ಜಯನಗರ ಶಿವಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿದ ದಾನಮ್ಮ ದೇವಿಯ ತೊಟ್ಟಿಲು ಕಾರ್ಯಕ್ರಮ

ಜಯನಗರ ಶಿವಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿದ ದಾನಮ್ಮ ದೇವಿಯ ತೊಟ್ಟಿಲು ಕಾರ್ಯಕ್ರಮ
ಕಲಬುರಗಿ: ಶ್ರಾವಣ ಮಾಸ ನಿಮಿತ್ತ ಜಯನಗರ ಶಿವ ಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಒಂದು ತಿಂಗಳ ಪುರಾಣ ಕಾರ್ಯಕ್ರಮದ 7 ನೆಯ ದಿನವಾದ ಗುರುವಾರ ಸಂಜೆ ದಾನಮ್ಮನ ನಾಮಕರಣ ತೊಟ್ಟಿಲು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ನಗರದ ನಾನಾ ಬಡಾವಣೆಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಹೆಣ್ಣುಮಕ್ಕಳು ಆಗಮಿಸಿ ತೊಟ್ಟಿಲು ತೂಗುತ್ತ ಪದಗಳನ್ನು ಹಾಡಿದರು.ಇದಕ್ಕೂ ಮೊದಲು ತೊಟ್ಟಿಲಿಗೆ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ, ಮುತ್ತೈದೆ ಹೆಣ್ಣು ಮಕ್ಕಳಿಗೆ ಸೀರೆ ಉಡಿಸುವ ಶಾಸ್ತ್ರೋತ್ಸವ ನಡೆಯಿತು.ನೆರೆದಿದ್ದ ಜನರಿಂದ ಗುಡ್ಡಾಪೂರ ಶ್ರೀ ದಾನಮ್ಮನ ಜೈ ಘೋಷಣೆಗಳು ಮೊಳಗಿದವು.
ನಂತರ ಮಾತನಾಡಿದ ಪುರಾಣ ಪಂಡಿತ ವೇದಮೂರ್ತಿ ಶ್ರೀ ತೋಟಯ್ಯ ಶಾಸ್ತ್ರೀಗಳು ಬೇಡಿ ಬಂದ ಭಕ್ತರಿಗೆ ಬೇಡಿದ ವರವನ್ನು ಕರುಣಿಸುವಳು.ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ನೀಡುವಳು.ದಾನಮ್ಮ ದೇವಿಯ ಚರಿತ್ರೆ ಅಪಾರವಾದದ್ದು.ಆ ಮಾತೆಯನ್ನು ಎಷ್ಟು ವರ್ಣಿಸಿದರೂ ಸಾಲದು ಎಂದು ಹೇಳಿದರು.
ದೇವರು ಎಂದರೆ ಒಪ್ಪಬಹುದು.ಆದರೆ ಕೈಲಾಸ ಎಂಬುದು ಕರ್ಮ ಕಳೆಯುವ ಸ್ಥಾನವಾಗಿದೆ.ದೇವರನ್ನು ಭಕ್ತಿಯಿಂದ ಅನುಭವಿಸಬೇಕು.ನಿರ್ಮಲ ಮನಸ್ಸು ಉಳ್ಳವರು ಭಕ್ತಿಯಿಂದ ನೆನೆದರೆ ಅಂಥವರಿಗೆ ಪಾಲಿಸುವಳು. ಗುಡ್ಡಾಪೂರದಲ್ಲಿ ನೆಲೆಸಿ ಭಕ್ತರ ಆರಾಧ್ಯ ದೈವ ಎನಿಸಿಕೊಂಡವಳು.ಜಯನಗರದ ಶಿವ ಮಂದಿರದಲ್ಲಿ ದಾನಮ್ಮ ದೇವಿಯ ನಾಮಕರಣ ಮಾಡುವ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟಿರುವ ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.
ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ಶಿವಮಂದಿರದಲ್ಲಿ ಟ್ರಸ್ಟ್ ಮಹಿಳಾ ಘಟಕದ ಮಹಿಳೆಯರು ನಡೆಸಿಕೊಟ್ಟ ಇಂದಿನ ತೊಟ್ಟಿಲು ಕಾರ್ಯಕ್ರಮ ಐತಿಹಾಸಿಕವಾಗಿದೆ.ದಾನಮ್ಮ ದೇವಿಯ ಕೃಪೆ ಎಲ್ಲರ ಮೇಲೂ ಇರಲಿ.ಒಂದು ತಿಂಗಳು ಹಮ್ಮಿಕೊಂಡಿರುವ ಪುರಾಣ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಟ್ರಸ್ಟ್ ಪದಾಧಿಕಾರಿಗಳಾದ ವಿರೇಶ ದಂಡೋತಿ.ಬಂಡಪ್ಪ ಕೇಸೂರ,ಸಿದ್ಧಲಿಂಗ ಗುಬ್ಬಿ,ಮಲ್ಲಯ್ಯ ಸ್ವಾಮಿ ಗಂಗಾಧರಮಠ.ಮನೋಹರ ಬಡಶೇಷಿ,ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ,ಭೀಮಾಶಂಕರ ಶೆಟ್ಟಿ, ಗುರುಪಾದಪ್ಪ ಕಾಂತಾ, ಬಸವರಾಜ ಪುರ್ಮ,ವೀರಪ್ಪ ಹುಡಗಿ, ನಾಗರಾಜ ಖೂಬಾ,ಶಿವಪುತ್ರಪ್ಪ ಮರಡಿ, ಮಲ್ಲಯ್ಯ ಸ್ವಾಮಿ ಬೀದಿಮನಿ,ಗುಡಿಯ ಅರ್ಚಕ ವೀರಯ್ಯ ಹಿರೇಮಠ,ಮಹಿಳಾ ಘಟಕದ ಪದಾಧಿಕಾರಿಗಳಾದ ಶೈಲಜಾ ವಾಲಿ,ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ, ಸುರೇಖಾ ಬಾಲಕೊಂದೆ, ವಿಜಯಾ ಚವ್ಹಾಣ,ಅನಿತಾ ನವಣಿ,ಲತಾ ತುಪ್ಪದ, ಗೀತಾ ಸಿರಗಾಪೂರ,ವಿಜಯಾ ದಂಡೋತಿ, ಗೀತಾ ಹುಡುಗಿ, ಪಾರ್ವತಿ ಶೆಟ್ಟಿ,ಗಂಗಾ ಅನ್ವರಕರ, ವಿಜಯಲಕ್ಷ್ಮಿ ಪುರ್ಮ,ಶಿವಲಿಲಾ ಬೊಮ್ಮಣ ಸೇರಿದಂತೆ ವಿವಿಧ ಬಡಾವಣೆಗಳ ನೂರಾರು ಮಹಿಳೆಯರು, ಹಿರಿಯರು,ಮಕ್ಕಳು ಭಾಗವಹಿಸಿದ್ದರು.