ರಸಾಯನಶಾಸ್ತ್ರ ಕೇವಲ ವಿಜ್ಞಾನದ ಒಂದು ವಿಷಯವಲ್ಲ ಜೀವನದ ಬಗ್ಗೆ ಹೇಳುತ್ತದೆ ಡಾ ಈರೇಗೌಡ
ರಸಾಯನಶಾಸ್ತ್ರ ಕೇವಲ ವಿಜ್ಞಾನದ ಒಂದು ವಿಷಯವಲ್ಲ ಜೀವನದ ಬಗ್ಗೆ ಹೇಳುತ್ತದೆ ಡಾ ಈರೇಗೌಡ
ರಸಾಯನಶಾಸ್ತ್ರವು ವಿಜ್ಞಾನದ ಒಂದು ಭಾಗ ಮಾತ್ರವಲ್ಲ, ಪ್ರೀತಿ, ಬದಲಾವಣೆ ಮತ್ತು ಜೀವನದ ಬಗ್ಗೆಯೂ ಮಾತಾಡುತ್ತದೆ ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ರಾಜ್ಯಾಧ್ಯಕ್ಷ ಡಾ ಜಿ ಬಿ ಈರೇಗೌಡ ಹೇಳಿದರು
ಅವರು ಶ್ರೀ ಗುರು ನಾಗಲಿಂಗೇಶ್ವರ ಕಾಲೇಜಿನಲ್ಲಿ ನಡೆದ ಕಲಬುರ್ಗಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆಯ 25 ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಇದು ಪರಮಾಣುಗಳ ಆಟದಿಂದ ಹಿಡಿದು ಪ್ರಪಂಚದ ಶಾಂತಿ ಮತ್ತು ಮಾನವ ಸಂಬಂಧಗಳವರೆಗೆ ಎಲ್ಲವನ್ನೂ ಅನ್ವೇಷಿಸುತ್ತದೆ, ಮತ್ತು ನಾವು ಅದನ್ನು ಕಲಿಯುವುದರಿಂದ ಜಗತ್ತು ಸುಧಾರಿಸುತ್ತದೆ ಎಂದು ಹೇಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಬುರ್ಗಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ಉಪನಿರ್ದೇಶಕರಾದ ಸುರೇಶ್ ಅಕ್ಕಣ್ಣ ಮಾತನಾಡಿ ಒಂದು ವಿಷಯದ ಸಂಘ 25 ವರ್ಷಗಳವರೆಗೆ ನಿರಂತರವಾಗಿ ಕಾರ್ಯ ಚಟುವಟಿಕೆ ಮಾಡುತ್ತಿರುವದು ಶ್ಲಾಘನೀಯ ಎಂದು ಹೇಳಿದರು. ಇಂದಿನ ಈ ಬೆಳ್ಳಿ ಹಬ್ಬದಲ್ಲಿ ಈ ವೇದಿಕೆ ಹುಟ್ಟು ಹಾಕಿದ ಸಂಸ್ಥಾಪಕರು ಹಾಗೂ ಇದನ್ನು ಮುನ್ನಡೆಸುತ್ತಿರುವ ಈಗಿನ ಸಿಬ್ಬಂದಿ ಹಾಗೂ ರಸಾಯನ ಶಾಸ್ತ್ರ ವಿಷಯದ ಜೋತೆ ಎಲ್ಲ ವಿಷಯಗಳ ಉಪನ್ಯಾಸಕರು ಒಂದೆಡೆ ಸೇರಿ ಕಾರ್ಯಕ್ರಮ ಮಾಡುತ್ತಿರುವದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಈ ಬಾರಿ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಹೆಚ್ಚಾಗುವ ದಿಸೆಯಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾದ ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ್ ಎಂ ಡಿ ಮಾತನಾಡಿ ಕಲ್ಯಾಣ ಕರ್ನಾಟಕ ಜನತೆ ಪ್ರೀತಿ ವಿಶ್ವಾಸ ಎಂದೂ ಮರೆಯಲು ಸಾಧ್ಯವಿಲ್ಲ ಏಕೆಂದರೆ ನಾನು ಈ ಭಾಗದಲ್ಲಿ ಕೆಲಸ ನಿರ್ವಹಿಸಿರುವೆ ಅದನ್ನು ನಾನೆಂದೂ ಮರೆಯಲಾರೆ ಎಂದು ಹೇಳಿದರು.
ವೇದಿಕೆಯ ಮೇಲೆ ಕಲಬುರ್ಗಿ ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಶಿವಾನಂದ ಖಜೂರಿ, ಡಾ ಪ್ರಹ್ಲಾದ ಬುರ್ಲಿ, ನಿತೀನ್ ನಾಯಕ, ವಿಭಾಗಿಯ ಅಧ್ಯಕ್ಷರಾದ ಎಂ ವೀರನಗೌಡ, ಶಶಿಕಾಂತ ಗುಳೇದ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ರಾಜಕುಮಾರ್ ಬಾಸುತ್ಕರ ವಹಿಸಿದ್ದರು
ಸಂಸ್ಥಾಪಕ ಅಧ್ಯಕ್ಷರಾದ ಡಾ ಎಂ ಎನ್ ಹೊಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರಾಚಾರ್ಯರಾದ ಶಿವರಾಜ್ ಶೀಲವಂತ ಸ್ವಾಗತಿಸಿದರು ಗುರುರಾಜ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು ಬಸವರಾಜ ಅಂಗಡಿ ವಂದಿಸಿದರು
