ಪುರಾಣ ಪ್ರವಚನಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಮಹಾಲಿಂಗಯ್ಯ ಶಾಸ್ತ್ರಿಗಳು

ಪುರಾಣ ಪ್ರವಚನಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಮಹಾಲಿಂಗಯ್ಯ ಶಾಸ್ತ್ರಿಗಳು
ಪುರಾಣ, ಪ್ರವಚನಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಆದ್ದರಿಂದ ಶಿವಶರಣರ ಜೀವನ ಚರಿತ್ರೆ ಜತೆ ಅವರ ಆಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ವೀರೇಶ್ವರ ಪುಣ್ಯಾಶ್ರಮ ಗದಗದ ವೇದಮೂರ್ತಿ ಮಹಾಲಿಂಗಯ್ಯ ಶಾಸ್ತ್ರಿಗಳು ಹೇಳಿದರು
ಅವರು ಮಹಾಶಿವರಾತ್ರಿ ಪ್ರಯುಕ್ತ ನಗರದ ಐವಾನ್ ಎ ಶಾಹಿ ಬಡಾವಣೆಯ ಸಿಗಣಾಪೂರ ಶ್ರೀ ಮಹಾದೇವ ದೇವಸ್ಥಾನದಲ್ಲಿ ನಡೆದಿರುವ ಶಿವ ಪುರಾಣದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಇಂದಿನ ಈ ಆಧುನಿಕ ಜೀವನದಲ್ಲಿ ಟಿ ವಿ ಹಾಗೂ ಮೋಬೈಲ್ ದಾಸರಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಅತ್ಯಂತ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ತಮ್ಮಲ್ಲಿರುವ ದುಶ್ಚಟಗಳನ್ನು ದೂರ ಮಾಡಿ ಆರೋಗ್ಯವಂತ ಮನುಷ್ಯನಾಗಿ ಕುಟುಂಬದೊಂದಿಗೆ ಉತ್ತಮ ಜೀವನ ಸಾಗಿಸಬೇಕು. ಜತೆಗೆ ನೀವು ದುಡಿಯವ ದುಡಿಮೆಯಲ್ಲಿ ದಾನ ಧರ್ಮ ಮಾಡುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ತಮ್ಮಲ್ಲಿರುವ ದುಶ್ಚಟಗಳನ್ನು ದೂರ ಮಾಡಿ ಆರೋಗ್ಯವಂತ ಮನುಷ್ಯನಾಗಿ ಕುಟುಂಬದೊಂದಿಗೆ ಉತ್ತಮ ಜೀವನ ಸಾಗಿಸಬೇಕು. ಜತೆಗೆ ನೀವು ದುಡಿಯವ ದುಡಿಮೆಯಲ್ಲಿ ದಾನ ಧರ್ಮ ಮಾಡುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳೆ ಆಸ್ತಿಯನ್ನಾಗಿ ಮಾಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಾದೇವ ದೇವಸ್ಥಾನ ಪ್ರಮುಖ ಅರ್ಚಕರಾದ ವೇದಮೂರ್ತಿ ಚನ್ನವೀರಯ್ಯ ಮಠಪತಿ ಮಾತನಾಡಿ ಐತಿಹಾಸಿಕ 18 ಪುರಾಣಗಳಲ್ಲಿ ಶಿವ ಮಹಾ ಪುರಾಣವು ಒಂದಾಗಿದ್ದು ಈ ಪವಿತ್ರ ಮಹಾಶಿವರಾತ್ರಿ ನಿಮಿತ್ತ ಬಡಾವಣೆಯ ಜನತೆ ದಿನಾಲೂ ಪುರಾಣ ಆಲಿಸಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವೀರೇಶ್ವರ ಪುಣ್ಯಾಶ್ರಮ ಗದಗದ ಗವಾಯಿಗಳಾದ ಚನ್ನಬಸವ ಬಹಮನಿ,ತಬಲಾ ವಾದಕರಾದ ಶಿವಕುಮಾರ್ ಕೊಡ್ಲಿ ಇವರಿಂದ ನಿರಂತರ ಸಂಗೀತ ಸೇವೆ ಜರುಗಲಿದೆ. ಹಿರಿಯರಾದ ಶಿವಶರಣಪ್ಪ ಪಾಟೀಲ್ ನಂದಿ ಸೇವೆ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಬಡಾವಣೆಯ ಪ್ರಮುಖರಾದ ಸತೀಶ್ ಪಾಟೀಲ್ ಕಮಲಾಪೂರ, ಶಿವರಾಜ್ ಪಾಟೀಲ್ ಮಹಾಗಾಂವ,ಡಾ ಶಿವಾನಂದ ಇಂಗಳೇಶ್ವರ, ಈರನಗೌಡ ಪಾಟೀಲ್ ದೇವರ ಹಿಪ್ಪರಗಿ, ರಿಷೀತ ರಾಂಪೂರೆ, ಮಲ್ಲಿಕಾರ್ಜುನ ನಿಗಡಿ ಉಪಸ್ಥಿತರಿದ್ದರು ಸಿದ್ದು ಪಾಟೀಲ್ ಕುಮಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.