ಕಲ್ಯಾಣ ಕರ್ನಾಟಕ ಮರುಸ್ವಾತಂತ್ರ್ಯ ದಿನಾಚರಣೆ: ಸೆಪ್ಟೆಂಬರ್ 18ಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಬೇಕೆಂಬ ಮನವಿ

ಕಲ್ಯಾಣ ಕರ್ನಾಟಕ ಮರುಸ್ವಾತಂತ್ರ್ಯ ದಿನಾಚರಣೆ: ಸೆಪ್ಟೆಂಬರ್ 18ಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಬೇಕೆಂಬ ಮನವಿ

ಕಲ್ಯಾಣ ಕರ್ನಾಟಕ ಮರುಸ್ವಾತಂತ್ರ್ಯ ದಿನಾಚರಣೆ: ಸೆಪ್ಟೆಂಬರ್ 18ಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಬೇಕೆಂಬ ಮನವಿ

ಕಲಬುರಗಿ :ಅ.3- ಇದೇ ತಿಂಗಳು ಅಧಿವೇಶನ ಜರುಗುತ್ತಿದೆ ಅದರಲ್ಲಿ ಈ ಭಾಗದ ಸಚಿವರು ಮತ್ತು ಶಾಸಕರು ಈ ಕುರಿತು ಚರ್ಚಿಸಿ ತಿದ್ದುಪಡಿಗೊಳ್ಳಿಸಲು ಆಗ್ರಹಿಸಬೇಕು ಎಂದು ನ್ಯಾಯವಾದಿ ವಿನೋದ್ ಕುಮಾರ್ ಕೋರಿದ್ದಾರೆ. 

ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ನಿಜವಾಸ್ತವ ಮತ್ತು 1948ರ ಸೆಪ್ಟೆಂಬರ್ 18ರ ಮಹತ್ವವನ್ನು ಪುನಃ ಒತ್ತಿಹೇಳುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಗರಿಕರು ಪ್ರಸ್ತಾಪಿಸಿದ್ದ ಚರ್ಚೆಗೆ ಮತ್ತಷ್ಟು ವೇಗ ಸಿಕ್ಕಿದೆ.

ಕೆ ವೈ ಎಫ್ ಸಂಘಟನೆ ಕಳೆದ ದಶಕದಿಂದ ಮನವಿ ಸಲ್ಲಿಸುತ್ತಾ ಬಂದರು ನಿದ್ರಾಮಯ ಸರ್ಕಾರ ಎಚ್ಚೆತ್ತುಕೊಂಡು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು k y f ಜಿಲ್ಲಾಧ್ಯಕ್ಷ ಅನಂತ್ ಗುಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ಕುರಿತು ಕಲಬುರ್ಗಿಯ ಶ್ರೀ ವಿನೋದಕುಮಾರ ಜೇನವರಿ (ಕೆ.ವಾಯ್.ಎಫ್ ರಾಜ್ಯ ಸಂಚಾಲಕರು) ಹಾಗೂ ಇತರರು 18/09/2023 ರಂದು ಸಲ್ಲಿಸಿದ ಮನವಿ, ಕಲಬುರ್ಗಿ ಜಿಲ್ಲಾಧಿಕಾರಿಗಳ 28/02/2024ರ ಪತ್ರ (ಸಂಖ್ಯೆ: ಕಂ/ರಾ.ಹ/08/2023-24), ತಹಸೀಲ್ದಾರರ 19/07/2024ರ ಪತ್ರ (ಸಂಖ್ಯೆ: /%/./01/2024-25 50), ಹಾಗೂ ಶ್ರೀ ಯಶವಂತರಾವ ಪಾಟೀಲ ರೇವೂರ (ಸ್ವಾತಂತ್ರ್ಯ ಹೋರಾಟಗಾರರು) ಅವರ 02/07/2021ರ ಮನವಿಗಳ ಮೂಲಕ ಸೆಪ್ಟೆಂಬರ್ 18ರ ಪ್ರಾಮುಖ್ಯತೆ ಕುರಿತಂತೆ ಸಾಕ್ಷ್ಯಾಧಾರಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ.

1948ರ ಸೆಪ್ಟೆಂಬರ್ 18ರಂದು ಹೈದ್ರಾಬಾದ್ ನಿಜಾಮರಿಂದ ಮುಕ್ತಿ ದೊರಕಿದ್ದು, ಭಾರತದೊಡನೆ ಕಲ್ಯಾಣ ಕರ್ನಾಟಕ ವಿಲೀನಗೊಂಡ ಮಹತ್ವದ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್ ನಿಜಾಮ ಸರಕಾರದಿಂದ ಹೊರಡಿಸಲಾದ ಫರ್ಮಾನ್‌ನ ಧೃಢೀಕೃತ ಪ್ರತಿಯು ಈ ದಿನಾಂಕದ ನಿಖರತೆಗೆ ಹಾಗೂ ಇತಿಹಾಸದ ಭದ್ರತೆಗೆ ಮುಖ್ಯ ಸಾಕ್ಷಿಯಾಗಿ ಬದಲಾಗುತ್ತಿದೆ.

ಮಾನ್ಯ ಜಿಲ್ಲಾಧಿಕಾರಿಗಳು ಈ ಸಂಬಂಧ ಪ್ರಾದೇಶಿಕ ಆಯುಕ್ತರಿಂದ ವರದಿ ಕೋರಿದ್ದು, ಅಧಿಕೃತವಾಗಿ 18 ಸೆಪ್ಟೆಂಬರ್ ದಿನವನ್ನು "ಕಲ್ಯಾಣ ಕರ್ನಾಟಕ ಮರುಸ್ವಾತಂತ್ರ್ಯ ದಿನ" ಎಂದು ಘೋಷಿಸಿ ರಾಜ್ಯ ಮಟ್ಟದಲ್ಲಿ ಆಚರಿಸಲು ಸರಕಾರ ಮುಂದಾಗಬೇಕೆಂಬ ನಿರೀಕ್ಷೆ ಬೆಳೆಯುತ್ತಿದೆ.