ಇನ್ನರ ಕ್ಲಬ್ ನಾರ್ಥ ಕಲಬುರಗಿ ವತಿಯಿಂದ ಸ್ತನ್ಯ ಪಾನ ಕುರಿತು ಜಾಗೃತಿ
ಇನ್ನರ ಕ್ಲಬ್ ನಾರ್ಥ ಕಲಬುರಗಿ ವತಿಯಿಂದ ಸ್ತನ್ಯ ಪಾನ ಸಪ್ತಾಹ ಕುರಿತು ಜಾಗೃತಿ
ಕಲಬುರ್ಗಿ: ಆಗಸ್ಟ್ 6.
ನಗರದ ಜಿಲ್ಲಾ ಸರಕಾರಿ ಜಿಮ್ಸ್ ಆಸ್ಪತ್ರೆ ಮಹಿಳಾ ವಾರ್ಡಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆ ಕಲಬುರಗಿ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ನಾರ್ತ್ ಕಲಬುರಗಿ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ, ಸ್ತ್ರೀ ರೋಗ ತಜ್ಞೆ ಡಾ.ಪೂಜಾ ಮೀಸೆ ಮಾತನಾಡುತ್ತ,
ಮಗು ಜನಿಸಿದ ಅರ್ಧ ಗಂಟೆಯಿಂದ ಒಂದು ಗಂಟೆ ಒಳಗಾಗಿ ಕಡ್ಡಾಯವಾಗಿ ತಾಯಿ ಹಾಲು ನೀಡಬೇಕು ಹಾಗೆ ಕನಿಷ್ಠ ಆರು ತಿಂಗಳು ಮಗು ಜನಿಸಿದ ಅರ್ಧ ಗಂಟೆಯಿಂದ ಒಂದು ಗಂಟೆ ಒಳಗಾಗಿ ಕಡ್ಡಾಯವಾಗಿ ತಾಯಿ ಹಾಲು ನೀಡಬೇಕು ಅದರಂತೆ ಕನಿಷ್ಠ ಆರು ತಿಂಗಳು ನಿಯಮಿತವಾಗಿ ಹಾಲು ಕುಡಿಸಬೇಕು ಇದರಲ್ಲಿ ನಿರ್ಲಕ್ಷ ತೋರಬಾರದು .
ತಾಯಿಯ ಹಾಲು ಅಮೃತಕ್ಕೆ ಸಮಾನವಾದದ್ದು, ಇದರಿಂದ ಮಗುವಿನ ಬೆಳವಣಿಗೆಗೆ ಅಗತ್ಯ ಇರುವ ಪೌಷ್ಟಿಕತೆಯ ಜತೆಗೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.
ಮಗುವಿಗೆ ತಾಯಿಯ ಹಾಲು ನೀಡುವುದರಿಂದ ತಾಯಿ ಮಗುವಿನ ನಡುವೆ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ. ಇಂತಹ ತಾಯಂದಿರಿಗೆ ಸ್ತನ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳು ಬರುವುದು ಅಪರೂಪ. ಆದ್ದರಿಂದ ಇಂತಹ ಮಾರಣಾಂತಿಕ ರೋಗಗಳ ಬಗ್ಗೆ ಇನ್ನರ್ ವೀಲ್ ಕ್ಲಬ್ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಸ್ತವಿಕವಾಗಿ ಮಾತುಗಳನ್ನಾಡಿದ ಡಾ. ಸಂಧ್ಯಾ, ಮೂಢನಂಬಿಕೆಯಿಂದ ಕುಡಿರುವ ಧೋರಣೆ ಬಿಟ್ಟು ಮಗುವಿಗೆ ಹಾಲುಣಿಸುವುದನ್ನು ಮಾಡಲು ತಾಯಂದಿರಿಗೆ ಕಿವಿ ಮಾತು ಹೇಳಿದರು. ತಾಯಿ ಮಗುವಿಗೆ ಹಾಲುಣಿಸುವುದು
ಹೊಸತಲ್ಲ, ಶತಮಾನದಿಂದಲೂ ಇದು ನಡೆದು ಬಂದಿದೆ, ಪ್ರಾಣಿಗಳಲ್ಲಿಯೂ ಸಹ ಇದನ್ನು ನಾವು ಕಾಣಬಹುದು. ಆದರೆ ಇತ್ತೀಚಿಗೆ ಆಧುನಿಕತೆಯ ಪ್ರಭಾವ ಹೆಚ್ಚಾಗುತ್ತಿದ್ದಂತೆ, ಮಹಿಳೆಯರ ಕಾರ್ಯಕ್ಷೇತ್ರವೂ ಬದಲಾಗುತ್ತಿದ್ದು ತಾಯಿ ಮತ್ತು ಮಗುವಿನ ಸುಮಧುರ ಬಾಂಧವ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರ್ಯಕ್ಷೇತ್ರ ಏನೇ ಆದರೂ,ಎಷ್ಷೆ ಕೆಲಸದ ಒತ್ತಡಗಳಿದ್ದರೂ ಮಗುವಿನ ತಾಯಿ ಎಂಬುದನ್ನು ಮಹಿಳೆ ಮರೆಯಬಾರದು.
ಸ್ತನ್ಯಪಾನ ಮಹತ್ವ ಬಾಂಣoತೀಯರಿಗೆ ಅರಿವು ಮೂಡಿಸುವ ,ಜಾಗೃತಿ ಕುರಿತ ಪೊಸ್ಟರ್ ಗಳನ್ನು ಬಿಡುಗಡೆಗೊಳಿಸಿ ನಂತರ ಹಾಲು ಬೆಲ್ಲವನ್ನು ತಾಯಂದಿರಿಗೆ, ಇನ್ನರ್ ವೀಲ್ ಕ್ಲಬ್ ಆಫ್ ನಾರ್ತ್ ಕಲಬುರಗಿ ಕ್ಲಬ್ ಅಧ್ಯಕ್ಷರಾದ ಸವಿತಾ ಹುಂಗೋದಿಮಠ , ಕಾರ್ಯದರ್ಶಿ ನಮ್ರತಾ ಪಥಾಟೆ , ಬೋರ್ಡ್ ಸದಸ್ಯೆ ಅನುರಾಧ ಹಡಗಲಿಮಠ, ಸದಸ್ಯರಗಳಾದ ಡಾ. ಸಂಧ್ಯಾ ಕಾನೇಕರ್, ಶ್ರೀದೇವಿ. ಅವರು ವಿವರಿಸಿದರು.
ಡಾ ಸಂಗಮ್ಮ ನೀರೂಪಿಸಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಗುವಿನ ತಾಯಂದಿರಿಯರು. ಇನ್ನರ ಕ್ಲಬ್ ನಾರ್ಥ ಕಲಬುರಗಿಯ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.