ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಮಹತ್ವದ ಸ್ಥಾನ ನರೇಂದ್ರ ಬಡಶೇಷಿ

ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಮಹತ್ವದ ಸ್ಥಾನ ನರೇಂದ್ರ ಬಡಶೇಷಿ

ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಮಹತ್ವದ ಸ್ಥಾನ ನರೇಂದ್ರ ಬಡಶೇಷಿ

ಕಲಬುರ್ಗಿ: ಭಾರತೀಯ ಸಂಸ್ಕೃತಿಯಲ್ಲಿ, ಗುರುವು ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿದ್ದಾರೆ. ಗುರು-ಶಿಷ್ಯ ಪರಂಪರೆಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಮತ್ತು ಇದನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ ಹೇಳಿದರು 

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಚ್ ಕೆ ಇ ಎಸ್ ಬಾಲಕೀಯರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ನಾವು ಯಾರು ಅನ್ನೋದು ನಮ್ಮ ಸಂಸ್ಕೃತಿ; ನಾವು ಏನು ಹೊಂದಿದ್ದೀವಿ ಅನ್ನೋದು ನಮ್ಮ ನಾಗರಿಕತೆ" ಎಂದು ತಿಳಿಸಿದರು.

ನಿರ್ಣಯ ಎಂಬುದು ಆಯ್ಕೆಯಿಂದ ಆಗಬೇಕು, ಆಕಸ್ಮಿಕವಾಗಿ ಅಲ್ಲ" ಎಂದು ಹೇಳುವ ಮೂಲಕ, ಯುವಜನರು ತಮ್ಮ ಜೀವನದ ಹತ್ತಿರ ನಿರ್ಧಾರಗಳನ್ನು ತಮ್ಮದೇ ಆದ ಜವಾಬ್ದಾರಿಯಿಂದ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಕಾರಾತ್ಮಕ ಮನೋಭಾವದ ಶಕ್ತಿಯ ಮೂಲಕ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಬಹುದೆಂಬುದನ್ನು ಅವರು ವಿವರಿಸಿದರು. ಈ ಮನೋಭಾವವನ್ನು ಬೆಳೆಸಲು, ಮಹಾನ್ ವ್ಯಕ್ತಿತ್ವಗಳ ಬಗ್ಗೆ ಓದಿ ಮಾರ್ಗದರ್ಶನ ಮತ್ತು ಪ್ರೇರಣೆಯನ್ನು ಪಡೆಯಲು ಅವರು ಪ್ರೋತ್ಸಾಹಿಸಿದರು.

"ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ನಡೆ" ಎಂಬ ಮಾತುಗಳಿಂದ ತಮ್ಮ ಭಾಷಣವನ್ನು ಮುಗಿಸಿ, ನಿಜವಾದ ಬದಲಾವಣೆ ನಮ್ಮ ಸಮುದಾಯಗಳಿಂದಲೇ ಆರಂಭವಾಗುತ್ತದೆ ಎಂಬುದನ್ನು ಅವರು ನೆನಪಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ ಶಾಂತಾ ಮಠ ಮಾತನಾಡಿ ಪ್ರತಿ ವಿದ್ಯಾರ್ಥಿಯಲ್ಲೂ ಅಡಗಿರುವ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಅಂಧಶ್ರದ್ಧೆಗಳಿಂದ ದೂರವಿರಬೇಕು ಎಂದು ತಿಳಿದು, ತಾರ್ಕಿಕ ಚಿಂತನೆ ಬೆಳೆಸಬೇಕು ಎಂದರು. ಮೊಬೈಲ್ ಅವಲಂಬನೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು. ಪುಸ್ತಕಗಳನ್ನು "ಜೀವನದ ನಿಜವಾದ ಗೆಳೆಯರು" ಎನ್ನುತ್ತಾ ಓದು ಮಹತ್ವಪೂರ್ಣವೆಂದು ತಿಳಿಸಿದರು. ಗುರುಗಳ ಗೌರವವಂತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತೆ ಮಾಡಿ ಎಂದು ಅವರು ನೆನೆಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಸಂಯೋಜಕರಾದ ನಾಗಣ್ಣ ಘಂಟಿ ವಹಿಸಿದ್ದರು 

ಇದೇ ಸಂದರ್ಭದಲ್ಲಿ 2025 ನೇ ಸಾಲಿನಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕು ಸೌಮ್ಯ, ಕು ಗಾಯತ್ರಿ, ಕು ಭುವನೇಶ್ವರಿ, ಕು ಲಕ್ಷ್ಮೀ, ಗೌರವಿಸಲಾಯಿತು.

ವೇದಿಕೆಯ ಮೇಲೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎನ್ ಜಿ ಪಾಟೀಲ್, ಉಪನ್ಯಾಸಕರಾದ ಅಶೋಕ್ ಪಾಟೀಲ್, ಪ್ರೀತಿ ಎಸ್,ಶಿಲ್ಪಕಲಾ, ಶುಭಾ,ಸವಿತಾ ಪಾಟೀಲ್ ,ಅನಸೂಯಾ,ಉಪಸ್ಥಿತರಿದ್ದರು 

ಪ್ರಾಚಾರ್ಯರಾದ ಉಷಾ ಪಾಟೀಲ್ ಸ್ವಾಗತಿಸಿದರು, ಜಾನಕಿ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು,ಜೈಭಾ , ವಿಜಯಲಕ್ಷ್ಮಿ ಅತಿಥಿ ಪರಿಚಯ ಮಾಡಿದರು.ಸರಸ್ವತಿ ವಂದಿಸಿದರು.