡಲಿ ಎಂದು ದುಃಖಿಸುತ್ತಿರುವಾಗ ಮಗ ಬಸವಲಿಂಗ ಅವ್ವಾ ನನಗೆ ಮಲೆ ಕುಡಿಸಿದರೆ ನಿನ್ನ ಹೊಟ್ಟೆ ಬೇನೆ ಪೂರ್ತಿ ಕಡಿಮೆ ಮಾಡುತ್ತೇನೆಂದು ಹೇಳಿದಾಗ ಯಾಕಾಗಲ್ದು ಕಂದ ಬಾ ಮಗ ಅಂತ ಹತ್ತಿರ ಕರೆದಾಗ ಬಸವಲಿಂಗ ತಾಯಿಯ ಹೊಟ್ಟೆ ಮೇಲೆ ಮೂರು ಸಲ ಕೈಯಾಡಿಸಿ ನಿನ್ನ ಹೊಟ್ಟೆ ಬೇನೆ ಸುಟ್ಟೊಹಗಲಿ ಅಂತ ಮೂರು ಸಲ ಹೊಟ್ಟೆಯ ಮೇಲೆ ಕೈ ಎಳೆದಾಗ ತಾಯಿಯ ಹೊಟ್ಟೆಯ ಬೇನೆ ಮಾಯವಾಗಿ ಹೋಯಿತು. ತಾಯಿ ಶಿವಮ್ಮರು ಎದ್ದು ಕುಳಿತು ಹರ್ಷದಿಂದ ಮಗನನ್ನೆತ್ತಿ ಮುದ್ದಾಡಿಸಿ ಹಾಡಿಹರಿಸಿ ಸಂತೋಷದಿಂದ ಮಲೆ ಕುಡಿಸಿದಳು. ಬಸವಲಿಂಗರು ಹೀಗೆ ಅನೇಕ ಪವಾಡಗಳು ಮಾಡಿದರು. ಮನೆಯಲ್ಲಿ ಇದ್ದ ಸತ್ತ ಆಕಳ ಕರುವನ್ನು ಮರಳಿ ಜೀವ ಪಡಿಸಿದರು ಬಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಹುಡುಗನಿಗೆ ಮರಳಿ ಪ್ರಾಣ ಕೊಡಿಸಿದರು. ಕಣ್ಣಿಲ್ಲದವರಿಗೆ ಕಣ್ಣು ಕೊಡಿಸಿದರು, ಬಂಜೆಯವರಿಗೆ ಮಕ್ಕಳ ಭಾಗ್ಯ ಕೊಡಿಸಿದರು ಇಂಥಹ ಅನೇಕ ಪವಾಡ ಮಾಡಿದ ಹುಣಸಿ ಹಡಗಿಲ ಶರಣರು ಸಂಸಾರದಲ್ಲಿದ್ದುಪಾರಮಾರ್ಥವನ್ನು ಜೈಯಿಸಿದ ಪರಮಾತ್ಮರು ಇವರಿಗೆ ಸಿದ್ದರಾಮ, ಗುಂಡೇರಾಯ, ಶಿವಶರಣರೆಂಬ, ಮೂವರು

ಸುಪುತ್ರರು ಹಾಗೂ ನಾಲ್ಕು ಜನ ಸುಪುತ್ರಿಯರು.ಒಂದು ದಿವಸ ಬುಧವಾರ ಸಾಯಂಕಾಲ ಮೈಯಲ್ಲಿ ಆರಾಮವಿರಲ್ಲಿಲ, ಭಕ್ತ ಜನರೆಲ್ಲ ರಾತ್ರಿ ಕೂಡಿ ಶರಣಬಸಲಿಂಗರ ಹತ್ತಿರ ಬಂದು ಕುಳಿತರು. ಆಗ ಬಸವಲಿಂಗ ಶರಣರು ಈ ಹಲೋಕವನ್ನು ತ್ಯಜಿಸಿ ಸ್ವರ್ಗ ಲೋಕದಡೆಗೆ ನಡೆದಿದರು. ದಿನಾಂಕ: ೨೬-೮-೨೦೦೪ ರಂದು ರಾತ್ರಿ ಬುಧವಾರ ೧೨:೦೫ (ಹನ್ನೆರಡು ಗಂಟೆ ಐದು ನಿಮಿಷಕ್ಕೆ)

ಹುಣಸಿ ಹಡಗಿಲ ತ್ಯಜಿಸಿ ಸ್ವರ್ಗ ಲೋಕಕ್ಕೆ ಪ್ರಯಾಣ ಬೆಳಿಸಿದರು, ಅಂದು ಶರಣರು ನುಡಿದಂತೆ ಗುರುವಾರ ದಿವಸ ಗದ್ದಿಗೆ ಕಟ್ಟೆಯ ಮೇಲೆ ಕುಳಿತುಕೊಂಡು ಪ್ರಭುದೇವರ ಸನ್ನಿಧಾನದಲ್ಲಿ ಎಲ್ಲಾ ಭಕ್ತ ವೃಂದದಲ್ಲಿ ಕೂಡಿಕೊಂಡು ಎಲ್ಲಾ ಭಕ್ತರಿಗೆ ದರ್ಶನ ಕೊಟ್ಟರು.ಇಂಥಹ ಶರಣರನ್ನು ಈ ನಾಡಿನಲ್ಲಿ ಈ ಭೂಮಿಯ ಮೇಲೆ ಭಕ್ತರುರೆಲ್ಲ ಅವರನ್ನು ಕಂಡದ್ದು ಅವರ ದರ್ಶನ್ ಪಡೆದದ್ದು ನಮ್ಮ ನಿಮ್ಮೆಲ್ಲರ ಪೂಣ್ಯ, ಇವರು ಈ ನಾಡಿನಲ್ಲಿ ನಡೆದಾಡುವ ದೇವರಾದರು. ಇವರ ನಂತರ ಇವರ ಸುಪುತ್ರರಾದ ಪೂಜ್ಯ ಶ್ರೀ ಗುಂಡೇರಾಯ ಮುತ್ಯಾರವರು ಅವತಾರ ತೊಟ್ಟು ಅವರು ಹಾಕಿಕೊಟ್ಟ ಮಾರ್ಗದಂತೆನಡೆದರು ಪೂಜ್ಯ ಶ್ರೀ ಗುಂಡೇರಾಯ ಮುತ್ಯಾರವರು.

                             ಹಣಮಂತರಾವ. ಬಿ. ಮಂಗಾಣಿ

                               ( ಸಾಹಿತಿಗಳು ಕಲಬುರಗಿ)