ಬಸವ ಭಕ್ತಿಯ ಶಕ್ತಿಯ ರೂಪ – ಬಸಮ್ಮ ಕೊನೇಕ್

ಬಸವ ಉಸಿರಿನ ಪ್ರಕಾಶಕಿ:ಲಿಂ.ಬಸಮ್ಮ ಕೊನೇಕ್
ಜಗತ್ ಸರ್ಕಲ್ ದಲ್ಲಿ ನೂರಾರು ಜನ ಕುಳಿತುಕೊಂಡು
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಹೆಸರಿಡಲು ಹೋರಾಟ ಮಾಡುತ್ತಿದ್ದರು..ಅದರಲ್ಲಿ ಒಬ್ಬ ಗೃಹಿಣಿ ಸಣ್ಣ ಧ್ವನಿ,ಮೆಲು ಮಾತು,ಮೆಲು ನುಡಿಯಿಂದ ಹೌದು ಬಸವಣ್ಣ ನವರ ಹೆಸರು ಇಡಲೇಬೇಕು ಗಟ್ಟಿಯಾಗಿ ಗುಡುಗಿದ ಮಹಿ
ಳೆ ಬೇರಾರು ಅಲ್ಲ ಅವರೇ..ಶ್ರೀಮತಿ ಬಸಮ್ಮ ಬಸವರಾಜ ಕೊನೇಕ್ !. ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ.ಅವ ರು ಬ ಹುಟ್ಟಿದ ನೆಲವೇ ಹಾಗಿದೆ.ಕೆಂಪು ಮಣ್ಣಿನ, ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಗ್ರಾಮದ ಪೋಲೀಸ್ ಗೌಡಕಿ ಮನೆತನದ ಮಹಾಂತಪ್ಪ ಮತ್ತು ಸೀತಾಬಾಯಿಯವರ ಮಗಳು ಬಸಮ್ಮ ಟೇಲರಿಂ ಗ್ ಕುಲಿತಿದ್ದರು.
ಇವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಗುರಪ್ಪ ಮತ್ತು ಇಟಾಬಾಯಿ ಅವರ ಮಗನಾದ ಬಸವರಾಜರನ್ನು ಕಲಬುರಗಿ ಶರಣಬಸವೇಶ್ವ ರ ದೇವಸ್ಥಾನದಲ್ಲಿ ಬಸವ ಜಯಂತಿಯಂದು ೧೩-೦೫-೧೯೭೭ ರಲ್ಲಿ ವಿವಾಹ ಮಾಡಿಕೊಂಡರು. ಆದರೆ ಇವರಿಗೆ ಒಂದು ಸ್ವಂತ ಮನೆ ಇಲ್ಲ.ಬಾಡಿಗೆ ಸಿಂಗಲ್ ಮನೆಯಲ್ಲಿ ಇವರ ಸಂಸಾರ ನಡೆಯಿತು.ನಂತರ ಎರಡು ರೂಮು ಬಾಡಿಗೆ ಹಿಡಿದರು.
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.
ಇವರ ಮನೆಯಲ್ಲಿ ಹಾಕಿದ ಪೋಟೋದಂತೆ ಮೊದಲು ಜನಿಸಿದ ಮಗನಿಗೆ ಸಿದ್ಧಲಿಂಗ, ಎಡನೆಯ ಮಗಳಿಗೆ ಲಕ್ಷ್ಮಿ,ಮೂರನೆಯ ಮಗಳು ಸರೋಜಾ ಹಾಗೂ ಕೊನೆಯ ಮಗನಿಗೆ ಶರಣಬಸವ ಎಂದು ಹೆಸರಿಟ್ಟರು. ಇಬ್ಬರು ಗಂಡು ಮಕ್ಕಳಿಗೆ ಕಾಮಸ್೯ ಓದಿಸಿದವರು.ತಮ್ಮ ತಂದೆ- ತಾಯಿಯ ಕಾಯಕ ಪುಸ್ತಕ ವ್ಯಾಪಾ
ರ ಮತ್ತು ಪ್ರಕಾಶನವನ್ನು ಮುಂದುವರಿಸಿಕೊಂಡು ಬಂದಿ ದ್ದಾರೆ.ಇಬ್ಬರು ಹೆಣ್ಣು ಮಕ್ಕಳಿಗೆ ಇಂಜನಿಯರಿಂಗ್ ಮತ್ತು ಡಾಕ್ಟರ್ ಮಾಡಿದವರು.ಹಿರಿಯ ಸೊಸೆ ಪ್ರೀತಿ ಸಿದ್ದಲಿಂಗ
ಗೃಹಿಣಿ ಜೊತೆಗೆ ಪುಸ್ತಕ ವ್ಯಾಪಾರ ಸಹಕಾರ.ಕಿರಿಯ ಸೊಸೆ ಡಾ.ಶೈಲಜಾ ಶರಣಬಸವ ಇವರು ಸಿಯುಕೆಯಲ್ಲಿ ಸಹಾ ಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಕ್ಕಳು, ಮೊಮ್ಮಕ್ಕಳನ್ನು ಕಂಡವರು.
ಬೆಚ್ಚನೆ ಮನೆ ಇರಲು
ವೆಚ್ಚಕೆ ಹೊನ್ನಿರಲು
ಇಚ್ಚೆಯನರಿವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ತ್ರಿಪದಿಯಂತೆ
ಬಸವರಾಜ ಕೊನೇಕ್ ದಂಪತಿಗಳು ಬಾಳಿ ಬೆಳಗಿದರು.
ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು ಎಂಬ ಪ್ರಕಾಶನ ಸ್ಥಾಪಕರು ಶ್ರೀಮತಿ ಬಸಮ್ಮ ಕೊನೇಕ್. ಗೃಹಿಣಿ, ಸಂಸಾರ,ಮಕ್ಕಳ ಪಾಲನೆ-ಲಾಲನೆ ಜೊತೆಗೆ ಪತಿಯ ಪ್ರಕಾಶನದ ಬೆನ್ನೆಲುಬಾಗಿ ನಿಂತವರು.ಕೊನೇಕ್ ಅವರ ಬೆನ್ನ ಹಿಂದಿನ ಬೆಳಕಾಗಿ ಕಷ್ಟ- ಸುಖದಲ್ಲಿ ಪಾಲ್ಗೊಂ
ಡವರು.ಪತಿಯ ಶ್ರೇಯಸ್ಸು ಬಯಸಿದರು.ಕುಟುಂಬದ ಕಲ್ಯಾಣ ಬಯಸಿದರು,ವ್ಯವಹಾರದ ಅಭಿವೃದ್ಧಿಗೆ ಸ್ಪಂದಿಸಿ ದವರು.ಒಬ್ಬ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಬಸಮ್ಮನವರೇ ಉದಾಹರಣೆ. ಬಸಮ್ಮ- ಬಸವರಾಜ ಅವರ ಜೋಡಿ ಆದರ್ಶ !."ಸತಿಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎನ್ನುವ ಶರಣರ ವಚನದ ಸಾಲಿನಂತೆ ಬಾಳಿ- ಬದುಕಿದ ಸಾಧ್ವಿ.ಎಲೆ ಮರೆ ಕಾಯಿಯಂತೆ ಬಾಳಿದವರು.ಮನೆಗೆದ್ದು ಮಾರು ಗೆದ್ಧವರು.
ಕೊನೇಕ್ ಅವರ ಪ್ರತಿ ಹಂತದಲ್ಲೂ ಸದಾ ಎಚ್ಚರಿಸುವ, ತಿಳಿಸುವ,ಹಾರೈಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಕೆಲವೊಂದು ವಿಷಯಗಳಲ್ಲಿ ಶ್ರೀಮತಿ ಬಸಮ್ಮ ಅವರ ತೆಗೆದುಕೊಳ್ಳುವ ನಿರ್ಧಾರ ಬೊಲ್ಡ್ ಸ್ಟೆಪ್ ತಗೆದುಕೊಳ್ಳುವ ವಿಶೇಷತೆ ಕಂಡಿದ್ದೇನೆ.
ಬಸವ ಪ್ರಕಾಶನದ ಪ್ರಕಾಶಕರಾಗಿ ನೂರಾರು ಪುಸ್ತಕ ಪ್ರಕಡಿಸಿದ್ದಾರೆ.ಎಂ.ಎಸ್.ಐ ಡೀಲರ್ ರಾಗಿ, ಉತ್ತಮ ಲೇಖಕ ನೊಟ್ ಬುಕ್ ಮಾರಾಟಗಾರರಾಗಿ ಉತ್ತಮ ಡೀಲರ್ ಪ್ರಶಸ್ತಿ, ಅಲ್ಲದೇ ಹಲವು ಸಂಘ ಸಂಸ್ಥೆಗಳು, ಇವರಿಗೆ ಗೌರವಿಸಿವೆ.ಉತ್ತಮ ಸಾಹಿತ್ಯ,ಜನಪ್ರಿಯ ಕೃತಿ, ಸಂಪಾದನೆ ಕೃತಿಗಳನ್ನು ಪ್ರಕಟಿಸಿದ್ದಾರೆ.
ಬಸವದಳದಲ್ಲಿ ಭಕ್ತಿ- ಭಾವ ಹೊಂದಿದವರು.ಜಗದ್ಗು ರು ಡಾ.ಮಾತೆ ಮಹಾದೇವಿ ಅವರ ಮೇಲೆ ಅಪಾರ ಭಕ್ತಿ- ಗೌರವ ಹೊಂದಿ ತಮ್ಮ ಜೀವಿತಾವಧಿಯವರೆಗೂ ಸದಾ ಬಸವ ಚಿಂತನೆ ಅಳವಡಿಸಿಕೊಂಡವರು.ಮಾತಾಜಿಯವರ
ಆಧ್ಯಾತ್ಮಿಕ ಚಿಂತನೆ, ಪ್ರವಚನಗಳಿಗೆ ಮಾರ ಹೋದವರು.
ಅವರು ಕುಳಿತಲ್ಲಿ -ನಿಂತಲ್ಲಿ ಬಸವ ನಾಮ ಜಪಿಸುತ್ತಾ ತಮ್ಮ ಜೀವನವನ್ನು ಗಂಧದಂತೆ ಬಸವಲಿಂಗಕ್ಕೆ ತೇಯ್ದವ ರು.ಕಾಯಕ ಜೀವಿ ಆದಂತೆ ದಾಸೋಹ ಜೀವಿ ಹೌದು.
ನಡೆ,ನುಡಿ,ನಡೆ,ಬದುಕು ಕೂಡಾ ಒಂದೇಯಾಗಿಸಿಕೊಂಡ
ಅಪರೂಪದ ವ್ಯಕ್ತಿ.ಸರಳ,ಸೌಜನ್ಯ ಶೀಲ ವ್ಯಕ್ತಿತ್ವದವರು.
ಮನೆಗೆ ಯಾರೇ ಬರಲಿ,ಅಂಗಡಿಗೆ ಯಾರೆ ಬರಲಿ ಅವರೊಂದಿಗೆ ಸರಳತೆ,ಪ್ರೀತಿ,ಸೌಜನ್ಯ ದಿಂದ ಮಾತನಾಡಿ
ಅವರಿಗೆ ಆದರಾತಿಥ್ಯವನ್ನು ನೀಡುವ ಪ್ರಕಾಶಕಿ.ಇಂತಹ ಮಾತೋಶ್ರೀ ಬಸಮ್ಮ ಬಸವರಾಜ ಕೊನೇಕ್ ಅವರು ದಿನಾಂಕ: ೦೧-೦೫-೨೦೧೩ ರಂದು ಲಿಂಗೈಕ್ಯರಾಗಿದ್ದಾರೆ.
ಅವರ ಬಸವ ಭಕ್ತಿ ಇರುವುದರಿಂದ ಅವರ ಪುಣ್ಯ ಸ್ಮರಣೆ ನಿಮಿತ್ಯ ಬಸವ ಸೇವೆ ಮಾಡಿದ ಪೂಜ್ಯರಿಗೆ ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿದ್ದಾರೆ. ೧೧ ಸಾವಿರ ರೂಪಾಯಿ ಗೌರವ ಧನ ಮತ್ತು ಪ್ರಶಸ್ತಿ ಫಲಕ ಹೊಂದಿದೆ.ಇದುವರೆಗೆ
ಬಸವ ಸಿರಿ ಪ್ರಶಸ್ತಿ ಪುರಸ್ಕೃತರು:
೧.ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು-೨೦೧೬
೨.ಡಾ.ಸಿದ್ಧರಾಮ ಶರಣರು ಬೆಲ್ದಾಳ ೨೦೧೭
೩.ಪೂಜ್ಯ ಡಾ. ಅಕ್ಕ ಅನ್ನಪೂರ್ಣ- ೨೦೧೮
೪.ಪೂಜ್ಯ ಶ್ರೀ ಈಶ್ವರ ಮಂಟೂರು-೨೦೧೯
೫.ಪೂಜ್ಯಶ್ರೀ ಗುರು ಮಹಾಂತ ಶಿವಯೋಗಿಗಳು ಇಲಕಲ್ಲ- ೨೦೨೨
೬.ಪೂಜ್ಯಶ್ರೀ ಸಿದ್ಧರಾಮೇಶ್ವರ
ಸ್ವಾಮಿಗಳು-ಬಸವಕಲ್ಯಾಣ ೨೦೨೩
೭.ಡಾ.ಗಂಗಾಂಬಿಕಾ ಪಾಟೀಲ- ೨೦೨೪.
೮.ಡಾ.ಗಂಗಾಮಾತಾಜಿ ಬಸವ ಧರ್ಮ ಪೀಠ- ೨೦೨೫ ಈ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಬಸವ ಪ್ರೇಮ ಎತ್ತಿ ಹಿಡಿಯಲಾಗಿದೆ.ಶ್ರೀಮತಿ ಬಸಮ್ಮ ಕೊನೇಕ್ ಅವರು ಲಿಂಗೈಕ್ಯರಾಗಿ ಹನ್ನೆರಡು ವರ್ಷಗಳಾದವು.ಅವರು ಅವಿರತ ಹೋರಾಟ ಮಾಡಿದ ಗುಲ್ಬರ್ಗಾ ವಿಶ್ವವಿದ್ಯಾಲ
ಯಕ್ಕೆ ಬಸವಣ್ಣನವರ ಹೆಸರು ಇಡಲು ಹೋರಾಟ ಮಾಡಿ ದ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ ಅದು ಬೇಗ ಈಡೇರಲಿ ಎಂದು ಆಶಿಸುವೆ.
(ದಿನಾಂಕ: ೦೧-೦೫-೨೦೨೫ರಂದು ೧೨ ನೆಯ ಪುಣ್ಯ ಸ್ಮರಣೆ,ಬಸವ ಸಿರಿ ಪ್ರಶಸ್ತಿ ಪ್ರದಾನ ನಿಮಿತ್ಯ ಲೇಖನ)
ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ, ಸಾಹಿತಿಗಳು,ಕಲಬುರಗಿ