ಗು.ವಿ.ವಿ ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಬೃಹತ್ ಪ್ರತಿಭಟನೆ ಎಚ್ಚರಿಕೆ

ಗು.ವಿ.ವಿ ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಬೃಹತ್ ಪ್ರತಿಭಟನೆ ಎಚ್ಚರಿಕೆ
ಕಲಬುರಗಿ, ಜೂನ್ 18 ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಒದಗಿಕೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಿಗೆ ರಮೆಶ ಲಂಡನಕರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಲ್ಲಿ – ಲೈಬ್ರರಿ ಸಮಯ ನಿಯಮಿತಗೊಳಿಸುವುದು, ವಸತಿ ನಿಲಯಗಳಲ್ಲಿ ವಿದ್ಯುತ್, ಊಟ, ಶೌಚಾಲಯದ ಸೌಲಭ್ಯ ಸುಧಾರಿಸುವುದು, ಸೆಕ್ಯೂರಿಟಿ ವ್ಯವಸ್ಥೆ ಹೆಚ್ಚಿಸುವುದು, ಅತಿಥಿ ಉಪನ್ಯಾಸಕರ ಬದಲಿಗೆ ಶಾಶ್ವತ ಉಪನ್ಯಾಸಕರ ನೇಮಕ, ಸಂಶೋಧನಾ ವಿದ್ಯಾರ್ಥಿಗಳ ಫೆಲೋಶಿಪ್ ಹೆಚ್ಚಿಸುವುದು, ಮತ್ತು ಪರೀಕ್ಷಾ ಇಲಾಖೆಯಲ್ಲಿ ಲಂಚ ತಡೆಯುವ ಕ್ರಮಗಳು ಸೇರಿದಂತೆ ಒಟ್ಟು 18 ಬೇಡಿಕೆಗಳನ್ನು ಹೊಂದಿವೆ.
ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಮನವಿಗೆ ಸ್ಪಂದನೆ ಇಲ್ಲದಿದ್ದಲ್ಲಿ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳ ಹಿತಕ್ಕಾಗಿ ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಆನಂದ್ ಮೇತ್ರಿ ಅವರು ಹೇಳಿದ್ದಾರೆ ವಿದ್ಯಾರ್ಥಿಗಳಾದ , ಚಂದ್ರಕಾಂತ ಸಂಗೋಳಗಿ, ಅಣವೀರಗೌಡ ಬಿರಾದಾರ್, ಸಂತೋಷಕುಮಾರ ಎಸ್.ಪಿ, ರಾಚಯ್ಯ ಸ್ವಾಮಿ ಹಿರೇಮಠ, ಅಭಿಷೇಕ್ ಗಾಯಕವಾಡ ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-