ತೊಗರಿ ಬೆಳೆ ಪರಿಹಾರಕ್ಕೆ ಹೋರಾಟ ಮಾಡಿದ ರೈತರಿಗೆ ಸನ್ಮಾನ

ತೊಗರಿ ಬೆಳೆ ಪರಿಹಾರಕ್ಕೆ ಹೋರಾಟ ಮಾಡಿದ ರೈತರಿಗೆ ಸನ್ಮಾನ
ಕಲಬುರಗಿ: ತೊಗರಿ ಬೆಳೆ ಪರಿಹಾರ ಬೇಡಿಕೆಗಾಗಿ ನಿರಂತರವಾಗಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಮುಖ್ಯ ರಸ್ತೆಯ ಮೇಲೆ ಎತ್ತು ಬಂಡಿ ಟ್ಯಾಕ್ಟರ್ ಸೇರಿದಂತೆ ಮೂರು ದಿನಗಳ ಕಾಲ ಹೋರಾಟ ನಡೆಸಿ ಯಶಸ್ವಿಗೊಳಿಸಿದ ರೈತರ ಗ್ರಾಮಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಲ್ಲಿನಾಥ ಕೊಳ್ಳೂರ ಮೇಳಕುಂದಾ (ಬಿ), ಮಹೇಶ್ ಗೌಡ ಹಡಗಿಲ, ಈರಣಪ್ಪ ಪಾಟೀಲ ಮೇಳಕುಂದಾ, ಕೆ. ವಿಶಾಲ ಪಾಟೀಲ ಶರಣಶಿರಸಗಿ, ಅವ್ವಣ್ಣ ಮ್ಯಾಕೇರಿ, ಮಲ್ಲಿನಾಥ ಕುಲಕರ್ಣಿ, ದಯಾನಂದ ಪಾಟೀಲ, ಬಸವರಾಜ ಇಂಗಿನ, ಸಿದ್ರಾಮಪ್ಪ ದಂಗಾಪೂರ, ದೋಡ್ಡಪ್ಪ ಕಾಮಾ, ಸುರೇಶ ಸಜ್ಜನ ಸೇರಿದಂತೆ ಹೋರಾಟದಲ್ಲಿ ಪಾಲ್ಗೊಂಡ ಹಲವು ರೈತರ ಕಲಬುರಗಿ ಜಿಲ್ಲಾ ರೈತ ಹೋರಾಟಗಾರರ ಸಮಿತಿ ಅವರು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಪ್ರಗತಿಪರ ರೈತ ಮಲ್ಲಿನಾಥ ಕೊಳ್ಳೂರ ಮೇಳಕುಂದಾ (ಬಿ)
ಅವರು, "ರೈತರ ಹಿತದೃಷ್ಠಿಯಿಂದ ನಾವು ಸದಾ ಅವರೊಂದಿಗೆ ಇದ್ದೇವೆ. ಸರ್ಕಾರ ತೊಗರಿ ಬೇಳೆ ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದರು. ಅವಣ್ಣ ಮ್ಯಾಕೆರಿ ಹಾಗೂ ಮಲ್ಲಿನಾಥ್ ಕುಲಕರ್ಣಿ ಕೋಳಕೂರ್ ಹೋರಾಟದ ಕುರಿತು ಮಾತನಾಡಿದರು. ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.