ಕ್ರೀಡೋತ್ಸವ ಮತ್ತು ಸುವರ್ಣ ಮಹೋತ್ಸವಕ್ಕೆ ಕಲಬುರ್ಗಿ ಕ್ರಿಕೆಟ್ ತಂಡ ಆಯ್ಕೆ

ಕ್ರೀಡೋತ್ಸವ ಮತ್ತು ಸುವರ್ಣ ಮಹೋತ್ಸವಕ್ಕೆ ಕಲಬುರ್ಗಿ ಕ್ರಿಕೆಟ್ ತಂಡ ಆಯ್ಕೆ

ಕ್ರೀಡೋತ್ಸವ ಮತ್ತು ಸುವರ್ಣ ಮಹೋತ್ಸವಕ್ಕೆ ಕಲಬುರ್ಗಿ ಕ್ರಿಕೆಟ್ ತಂಡ ಆಯ್ಕೆ

ಕಲಬುರಗಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತೇದಾರರ ಸಂಘ ರಿಜಿಸ್ಟರ್ ಬೆಂಗಳೂರು ಜಿಲ್ಲಾ ಸಮಿತಿ ಬೆಳಗಾವಿ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಕ್ರೀಡೋತ್ಸವ ಮತ್ತು ಸುವರ್ಣ ಮಹೋತ್ಸವ ೨೦೨೪ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಸಮಿತಿಯಿಂದ ಆಯ್ಕೆಯಾಗಿರುವ ಕ್ರಿಕೆಟ್ ತಂಡದ ಕಲ್ಯಾಣ ಕರ್ನಾಟಕ ಭಾಗದ ವೈಸ್ ಚೆರ್ಮನ್ ಆಗಿರುವ ಬಸವರಾಜ್ ಒಡೆಯರ್ ಮತ್ತು ತಂಡದ ಮುಖ್ಯಸ್ಥರಾದ ಯಾಸಿನ್ ಅವರು ಬೆಳಗಾವಿಯಲ್ಲಿ ನಡೆದಿರುವ ಕ್ರಿಕೆಟ್ ಪಂದ್ಯಾವಳಿಯ ಸತತ ಏಳು ಪಂದ್ಯಗಳನ್ನು ಗೆದ್ದಿದಕ್ಕೆ ಅವರಿಗೆ ಟ್ರೋಫಿ ವಿತರಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಆರ್.ಆರ್ ತಂಡದ ಜಿಲ್ಲಾಧ್ಯಕ್ಷ ಬಿ ಆರ್ ಮಾಲಿಪಾಟೀಲ್, ಜಿಲ್ಲಾ ಉಪಾಧ್ಯಕ್ಷರಾದ ಮುಬೀನ್ ಅಹಮದ್, ಬಸವರಾಜ್ ಮೇತ್ರಿ, ಕಾರ್ಯದರ್ಶಿ ಕುಪೇಂದ್ರ, ಸಂಘಟನಾ ಕಾರ್ಯದರ್ಶಿ ಧರ್ಮರಾಜ ಒಡೆಯರಾಜ್, ಖಜಾಂಚಿ ನಾಗರಾಜ್ ಕಿಣಿಗಿ ಮತ್ತು ಕಲ್ಬುರ್ಗಿ ತಾಲೂಕಿನ ತಾಲೂಕ ಅಧ್ಯಕ್ಷರಾದ ಶಿವಕುಮಾರ್ ಎಸ್ ಕೆ ಇವರೆಲ್ಲರೂಗಳ ನೇತೃತ್ವದಲ್ಲಿ ತಂಡ ರಚನೆಯಾಗಿ ಬೆಳಗಾವಿಯಲ್ಲಿ ನಡೆದಿರುವ ಕ್ರಿಕೆಟ್ ಪಂದ್ಯಾವಳಿಯ ಸತತ ಏಳು ಬಾರಿ ಗೆಲುವನ್ನು ಸಾಧಿಸಿ ಕಪ್ಪನ್ನು ಕಲ್ಬುರ್ಗಿ ಜಿಲ್ಲಾ ಸಮಿತಿ ತಂಡದವರು ತಮ್ಮದಾಗಿಸಿಕೊಂಡಿದ್ದಾರೆ ತಂಡದವರನ್ನು ಮಾಜಿ ಉಪ ಕಾರ್ಯದರ್ಶಿಯಾಗಿರುವ ರಫೀಕ್ ಅಹಮದ್ ಮತ್ತು ಹಾಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಿಂಬಣ್ಣಾ ಬಿ.ಮಾಢ್ಯಳಕರ್ ಅವರು ಸ್ವಾಗತ ಕೋರಿ ಅಭಿನಂದಿಸಿದ್ದಾರೆ.