ಪುರಸಭೆ ಅಧ್ಯಕ್ಷರಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ಸಾಗರ ಖಂಡ್ರೆಗೆ ಅಭಿವೃದ್ಧಿಗೆ ಪ್ರತ್ಯೆಕ ಮನವಿ ಸಲ್ಲಿಕೆ
ಪುರಸಭೆ ಅಧ್ಯಕ್ಷರಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ಸಾಗರ ಖಂಡ್ರೆಗೆ ಅಭಿವೃದ್ಧಿಗೆ ಪ್ರತ್ಯೆಕ ಮನವಿ ಸಲ್ಲಿಕೆ
ಚಿಂಚೋಳಿ ಪುರಸಭೆ ಅಭಿವೃದ್ಧಿಗೆ 30 ಕೋಟಿ ಅನುದಾನ ಬಿಡುಗಡೆಗೆ ಕೋರಿಕೆ
ಚಿಂಚೋಳಿ :ಪುರಸಭೆ ವ್ಯಾಪ್ತಿಯ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ 30 ಕೋಟಿ ರು ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಪುರಸಭೆ ಅಧ್ಯಕ್ಷ ಆನಂದ ನಾಗೇಂದ್ರಪ್ಪ ಟೈಗರ್ ಅವರು ಮನವಿ ಸಲ್ಲಿಸಿದ್ದಾರೆ.
ಚಿಂಚೋಳಿ-ಚಂದಾಪೂರ ಅವಳಿ ಪಟ್ಟಣದ ವಾರ್ಡಗಳಿಗೆ ಸಿ.ಸಿ ರಸ್ತೆ, ಚರಂಡಿ, ವಿದ್ಯುತ್ ಮತ್ತು ನೀರು ಸರಬರಾಜು ಸೇರಿ ಇತರೆ ಮೂಲಭೂತ ಸೌಕರ್ಯ ಒದಿಗಿಸಲು ಪುರಸಭೆಯಲ್ಲಿ ಅನುದಾನ ಕೊರೆತೆಯಿಂದಾಗಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ಒದಗಿಸಲು ಕಷ್ಟಕರವಾಗುತ್ತಿದೆ. ನೀರು ಶುದ್ದೀಕರಣ ಘಟಕ, ವೀರೇಂದ್ರ ಪಾಟೀಲ ಶಾಲೆಯ ಮುಖ್ಯರಸ್ತೆಯಿಂದ ಚಂದಾಪೂರದ ತಾಂಡೂರ ವೃತ್ತದ ಮುಖ್ಯರಸ್ತೆವರೆಗೆ ಡಿವೈಡರ್ ರಸ್ತೆ ನಿರ್ಮಾಣ, ತಾಂಡೂರ ಕ್ರಾಸ್ ದಿಂದ ಬೀದರ್ ಕ್ರಾಸ್ ವರೆಗೆ ಎರಡು ಬದಿ ಆರ್ ಸಿಸಿ ಮಳೆ ನೀರು ಚರಂಡಿ ನಿರ್ಮಾಣ, ರಸ್ತೆ ಮಧ್ಯ ವಿದ್ಯುತ್ ಕಂಬ ಹಾಗೂ ಬೀದಿ ದೀಪಗಳು ಅಳವಡಿಸಲು, ಗ್ರಂಥಾಲಯದ ಅಭಿವೃದ್ಧಿ ಸೇರಿದಂತೆ ವ್ಯಾಪ್ತಿಯ ವಿವಿಧ ಸೌಲಭ್ಯಗಳಿಗೆ 30 ಕೋಟಿ ರು ಅನುದಾನ ಬಿಡುಗಡೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕ್ಷೇತ್ರದ ಸಂಸದ ಸಾಗರ ಈಶ್ವರ ಖಂಡ್ರೆ ಅವರ ಸಂಸದರ ಅನುದಾನ ಬಿಡುಗಡೆಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಪುರಸಭೆ ಅಭಿವೃದ್ಧಿಗೆ ಹಣ ಬಿಡುಗಡೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮನವಿಗೆ, ಸಚಿವರು ಹಾಗೂ ಸಂಸದರು ಪುರಸಭೆ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸುವ ಸಕರಾತ್ಮಕ ಸ್ಪಂದೆನೆಯನ್ನು ನೀಡಿದ್ದಾರೆ ಎಂದು ಅಧ್ಯಕ್ಷ ಆನಂದ ಟೈಗರ್ ತಿಳಿಸಿದ್ದಾರೆ.