ಸನ್‌ರೈಸ್ ಆನ್ಕೋಕೇರ್ ಆರಂಭ: ಇನ್ಮುಂದೆ ಕ್ಯಾನ್ಸರ್‌ಗೂ ಚಿಕಿತ್ಸೆ ಕಲಬುರಗಿ: ವಿಶ್ವಕ್ಯಾನ್ಸರ್ ದಿನ ಎಂದೇ ಆಚರಿಸಲಾಗುವ

ಸನ್‌ರೈಸ್ ಆನ್ಕೋಕೇರ್ ಆರಂಭ: ಇನ್ಮುಂದೆ ಕ್ಯಾನ್ಸರ್‌ಗೂ ಚಿಕಿತ್ಸೆ ಕಲಬುರಗಿ: ವಿಶ್ವಕ್ಯಾನ್ಸರ್ ದಿನ ಎಂದೇ ಆಚರಿಸಲಾಗುವ

ಸನ್‌ರೈಸ್ ಆನ್ಕೋಕೇರ್ ಆರಂಭ: ಇನ್ಮುಂದೆ ಕ್ಯಾನ್ಸರ್‌ಗೂ ಚಿಕಿತ್ಸೆ

ಕಲಬುರಗಿ: ವಿಶ್ವಕ್ಯಾನ್ಸರ್ ದಿನ ಎಂದೇ ಆಚರಿಸಲಾಗುವ 

ಫೆ.4ರಂದು ಇಲ್ಲಿನಕೇಂದ್ರ ಬಸ್ ನಿಲ್ದಾಣರಸ್ತೆಯಲ್ಲಿರುವ ಸನ್ ರೈಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಚಿಕಿತ್ಸಾ ವಿಭಾಗವನ್ನು ಕಲಬುರಗಿ ಉತ್ತರಕ್ಷೇತ್ರದ ಶಾಸಕಿ ಹಾಗೂ ಕರ್ನಾಟಕರೇಷ್ಮೆ ಮಂಡಳಿ ಅಧ್ಯಕ್ಷೆ ಕನೀಜ್ ಫಾತಿಮಾ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಈ ಭಾಗದಲ್ಲಿ ಜನರಿಗೆ ಕೈಗೆಟಕುವ ದರಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುತ್ತಾ ಬಂದಿರುವ ಸನ್‌ರೈಸ್ ಆಸ್ಪತ್ರೆಯು ಕೆವಿಡ್ ಅವಧಿಯಲ್ಲಿ ನೂರಾರುಜನರಜೀವ ಉಳಿಸುವ ಮೂಲಕ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಗಳಿಸಿದೆ. ಡಾ.ಸಲ್ಮಾನ್ ಪಟೇಲ್ ಅವರ ನಾಯಕತ್ವದ ಸನ್‌ರೈಸ್ ಆಸ್ಪತ್ರೆಯಲ್ಲಿ ಇನ್ನು ಮುಂದೆಕ್ಯಾನ್ಸರ್ ರೋಗಕ್ಕೂ ಕೈಗೆಟಕುವ ದರಗಳಲ್ಲಿ ಚಿಕಿತ್ಸೆ ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇವೇಳೆ, ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಲಬುರಗಿದಕ್ಷಿಣಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಬದುಕಿನಲ್ಲಿ ಎಷ್ಟೇ ಸಂಪತ್ತು ಇದ್ದರೂ ಆರೋಗ್ಯವೇಭಾಗ್ಯ ಇಲ್ಲದೆ ಹೋದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಹಾಗಾಗಿ,ಜನರಿಗೆ ಕೈಗೆಟಕುವದರದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಡಾ.ಸಲ್ಮಾನ್ ಪಟೇಲ್ ಹಾಗೂ ಅವರ ನೇತೃತ್ವದತಂಡ ಕಲ್ಯಾಣಕರ್ನಾಟಕ ಭಾಗದಲ್ಲಿಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು. 

ಉದ್ಘಾಟನಾ ಸಮಾರಂಭದಲ್ಲಿ ಫರಾಜುಲ್ ಇಸ್ಲಾಂ, ಏಷ್ಯನ್ ಬಿಸಿನೆಸ್ ಗ್ರೂಪ್‌ನ ಮೊಹ್ಮದ್ ರಫಿಯುದ್ದೀನ್, ಕಾಂಗ್ರೆಸ್ ಮುಖಂಡರಾದ ಪಪ್ಪು ಪಟೇಲ್, ಲಿಂಗರಾಜ ಕಣ್ಣಿ ಸೇರಿದಂತೆ ಇತರರಿದ್ದರು.

ಫೆ.10ರವರೆಗೆ ಉಚಿತ ತಪಾಸಣೆ: ಇದಕ್ಕೂಮುಂಚೆ,ಸನ್ ರೈಸ್ ಆಸ್ಪತ್ರೆಯ ನಿರ್ದೇಶಕಡಾ.ಸಲ್ಫಾನ್ ಪಟೇಲ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸನ್‌ರೈಸ್‌ಆಸ್ಪತ್ರೆ ವತಿಯಿಂದ ಫೆ.10ರವರೆಗೆ ಉಚಿತವಾಗಿ ಕ್ಯಾನ್ಸರ್‌ತಪಾಸಣಾ ಹಮ್ಮಿಕೊಳ್ಳಲಾಗಿದೆ. ಹೆಸರಾಂತ ಕ್ಯಾನ್ಸರ್‌ತಜ್ಞ ಡಾ.ಸಂದೀಪ್ ಕೆ.ಎಸ್ ತಪಾಸಣೆ ನಡೆಸಲಿದ್ದಾರೆ. ಹಾಗಾಗಿ, ಈ ಭಾಗದಜನರುತಪಾಸಣೆ ಮಾಡಿಸಿಕೊಳ್ಳಲು ಮುಂದೆ ಬರಬೇಕೆಂದು ಮನವಿ ಮಾಡಿದರು.

ಇದೇವೇಳೆ, ಸೈನ್ ರೈಸ್ ಅನ್ನೋಕೇರ್ ಕುರಿತು ಮಾಹಿತಿ ನೀಡಿದ ಅವರು. ಒಂದು ವೇಳೆ ಯಾವುದೇ ಶಿಬಿರಾರ್ಥಿಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದರೆ ಆರಂಭಿಕ ಹಂತವಾಗಿ ವಿಶೇಷ ರಿಯಾಯಿತಿದರದಲ್ಲಿ ಫೆ.10ರವರೆಗೆ ಉಳಿದ ಪೂರಕ ತಪಾಸಣಾ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ಪುರುಷರಿಗೆ ಸಿಬಿಸಿ, ಎಲ್‌ಎಫ್‌ಟಿ, ಆರ್‌ಎಫ್‌ಟಿ,ಪಿಎಸ್‌ಎ,ಎಕ್ಸೆರೇ, ಯುಎಸ್‌ಜಿ ಅಬ್ಬಮನ್ ತಪಾಸಣಾ ದರವನ್ನು ಕೇವಲ ರೂ. 1750ರಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಿಳೆಯರಿಗೆ ಕ್ಯಾನ್ಸರ್ ಸಂಬAಧಿ ಪೂರಕ ತಪಾಸಣೆಗಳಾದ ಸಿಬಿಸಿ, ಎಲ್‌ಎಫ್‌ಟಿ, ಆರ್‌ಎಫ್‌ಟಿ, ಸಿಎ 125, ಎದೆಭಾಗದ ಎಕ್ಸರೇ, ಯುಎಸ್‌ಜಿಅಬ್ಬಮನ್‌ತಪಾಸಣೆಯನ್ನು ಕೇವಲ ರೂ.1850ರಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾನ್ಸರ್ ತಜ್ಞರಾದ ಡಾ.ಸಂದೀಪ್ ಕೆ.ಎಸ್..ಡಾ. ಅರುಣಕುಮಾರ್ ಬರಾಡ್, ರಫಿಯುದ್ದೀನ್ ಮನಿಯಾರ್, ಡಾ.ಅಹ್ಮದ್ ಫರಾಜ್ ಪಟೇಲ್, ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ರಾಜಕುಮಾರ್ ರೊದ್ವಾ, ಅಶ್ವಿನ್ ಪೋಲ್ಟಾರ್ ಸೇರಿದಂತೆ ಇತರರಿದ್ದರು.

ಸನ್ ರೈಸ್ ಅನ್ನೋಕೇರ್ ವಿಭಾಗದಲ್ಲಿ ಕೀಮೊಥೆರಪಿ, ಇಮ್ಯುನೊಥೆರಪಿ, ಟಾರ್ಗೆಟೆಡ್ ಥೆರಪಿಗೆ ಸಂಬAಧಿಸಿದ ತಜ್ಞರನ್ನು ಒಳಗೊಂಡಿದ್ದು, ಸುಧಾರಿತ ಕ್ಯಾನ್ಸರ್‌ಚಿಕಿತ್ಸಾ ಕ್ರಮಗಳನ್ನು ಒದಗಿಸುವ ಪರಿಣತ ಸರ್ಜಿಕಲ್ ಕ್ಯಾನ್ಸರ್ ತಜ್ಞರೂ ಇದ್ದಾರೆ.ಮೇಲಾಗಿ ಪರಿಣಾಮಕಾರಿಚಿಕಿತ್ಸೆಗೆ ಅಗತ್ಯವಿರುವ ಪ್ರತ್ಯೇಕ ಐಸಿಯು ವಿಭಾಗ ಸಹ ಕಾರ್ಯನಿರ್ವಹಿಸುತ್ತಿದೆ.

(ಡಾ.ಸಲ್ಮಾನ್ ಪಟೇಲ್ ನಿರ್ದೇಶಕರು ಸನ್‌ರೈಸ್‌ಆಸ್ಪತ್ರೆ, ಕಲಬುರಗಿ)