ಭಕ್ತಿ ಭಾವದಿಂದ ಲಿಂಗ ಪೂಜೆ ಮಾಡಿ --ಮಾತಾಜಿ

ಭಕ್ತಿ ಭಾವದಿಂದ ಲಿಂಗ ಪೂಜೆ ಮಾಡಿ --ಮಾತಾಜಿ
ಕಮಲನಗರ : ಪ್ರವಚನ ಕೇಳುವುದು ಮತ್ತು ಪಾಲ್ಗೊಳ್ಳುವುದು ಅತ್ಯಂತ ಸಂಭ್ರಮ ತಂದು ಕೊಡುತ್ತದೆ ಎಂದು ಸಂಗಮೇಶ್ವರ ಎಸ್. ಮುರ್ಕೆ ಅವರು ನುಡಿದರು.
ಮುಧೋಳ ಗ್ರಾಮದ ಗುರು ಬಸವೇಶ್ವರ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅನುಭವ ಮಂಟಪ ಕಾರ್ಯಕ್ರಮ -7 ಹಾಗೂ ಶ್ರಾವಣ ಮಾಸದ ನಿಮಿತ್ಯವಾಗಿ ಮುಧೋಳ (ಬಿ) ಗ್ರಾಮದಲ್ಲಿ ವಿಶ್ವಧರ್ಮ ಪ್ರವಚನದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಹಡಪದ ಅಪ್ಪಣ್ಣನವರು ನಿಷ್ಠಾವಂತ ಯೋಗ ಸಾಧಕರಾಗಿ ಪರಮಜ್ಞಾನಿಗಳಾಗಿ ಬದುಕಿ ಬಾಳಿದವರು ಎಂದು ಹೇಳಿದರು.12 ನೇ ಶತಮಾನದ ಶರಣರಾದ ಹಡಪದ ಅಪ್ಪಣ್ಣನವರ ಕುರಿತು ಕೆಲವು ಸುಂದರ ವ್ಯಾಖ್ಯಾನಗಳೊಂದಿಗೆ ಎಲ್ಲರಿಗೂ ತಿಳಿಯುವ ಧಾಟಿಯಲ್ಲಿ ತಿಳಿಸಿಕೊಟ್ಟರು.
ಗ್ರಾಮೀಣ ಭಾಗದಲ್ಲಿ ಗುರುಬಸವೇಶ್ವರ ಅನುಭವ ಮಂಟಪ ನಿರ್ಮಿಸಿ ಇಂತಹ ಅಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯ ಮುಧೋಳ(ಬಿ)ದಲ್ಲಿ ನಡೆಯುತ್ತಿರುವದು ಅಪರೂಪದ ಸಂಗತಿ ಎಂದು ಸಂಗಮೇಶ್ವರ ಎಸ್ ಮುರ್ಕೆ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ದಿನನಿತ್ಯದಂತೆ ಪರಮ ಪೂಜ್ಯ ಮಾತಾಜಿ ಅವರು ಪ್ರವಚನ ಉದ್ದೇಶಿಸಿ ಇಷ್ಟ ಲಿಂಗದ ಬಗ್ಗೆ ತಿಳಿಸಿದ್ದರು ಆಡಂಬರದ ಭಕ್ತಿ ಭಾವನೆಯನ್ನು ಖಂಡಿಸಿ, ಸರಳ ರೀತಿಯಲ್ಲಿ ಲಿಂಗವು ಅಂಗದ ಮೇಲೆ ಇಟ್ಟು ಬ್ರಹ್ಮ ಸ್ವರೂಪಿಗಳನ್ನು ನೆನೆಯುವುದೇ ಲಿಂಗ ಪೂಜೆ ಎಂದರು.
ಈ ದಿನದ ಭಕ್ತಿ ಸೇವೆಯ ದಾಸೋಹಿಗಳಾದ ಶರಣೆ ಶರಣಮ್ಮ ಹಾಗೂ ಶರಣರಾದ ರವೀಂದ್ರ ಕಲಬುರ್ಗಿ ತೋರಣಾ ಇವರಿಗೆ ಪೂಜ್ಯ ಮಾತಾಜಿಯವರು ಸನ್ಮಾನಿಸಿದರು. ಸಂಗಮೇಶ್ವರ ಎಸ್ ಮುರ್ಕೆ ಅವರಿಗೆ ಶಿವಕುಮಾರ್ ಕುಂಬಾರ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗುರು ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷರಾದ ನಾಗಯ್ಯ ಸ್ವಾಮಿ ಹಾಗೂ ಉಪಾಧ್ಯಕ್ಷರಾದ ಕುಂಬಾರ ಸರ್ ಹಾಗೂ ಸಧ್ಯಸರು ಮತ್ತು ಅಣ್ಣನ ಬಳಗದವರು ಅಕ್ಕನ ಬಳಗದವರು ಉಪಸ್ಥಿದ್ದರು.
ಕಾರ್ಯಕ್ರಮದ ಮೊದಲು ಶರಣ ನಾಗನಾಥ್ ಶಂಕು ಸ್ವಾಗತ ಕೊರಿದರು.ಕಾರ್ಯಕ್ರಮವು ಮಂಗಳ ದೊಂದಿಗೆ ಮುಕ್ತಾ ಕೈಗೊಂಡಿತು.