ಸುರಕ್ಷಾ ಆಸ್ಪತ್ರೆಯ ಮುಖ್ಯಸ್ಥೆ ಡಾ. ಚಂದ್ರಿಕಾ ಅವರ ಆಸ್ಪತ್ರೆಯ ಪರವಾನಿಗೆ ರದ್ದುಮಾಡಬೇಕೆಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರಿಗೆ ಮನವಿ

ಸುರಕ್ಷಾ ಆಸ್ಪತ್ರೆಯ ಮುಖ್ಯಸ್ಥೆ ಡಾ. ಚಂದ್ರಿಕಾ ಅವರ ಆಸ್ಪತ್ರೆಯ ಪರವಾನಿಗೆ ರದ್ದುಮಾಡಬೇಕೆಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರಿಗೆ ಮನವಿ
ಕಲಬುರಗಿ: ನಗರದಲ್ಲಿ ಮಾರ್ಚ 5.ರಂದು ಕಿರಿಯ ವಯಸ್ಸಿನ ಗರ್ಭಿಣಿ ಮಹಿಳೆ ಜ್ಯೋತಿ ಕಟ್ಟಿಮನಿ ಸಾವಿಗೆ ಕಾರಣರಾಗಿರುವ ಸುರಕ್ಷಾ ಆಸ್ಪತ್ರೆಯ ಮುಖ್ಯಸ್ಥೆ ಡಾ. ಚಂದ್ರಿಕಾ ಅವರ ಆಸ್ಪತ್ರೆಯ ಪರವಾನಿಗೆ ರದ್ದುಮಾಡಬೇಕೆಂದು ಒತ್ತಾಯಿಸಿ ಮಾದಿಗ ವಿವಿಧ ಸಂಘಟನೆ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳಿAದ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸುರಕ್ಷಾ ಆಸ್ಪತ್ರೆಯ ಮುಖ್ಯಸ್ಥೆ ಡಾ. ಚಂದ್ರಿಕಾ ಅವರಿಗೆ ಬೆಂಬಲಿಸುತಿರುವ ಜಿಲ್ಲಾ ವೈದ್ಯಧಿಕಾರಿಗಳನ್ನು ಅಮಾನತು ಮಾಡಬೇಕು, ಗರ್ಭಿಣಿ ಮಹಿಳೆ ಜ್ಯೋತಿ ಅವರ ಕುಟುಂಬಸ್ಥರ ಮೇಲೆ ಹಾಕಿದಂತಾ ಎಲ್ಲಾ ಮೋಕದಮೇಗಳು ಸರಕಾರ ಹಿಂಪಡಿಯಬೇಕು. ಜ್ಯೋತಿ ಮಕ್ಕಳ ಉಪ ಜಿವನಕಾಗಿ ಸರಕಾರದಿಂದ ಸೂಕ್ತ ಪರಿಹಾರ ನಿಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ದಸರಥ ಎಂ.ಕಲಗುರ್ತಿ, ಜಿಲ್ಲಾ ಮಾದಿಗ ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷ ಶರಣು ಎಸ್.ಸಗರಕರ್, ಡಾ.ಬಾಬು ಜಗಜಿವನರಾಮ್ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ನಗರಾಧ್ಯಕ್ಷ ಸಚೀನ ಆರ್.ಕಟ್ಟಿಮನಿ, ಮಾದಿಗ ಸಮಾಜ ಯುವ ಹೋರಾಟಗಾರ ಚಂದಪ್ಪ ಎಲ್.ಕಟ್ಟಿಮನಿ, ಡಾ.ಬಾಬು ಜಗಜಿವನರಾಮ್ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ತಾಲೂಕ ಉಪಾಧ್ಯಕ್ಷ ಸತೀಶ ನೀಲೂರ ಸೇರಿದಂತೆ ಇತರರು ಇದ್ದರು.