ಸಿಂದಗಿ ಗ್ರಾಮಕ್ಕೆ ನಿರಂತರ ಜ್ಯೋತಿ: ಡಬರಾಬಾದ್ ಕ್ರಾಸ್‌ನಲ್ಲಿ ಫೀಡರ್ ಉದ್ಘಾಟನೆ

ಸಿಂದಗಿ ಗ್ರಾಮಕ್ಕೆ ನಿರಂತರ ಜ್ಯೋತಿ: ಡಬರಾಬಾದ್ ಕ್ರಾಸ್‌ನಲ್ಲಿ ಫೀಡರ್ ಉದ್ಘಾಟನೆ
ಕಲಬುರಗಿ:ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ ನಿಯಮಿತ (GESCOM) ಗ್ರಾಮೀಣ ವಿಭಾಗ-1 ಹಡಗಿಲ ಹಾರುತಿ ಶಾಖೆಯ ಸಿಂದಗಿ ಗ್ರಾಮದ “ನಿರಂತರ ಜ್ಯೋತಿ ಫೀಡರ್” ಅನ್ನು ಡಬರಾಬಾದ್ ಕ್ರಾಸ್‌ನಲ್ಲಿರುವ ಕವಿಪ್ರನಿನಿ 110/11 ಕೆ.ವಿ ಉಪಕೇಂದ್ರದಲ್ಲಿ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಮುರುಗೇಶ ಮಠಪತಿ, ಸಹಾಯಕ ಅಭಿಯಂತರ ಸಿದ್ದಿರಾಜು, ಶಾಖಾಧಿಕಾರಿ ಚಂದ್ರಕಾಂತ ಬರಡಿ, ಜೊತೆಗೆ ಗುರುಲಿಂಗಪ್ಪ ಪಾಟೀಲ, ದೇವಾನಂದ, ಸಿದ್ದರಾಮ ಮೇಲಿನಮನಿ ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಫೀಡರ್ ಪ್ರಾರಂಭದೊಂದಿಗೆ ಸಿಂದಗಿ ಗ್ರಾಮಕ್ಕೆ 24 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಖಚಿತವಾಗಲಿದೆ. ಗ್ರಾಮೀಣ ಭಾಗದ ಬೆಳವಣಿಗೆಯಲ್ಲಿ ಇದು ಮಹತ್ತರ ಹೆಜ್ಜೆಯಾಗಿದ್ದು, ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ.