ಆಳಂದ ಕಾಂಗ್ರೆಸ್‌ಗೆ ಶಾಕ್: ಮುಸ್ಲಿಂ ನಾಯಕರು ಬಿಜೆಪಿ ಸೇರ್ಪಡೆ"

ಆಳಂದ ತಾಲೂಕಿನಲ್ಲಿ ರಾಜಕೀಯ ಹೊಸ ಬೀರುಗಾಳಿ
ಅಲ್ಪಸಂಖ್ಯಾತ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
ಸಲೀಂ ಜಮಾದಾರ್ ಹುಟ್ಟುಹಬ್ಬದ ಸಂದರ್ಭದಲ್ಲೇ ಬೃಹತ್ ಸೇರ್ಪಡೆ ಕಾರ್ಯಕ್ರಮ
ಆಳಂದ, ಆ.7:ಆಳಂದ ತಾಲೂಕಿನ ರಾಜಕೀಯ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸುವ ಘಟನೆಯೊಂದು ಬುಧವಾರ ನಡೆದಿದೆ. ಟಿಪ್ಪು ಸುಲ್ತಾನ್ ಚೌಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದು, ಈ ಬೆಳವಣಿಗೆ ಸ್ಥಳೀಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಹಾಗೂ ಅವರ ಪುತ್ರ ಹರ್ಷನಂದ್ ಗುತ್ತೇದಾರ ಅವರ ಸಮ್ಮುಖದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಇದೇ ಸಂದರ್ಭ ಸಲೀಂ ಜಮಾದಾರ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ ಅವರ ನಾಯಕತ್ವದಲ್ಲಿ ಈ ಬೃಹತ್ ಸೇರ್ಪಡೆ ನಡೆಯಿದ್ದು, ಕಾಂಗ್ರೆಸ್ ಪಕ್ಷದ ಬುನಾದಿಗೆ ಆಘಾತ ನೀಡಿದಂತಾಗಿದೆ. ಈ ಕುರಿತು ಅಳಂದ ತಾಲೂಕಿನ ಸಮಾಜಸೇವಕ ಮಹಿಂದ್ರ ಚಿರಸಾಗರ ಅವರು ಮಾತನಾಡಿ, "ಈ ಸೇರ್ಪಡೆ ಆಳಂದ ರಾಜಕೀಯಕ್ಕೆ ನೂತನ ತಿರುವು ನೀಡುವ ಸಾಮರ್ಥ್ಯ ಹೊಂದಿದೆ. ಮುಂಬರುವ ದಿನಗಳಲ್ಲಿ ಇದರಿಂದ ಇನ್ನಷ್ಟು ಬದಲಾವಣೆಗಳು ಸಾಧ್ಯ" ಎಂದು ಮಾಧ್ಯಮದವರೊಂದಿಗೆ ಅಭಿಪ್ರಾಯಪಟ್ಟರು.
ವರದಿ: ಜಟ್ಟಪ್ಪ ಎಸ್. ಪೂಜಾರಿ
(KKP ಪತ್ರಿಕೆ ವಿಶೇಷ ವರದಿ)