ಸಾಹಿತಿ ಮುರಗೆಪ್ಪ.ಆರ್.ಹೆಚ್. ಹಣಮನಹಳ್ಳಿಯವರಿಗೆ ಅಂತರಾಷ್ಟ್ರೀಯ ಮಟ್ಟದ ಕವಿ ಕುಲಪತಿ ಪ್ರಶಸ್ತಿ ಸೇಡಂ: ಜುಲೈ 21, 2025

ಸಾಹಿತಿ ಮುರಗೆಪ್ಪ.ಆರ್.ಹೆಚ್. ಹಣಮನಹಳ್ಳಿಯವರಿಗೆ ಅಂತರಾಷ್ಟ್ರೀಯ ಮಟ್ಟದ ಕವಿ ಕುಲಪತಿ ಪ್ರಶಸ್ತಿ  ಸೇಡಂ: ಜುಲೈ 21, 2025

ಸಾಹಿತಿ ಮುರಗೆಪ್ಪ.ಆರ್.ಹೆಚ್. ಹಣಮನಹಳ್ಳಿಯವರಿಗೆ ಅಂತರಾಷ್ಟ್ರೀಯ ಮಟ್ಟದ ಕವಿ ಕುಲಪತಿ ಪ್ರಶಸ್ತಿ 

ಸೇಡಂ: ಜುಲೈ 21, 2025 ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಹೆಸರಾಂತ ಸಾಹಿತಿ ಶ್ರೀ ಮುರಗೆಪ್ಪ ಆರ್. ಹೆಚ್. ಹಣಮನಹಳ್ಳಿಯವರು ತಮ್ಮ ನಿರಂತರವಾದ ಸಾಹಿತ್ಯ ಸೇವೆಗಾಗಿ ಅಂತರಾಷ್ಟ್ರೀಯ ಮಟ್ಟದ ಕವಿ ಕುಲಪತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.), ನಾಗರಮುನ್ನೋಳಿ ಇವರ ವತಿಯಿಂದ ನೀಡಲಾಗುತ್ತಿದ್ದು, 2025ನೇ ಸಾಲಿನ ಗೌರವಾನ್ವಿತ ಪ್ರಶಸ್ತಿಯಾಗಿರುತ್ತದೆ.

ಫೌಂಡೇಶನ್‌ನ ಅಧ್ಯಕ್ಷರಾದ ಶ್ರೀ ಲಾಲಸಾಬ ಎಚ್. ಪೆಂಡರಿರವರು ನೀಡಿದ ಪ್ರಕಟಣೆಯಂತೆ, ಈ ಪ್ರಶಸ್ತಿ ಉದ್ಘಾಟನಾ ಸಮಾರಂಭದಲ್ಲಿ ಇದೇ ತಿಂಗಳು 27ರಂದು ಘೋಷಣೆಯಾಗಿ ಪ್ರಧಾನ ಮಾಡಲಾಗಲಿದೆ.

ಶ್ರೀ ಮುರಗೆಪ್ಪ ಹಣಮನಹಳ್ಳಿಯವರು ಹಲವು ವರ್ಷಗಳಿಂದ ಕವನ, ಸಾಹಿತ್ಯ, ಜನಪದ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಷೆ ಮತ್ತು ಸಂಸ್ಕೃತಿಯ ಪರಿಪೋಷಣೆಯಲ್ಲಿ ತೊಡಗಿದ್ದಾರೆ. ಇವರ ಕೃತಿಗಳು ಸಾಮಾಜಿಕ ಸಮಸ್ಯೆಗಳ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಸಾಹಿತ್ಯ ಕ್ಷೇತ್ರದಲ್ಲಿ ಈ ರೀತಿಯ ಗೌರವ ಅವರು ಪಡೆದಿರುವುದು ನಾಡಿಗೆ ಹೆಮ್ಮೆ ಹಾಗೂ ಯುವ ಲೇಖಕರಿಗೆ ಪ್ರೇರಣೆಯಾಗಿದೆ.