ಸಚಿವಾಲಯ ನೌಕರರ ಹೋರಾಟಕ್ಕೆ ಜಯ – ಕಂದಾಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ರಮೇಶ್ ಸಂಗಾ ಅಭಿನಂದನೆ

ಬೆಂಗಳೂರು, ಆಗಸ್ಟ್ 3: ಸಚಿವಾಲಯದ ಕಂದಾಯ ಇಲಾಖೆಯ ಕಾರ್ಯಭಾರವನ್ನು ಆಯುಕ್ತಾಲಯಕ್ಕೆ ವರ್ಗಾಯಿಸಲಾಗಿದ್ದ ಕ್ರಮವನ್ನು ಸರ್ಕಾರ ಇದೀಗ ಹಿಂಪಡೆದಿದ್ದು, ಕಾರ್ಯಭಾರವನ್ನು ಪುನಃ ಸಚಿವಾಲಯದಲ್ಲಿಯೇ ಸ್ಥಾಪಿಸಿರುವುದು ನೌಕರರ ಸಂಘದ ಹೋರಾಟಕ್ಕೆ ದೊರೆತ ಮಹತ್ವದ ಜಯವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ಸರ್ಕಾರದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಅವರು, ತಮ್ಮ ಸಂಘದ ನಿರಂತರ ಹೋರಾಟ ಮತ್ತು ಪರಿಶ್ರಮ ಫಲಕಾರಿಯಾಗಿರುವುದಾಗಿ ಹೆಮ್ಮೆ ವ್ಯಕ್ತಪಡಿಸಿದರು. ಈ ನಿರ್ಧಾರಕ್ಕೆ ಕಾರಣರಾದ ಮಾನ್ಯ ಕಂದಾಯ ಸಚಿವ ಶ್ರೀ ಕೃಷ್ಣ ಬೈರೇಗೌಡ ರವರಿಗೆ, ಪ್ರಧಾನ ಕಾರ್ಯದರ್ಶಿ ಶ್ರೀ ರಜೇಂದ್ರ ಕಟಾರಿಯ ಸಾಹೇಬರಿಗೆ ಹಾಗೂ ಜಂಟಿ ಕಾರ್ಯದರ್ಶಿ ಶ್ರೀಮತಿ ಕಲಾವತಿ ಮೇಡಂ ರವರಿಗೆ ಸಮಸ್ತ ನೌಕರರ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ಸಚಿವಾಲಯ ನೌಕರರ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರ ತೆಗೆದುಕೊಂಡ ಈ ಸರಿಯಾದ ಕ್ರಮವು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ನೌಕರರ ಕೆಲಸದ ಶ್ರೇಯಸ್ಸಿಗೆ ಪೂರಕವಾಗಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ

.