ಲಕ್ಷ್ಮಣ ದಸ್ತಿ ಅವರಿಗೆ ವಿಚಾರವಂತ ಬಳಗದ ವತಿಯಿಂದ ಸನ್ಮಾನ.

ಲಕ್ಷ್ಮಣ ದಸ್ತಿ ಅವರಿಗೆ ವಿಚಾರವಂತ ಬಳಗದ ವತಿಯಿಂದ ಸನ್ಮಾನ.

ಲಕ್ಷ್ಮಣ ದಸ್ತಿ ಅವರಿಗೆ ವಿಚಾರವಂತ ಬಳಗದ ವತಿಯಿಂದ ಸನ್ಮಾನ.

 ಕಲಬುರಗಿ : ಕೆಲವು ಸಲ ಪ್ರಶಸ್ತಿಗಳು ಯೋಗ್ಯರಿಗೆ ಲಭಿಸಿ, ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ವತಿಯಿಂದ ಹುಟ್ಟು ಹೋರಾಟಗಾರ ಶ್ರೀ ಲಕ್ಷ್ಮಣ ದಸ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದ್ದು ಔಚಿತ್ಯಪೂರ್ಣವಾಗಿತ್ತು. ಸಮಾಜದ ಒಳಿತಿಗಾಗಿ ತನ್ನಿಡಿ ಬದುಕನ್ನು ಸವೆಸಿದ ದಸ್ತಿಯವರನ್ನು ಗೌರವಿಸುವ ಮೂಲಕ ವಿಶ್ವವಿದ್ಯಾಲಯ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದೆ. ಇದು ಸಮಾಜದ ಉತ್ತರದಾಯಿತ್ವವು ಆಗಿದೆ.

ಕಲಬುರ್ಗಿಯ ಖ್ಯಾತ ಹೋರಾಟಗಾರರು, ಚಿಂತಕರು, ಶಿಕ್ಷಣ ತಜ್ಞರಾದ ಲಕ್ಷ್ಮಣ ದಸ್ತಿ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ ವತಿಯಿಂದ ನೀಡಲಾದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಇಂದು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್ ಹಾಗೂ ಸರ್ಕಾರದ ಶಿಕ್ಷಣ ಸಚಿವರಾದ ಸುಧಾಕರ್ ಅವರು ದಸ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಆ ನಿಮಿತ್ತ ಇಂದು ಚಿಂತಕರ ಬಳಗ ಸತ್ಯಂ ಪದವಿಪೂರ್ವ ಕಾಲೇಜಿನಲ್ಲಿ ಅವರನ್ನು ಸನ್ಮಾನಿಸಲಾಯಿತು. ೩೭೧ ಜೆ ಸೌಲಭ್ಯಕ್ಕಾಗಿ ಈ ಭಾಗದಲ್ಲಿ ನಡೆದ ಹೋರಾಟಗಳಲ್ಲಿ ಅವರ ಪಾತ್ರವು ಪ್ರಮುಖವಾಗಿತ್ತು. ಅದನ್ನು ಜೀವಂತವಾಗಿಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅದನ್ನು ಅನುಷ್ಠಾನಗೊಳಿಸುವಲ್ಲಿ ಅವರ ಅವಿರತ ಶ್ರಮ ಮಹತ್ವಪೂರ್ಣವಾದುದ್ದು.

ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ, ಡಾ ಮಲ್ಲಿಕಾರ್ಜುನ ಶೆಟ್ಟಿ, ಬಿ .ಎಚ್.ನಿರಗುಡಿ, ಶರಣಗೌಡ ಪಾಟೀಲ್ ಪಾಳಾ, ಡಾ. ಬಸವರಾಜ ಭಾಗ, ಡಾ. ರೌಫ್ ಖಾದ್ರಿ ಇದ್ದರು.