ಹದಗೆಟ್ಟ ಶಹಾಬಾದ ಜೇವರ್ಗಿ ರಸ್ತೆ : ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿ|

|ಹದಗೆಟ್ಟ ಶಹಾಬಾದ ಜೇವರ್ಗಿ ರಸ್ತೆ : ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿ|
ಲಾರಿ ಮಾಲೀಕರಿಂದ ರಸ್ತೆ ದುರಸ್ತಿ : ಅಧಿಕಾರಿಗಳ ಅಸಹಾಯಕತೆ ವ್ಯಕ್ತ :..
ಶಹಾಬಾದ : - ಶಹಾಬಾದ - ಜೇವರ್ಗಿ ಮದ್ಯೆ ರಾಜ್ಯ ಹೆದ್ದಾರಿ 125 ರ ರಸ್ತೆಯು ತುಂಬಾ ಹದಗೆಟ್ಟಿದ್ದು ಸಾರ್ವಜನಿಕರು ತಿರುಗಾಡುವದಕ್ಕೆ ಹೆದರುತಿದ್ದು, ಲಾರಿ ಮಾಲೀಕರು ಮತ್ತು ಚಾಲಕರಿಂದ ರೋಡ್ ದುರಸ್ತಿಗೆ ತಾವೆ ಮುಂದಾಗಿ ಟಿಪ್ಪರ, ಜೆಸಿಬಿ ಮೂಲಕ ಮುರುಮ ತಂದು ಹಾಕಿ ರಿಪೇರಿ ಕಾರ್ಯ ಮಾಡುತ್ತಿದ್ದಾರೆ.
ತಗ್ಗು ದಿಣ್ಣೆಗಳಿಂದ ಕೂಡಿದ 125 ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಇಲಾಖೆಯ ಎಲ್ಲಾ ಬಸ್ ಬಂದ ಮಾಡಲಾಗಿದೆ ಇದರಿಂದ ಶಿಕ್ಷಣಕ್ಕಾಗಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ತೀವ್ರ ಅನಾರೋಗ್ಯ ಬಳಲುತ್ತಿರುವ ರೋಗಿಗಳನ್ನು ಸಾಗಿಸಲು ಅಂಬುಲೇನ್ಸ್ ಗೆ ತ ತುಂಬಾ ತೊಂದರೆಯಾಗಿ ಸಾವು ನೋವು ಗಳಾಗುತ್ತಿವೆ ಮತ್ತು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿನ್ನಡೆ ಉಂಟಾಗುತ್ತಿದೆ.
ಸರ್ಕಾರ ಅಥವಾ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಸಕಾಲಿಕ ಹಸ್ತಕ್ಷೇಪವಿಲ್ಲದೆ, ಶಹಾಬಾದ್ ಲಾರಿ ಅಸೋಸಿಯೇಷನ್ ನೇತೃತ್ವದಲ್ಲಿ, ಸಂಘವು ಲಾರಿ ಮಾಲೀಕರು ಮತ್ತು ಚಾಲಕರು ಹಾಗೆ ಸಂಬಂಧಪಟ್ಟ ನಾಗರಿಕರನ್ನು ತುರ್ತು ದುರಸ್ತಿಗೆ ಹಣಕಾಸು ಒದಗಿಸಲು ಸಜ್ಜುಗೊಳಿಸಿದೆ, ಇಲ್ಲಿಯವರೆಗೆ, 50 ಕ್ಕೂ ಹೆಚ್ಚು ಟ್ರಕ್, ಟಿಪ್ಪರ್ - ಲೋಡ್‌ಗಳಷ್ಟು ಕ್ವಾರಿ ಕಲ್ಲುಗಳು, ಮುರುಮ ಜೊತೆ ದುರಸ್ತಿ ಸಾಮಗ್ರಿಗಳನ್ನು ಗುಂಡಿಗಳನ್ನು ತುಂಬಲು ಮತ್ತು ಹೆಚ್ಚು ಹಾನಿಗೊಳಗಾದ ಜಾಗಗಳನ್ನು ನೆಲ ಸಮಗೊಳಿಸಲು ಜೆಸಿಬಿ, ಹಿಟಾಚಿ ಗಳನ್ನು ಬಳಸಲಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಗ್ರಿಗಳು ಬೇಕಾಗುತ್ತವೆ. ನಾವು ದುರಸ್ತಿ ಕೆಲಸ ವಿಳಂಬ ಮಾಡುವದಿಲ್ಲ, ಪ್ರತಿದಿನ, ಹೆಚ್ಚಿನ ಜೀವಗಳು ಅಪಾಯದಲ್ಲಿ ಸಂಚರಿಸುತ್ತಿವೆ, ನಾವು ಇನ್ನು ಮುಂದೆ ಅಧಿಕಾರಿಗಳಿಗಾಗಿ ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.
ಸಂಘದ ಪ್ರಯತ್ನದಿಂದ ಕೆಲವು ಪ್ರದೇಶಗಳಿಗೆ ತಾತ್ಕಾಲಿಕ ಪರಿಹಾರವನ್ನು ನೀಡಿದ್ದು, ಆದರೆ ದೀರ್ಘಾವಧಿಯ ಪರಿಹಾರ ಇನ್ನೂ ಅಗತ್ಯವಿದೆ. ಸ್ಥಳೀಯ ನಿವಾಸಿಗಳು ಈಗ ರಾಜ್ಯ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ರಸ್ತೆಯ ಶಾಶ್ವತ ಪುನರ್ನಿಮರ್ಾಣಕ್ಕಾಗಿ, ಸರಿಯಾದ ಒಳಚರಂಡಿ ವ್ಯವಸ್ಥೆಗಳು ಮತ್ತು ಮರುನಿರ್ಮಾಣಕ್ಕಾಗಿ ಹಣವನ್ನು ತಕ್ಷಣವೇ ಮಂಜೂರು ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಲಾರಿಮಾಲೀಕರಿಂದ ದುರಸ್ತಿ ಕಾಮಗಾರಿ ನಡೆಯುತ್ತಿದೆ ಎಂಬ ಸುದ್ದಿ ತಿಳಿದ ಪಿಡಬ್ಲ್ಯೂಡಿ ಅಧಿಕಾರಿಗಳು ದೌಡಾಹಿಸಿ ಬಂದಿದ್ದಾರೆ, ಬಂದು ತಾತ್ಕಾಲಿಕವಾಗಿ ಗುಂಡಿಗಳನ್ನು ಸಿಮೆಂಟ್ ಜೆಲ್ಲಿ ಕಲ್ಲುಗಳಿಂದ ಮುಚ್ಚಿ ರಸ್ತೆ ನಿರ್ಮಿಸಲಾಗುವದು, ಅನುದಾನ ಬಂದ ಮೇಲೆ ಶಾಸ್ವತ ಪರಿಹಾರ ನೀಡಲಾಗುವುದು ಎಂದು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.