ನಾಡು ಕಂಡ ರಾಜಕಾರಣಿ ಶಾಂತವೇರಿ ಗೋ ಪಾಲಗೌಡರು..

ನಾಡು ಕಂಡ ರಾಜಕಾರಣಿ ಶಾಂತವೇರಿ ಗೋ ಪಾಲಗೌಡರು..
ರಾಜಕಾರಣ ಹಾಗೂ ರಾಜಕಾರಣಿ ನಡುವೆ ನಿಕಟ ಸಂಬಂಧವಿದೆ. ರಾಜಕಾರಣ ಜನಸಾಮಾನ್ಯರ ಬಡವರ ದೀನದಲಿತರ ರೈತರ ಮಹಿಳೆಯರ ಪರವಾಗಿ ಕೆಲಸ ಮಾಡುವ ರಾಜಕಾರಣಿಯೇ ಜನನಾಯಕ ಎ೦ದು ಕರೆಸಿಕೊಳ್ಳುತ್ತಾನೆ. ರಾಜಕಾರಣ ನಿಂತ ನೀರಲ್ಲ ಅದು ನಿರ೦ತರ ಸಾಗುತ್ತದೆ.ಎಸ್.ನಿಜಲಿಂಗಪ್ಪ ಎಚ್.ಕೆ. ವೀರಣ್ಣಗೌಡರು ಕೆ.ಸಿ ರೆಡ್ದಿ ರಾಮಚಂದ್ರ ವೀರಪ್ಪ.ನಜೀರ ಸಾಬ ಮಹಾದೇವಪ್ಪ ಪಟ್ಟಣ. ದೇವರಾಜ ಅರಸ ಹೆಚ್.ಡಿ.ದೇವೇಗೌಡರು ಹೀಗೆ ಹತ್ತು ಹಲವು ರಾಜಕಾರಣಿಗಳ ಸಾಲಿನಲ್ಲಿ ನಿಲ್ಲುವ ಅಪರೂಪದಲ್ಲಿ ಅಪರೂಪದ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಗ ಗ್ರಾಮದ ರೈತಾಪಿ ಕುಟುಂಬದಲ್ಲಿ 14 ಮಾರ್ಚ್ 1923 ರಲ್ಲಿ ಜನನವಾಯಿತು. ತಂದೆ ಕೊಲ್ಲುರಯ್ಯಾ ಗೌಡ ತಾಯಿ ಶೇಷಮ್ಮರ ಮುದ್ದಿನ ಮಗ ಶಾಂತವೇರಿ ಗೋಪಾಲಗೌಡರು ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಕಾಗೋಡು ರೈತ ಸತ್ಯಾಗ್ರಹದ ಪ್ರೇರಣೆಯಿಂದ ಸಮಾಜವಾದಿ ಪಕ್ಷದ ವತಿಯಲ್ಲಿ ಭೂ ಹೀನ ಮತ್ತು ಕೃಷಿ ಕೂಲಿಕಾರರ ಪರವಾಗಿ ಹೋರಾಟ ಮಾಡಿದರು. ಅದೇ ರೀತಿ ಕರ್ನಾಟಕ ಏಕೀಕರಣ ರಾಜಧನ ರದ್ದತಿ ಭೂ ಸುಧಾರಣೆ ಆಡಳಿತದಲ್ಲಿ ಕನ್ನಡ ಅನುಷ್ಟಾನ ಗೋವಾ ವಿಮೋಚನೆ ಕಾನೂನು ಭಂಗ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಾಂತವೇರಿ ಗೋಪಾಲಗೌಡರು ರಾಜ್ಯ ವಿಧಾನ ಸಭೆಗೆ ಮೂರು ಸಲ ಶಾಸಕರಾಗಿ ಆಯ್ಕೆಯಾದರು. ಶಾಸನ ಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಇಲ್ಲದ ಪ್ರತಿಯನ್ನು ಹರಿದು ತುಳಿದರು ಮಂತ್ರಿ ಮಾನ್ಯರ ಅವಿವೇಕ ಮತ್ತು ಅಪ್ರಮಾಣಿಕತೆಯನ್ನು ಸಹಿಸದೆ ನೈತಿಕ ಸಿಟ್ಟಿನಿಂದ ಮೈಕ್ ಮುರಿದರು ಗೋಪಾಲಗೌಡರು ತಮ್ಮ 29 ರ ವಯಸ್ಸಿನಲ್ಲಿ ಅಂದಿನ ಮೈಸೂರು ರಾಜ್ಯದ ಮೊದಲ ಮಹಾ ಚುನಾವಣೆಗೆ. ಶಿವ ಮೊಗ್ಗ ಜಿಲ್ಲೆಯ ಸಾಗರ ಹೊಸನಗರ ಮತಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧೆಸಿದರು. ಅವರ ಪ್ರತಿಸ್ಪರ್ಧೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್ ಬದರಿ ನಾರಾಯಣ ಆಯ್ಯಂಗಾರರು ಆದರೆ ಚುನಾವಣೆಗೆ ಠೇವಣಿ ಕಟ್ಟಲು ಹಣ ಇರಲಿಲ್ಲ ಅಭಿಮಾನಿಗಳು ಹಾಗೂ ಮಿತ್ರರು ಹಣ ಸಂಗ್ರಹ ಮಾಡಿ ಠೇವಣಿ ಹಣ ಕಟ್ಟಿದರು.ಬಡ ಗೇಣಿದಾರರು ಕೂಲಿಕಾರರು ಮಧ್ಯಮ ವರ್ಗದವರು ಜಾತಿ ಮತ ಭೇದವಿಲ್ಲದೇ ಗೌಡರ ಪರವಾಗಿ ಪ್ರಚಾರ ಮಾಡಿದರು ವಾಹನದಲ್ಲಿ ಪ್ರಚಾರ ಮಾಡಲು ಹಣವಿರಲಿಲ್ಲ. ಗೋಪಾಲಗೌಡರು ಕಾಯ೯ಕರ್ತರ ಜೊತೆಗೆ ಪಾದ ಯಾತ್ರೆಯಲ್ಲಿ ಹಳ್ಳಿ ಹಳ್ಳಿಗೆ ಕರಪತ್ರ ಹಂಚಿ ಮತ ಯಾಚಿಸಿದರು ಜನ ಸಾಮಾನ್ಯರು ಹಣ ಸಂಗ್ರಹ ಮಾಡಿ ಖರ್ಚಿಗೆ ಕೊಟ್ಟರು 1952 ರಲ್ಲಿ ಪ್ರಥಮ ಚುನಾವಣೆಯಲ್ಲಿ ಬದರಿ ನಾರಾಯಣ ಅಯ್ಯಾಂಗಾರರಂಥ ದೊಡ್ಡ ಭೂ ಮಾಲೀಕರನ್ನು ಸೋಲಿಸಿ ಶಾಸಕರಾದ ಗೋಪಾಲ ಗೌಡರು ಮಾಡಿದ ಚುನಾವಣೆಗೆ ಖಚು೯ 5 ಸಾವಿರ ಬೇರೆ ಬೇರೆ ಕಡೆ ಸಾಲ ಮಾಡಿ ತಂದ 5 ಸಾವಿರ
ರೂಪಾಯಿಯನ್ನು ಬರುತ್ತಿದ್ದ ಶಾಸಕರ ವೇತನ ಭತ್ಯೆಗಳ ಮೂಲಕ ತೀರಿಸಿದರು.
ಗೌಡರ ಕಿಸೆಯಲ್ಲಿ ಹಣ ಇರುತ್ತಿರಲಿಲ್ಲ ಶಿವಮೊಗ್ಗದಿಂದ ಬೆಂಗಳೂರು ಬೆಂಗಳೂರು ರಿಂದ ಶಿವಮೊಗ್ಗ ಓಡಾಡಲು ಕಾರು ಇಲ್ಲದಾಗ ಜೊತೆಗೆ ಇದ್ದವರು ಪ್ರಯಾಣದ ವೆಚ್ಚವನ್ನು ಭರಿಸುತ್ತಿದ್ದರು. ಗೋಪಾಲಗೌಡರು ಜನ ಸಾಮಾನ್ಯರ ರೈತ ಕಾರ್ಮಿಕರ ಪ್ರಶ್ನೆ ಬಂದಾಗ ಬೆಂಕಿಯಂತೆ ಸಿಡಿಯುತ್ತಿದ್ದರು.ಒಂದು ಸಲ ಸಾಹಿತಿ ಯೊಬ್ಬರು ಯಾವುದೋ ಸಹಾಯ ಅಪೇಕ್ಷಿಸಿದಾಗ ಅವರನ್ನು ಗೌಡರು ರಾಜ್ಯಪಾಲ ಧರ್ಮವೀರ ಹತ್ತಿರ ಕರೆದುಕೊಂಡು ಹೋದಾಗ ನಿಮಗೊಂದು ಕಾರ ಮ೦ಜೂರ ಮಾಡುತ್ತೇವೆ ಹೀಗೆ ಓಡಾಡೋದು ನಿಮಗ ಒಳ್ಳೇದಲ್ಲ ಹೇಳಿದರು ಸರ್ಕಾರಿ ಕೋಟಾದಿಂದ ಬಂದ ಕಾರನ್ನು ಕೊಳ್ಳಲು ಇವರ ಹತ್ರ ಹಣ ಇಲ್ಲದೇ ಬೇರೆಯವರಿಗೆ ನೀಡಿದರು. ಹೋರಾಟ ಮಾಡಿ ದಣಿದ ಗೌಡರು ಆಸ್ಪತ್ರೆಗೆ ಅಂತ ಗೋಪಾಲಗೌಡರು ಸೇರಿದರು. ಮೂರು ದಿನದಲ್ಲಿ ಅವರ ಮಾತು ನಿಂತು ಹೋಯಿತು ನಿರಗ೯ಳವಾಗಿ ಮಾತನಾಡುತ್ತ ನ್ಯಾಯಕ್ಕಾಗಿ ಹೋರಾಟ ಮಾಡುವ ಅಪ್ಪಟ ಸಮಾಜವಾದಿ ನಾಯಕ ಮಾತಿಲ್ಲದ ಕಥೆ ಇಲ್ಲದ ಮಂಪರದಲ್ಲಿ ಹಗಲು ರಾತ್ರಿ ಕಣ್ಣು ಮುಚ್ಚಿ ಮಲಗಿದರು.
ಗೋಪಾಲಗೌಡರು ಜೀವವನ್ನು ಸರಳವಾಗಿ ಬಿಟ್ಟುಕೊಡಲಿಲ್ಲ ಹೋರಾಟ ಮಾಡಿದರು ಆರು ತಿಂಗಳ ಕಾಲ ಆದರೆ 49 ರ ವರುಷದಗೋಪಾಲಗೌಡರು ಕೊನೆಗೂ 1972 ರ ಜೂನ್ ತಿಂಗಳದಲ್ಲಿ ನಿಧನರಾದರು. ಗೋಪಾಲಗೌಡರ ಹೋರಾಟ ಜನರ ಮೇಲೆ ಪ್ರೀತಿ ನಿಸ್ವಾಥ೯ ಸೇವೆ ಇಂದಿನ ರಾಜಕಾರಣಿಗಳು ಕಲಿಯಬೇಕಾಗಿದೆ ಆದರೆ ಇಂದಿನ ರಾಜಕೀಯ ವ್ಯಾಪಾರವಾಗಿದೆ ಮತದಾರರಿಗೆ ಸರಾಯಿ ಸೀರೆ ಕುಕ್ಕರ ಹಣ ನೀಡಿ ಮತ ಪಡೆದು ಅಧಿಕಾರಕ್ಕೆ ಬರುವ ರಾಜಕಾರಣಿಗಳು ಚುನಾವಣೆಯಲ್ಲಿ ಹಾಕಿದ ಬಂಡವಾಳ ಮರಳಿ ಪಡೆಯುವ ಬಗ್ಗೆ ವಿಚಾರ ಮಾಡುತ್ತಾರೆ ಹೊರತು ಜನ ಸಾಮಾನ್ಯರ ಬಗ್ಗೆ ಅಲ್ಲ ರಾಜಕೀಯಕ್ಕೆ ಉತ್ತಮ ರಾಜಕಾರಣಿಗಳಿಗೆ ಅವಕಾಶವಿಲ್ಲ ಇದ್ದರೂ ಹಣವಿಲ್ಲದೇ ಚುನಾವಣೆ ಗೆಲುವು ಸಾಧ್ಯವಿಲ್ಲ ಠೇವಣಿ ಸಹ ಕಳೆದುಕೊಳ್ಳುತ್ತಾರೆ. ಇದೇ ಇಂದಿನ ವಸ್ತು ಸ್ಥಿತಿ. ನಾಡು ಕಂಡ ಸಮಾಜವಾದಿ ನಾಯಕ ಗೋಪಾಲಗೌಡರ ಹೆಸರು ಇಂದಿಗೂಜನ ಮನದಲ್ಲಿ ಹೆಚ್ಚಹಸಿರು..
ಲೇಖಕರು ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ