ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ರವರ ಜಯಂತಿಯು ರಾಜ್ಯಮಟ್ಟದಲ್ಲಿ ಆಚರಣೆ ಆಗಲಿ : ಜಿಲ್ಲಾಧ್ಯಕ್ಷ ಮಛಂದ್ರನಾಥ ಕಾಂಬ್ಳೆ.
ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ರವರ ಜಯಂತಿಯು ರಾಜ್ಯಮಟ್ಟದಲ್ಲಿ ಆಚರಣೆ ಆಗಲಿ : ಜಿಲ್ಲಾಧ್ಯಕ್ಷ ಮಛಂದ್ರನಾಥ ಕಾಂಬ್ಳೆ.
ಇಂದು ಅಖಿಲ ಭಾರತ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಸೈನ್ಯ ಬೀದರ ಜಿಲ್ಲೆ ವತಿಯಿಂದ ಮಾನ್ಯ ಶಾಸಕರಿಗೆ ಮನವಿ ಮಾಡಲಾಯಿತು ಭಾರತ ದೇಶಕ್ಕೆ ಮತ್ತು ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಅದ್ಭುತವಾದ ಸಂವಿಧಾನವನ್ನು ನೀಡಿರುವ ಮಹಾನ್ ಮಾನವತಾವಾದಿ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಧರ್ಮಪತ್ನಿ, ತ್ಯಾಗ-ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್ ರವರ 127ನೇ ಜಯಂತಿ ಇದೇ ತಿಂಗಳು ದಿನಾಂಕ 07/02/2025 ರಂದು ಇದ್ದೀರುವುದು ಇಡೀ ದೇಶಕ್ಕೆ ಗೋತ್ತಿರುವ ವಿಷಯವಾಗಿದೆ ಹಾಗಾಗಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ರವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸದೆ ಇರುವುದು ಅತ್ಯಂತ ವಿಷಾದನೀಯ ಅಷ್ಟೇ ಅಲ್ಲದೆ ಅತ್ಯಂತ ನೋವಿನ ಸಂಗತಿಯಾಗಿದೆ. ಹಾಗಾಗಿ ಸರ್ಕಾರ ಮಟ್ಟದಲ್ಲಿ ಮಾತೂಶ್ರೀ ರಾಮಬಾಯಿ ಅಂಬೇಡ್ಕರ್ ಅವರ ಜಯಂತಿಯು ಸರ್ಕಾರದ ಮಟ್ಟದಲ್ಲಿ ಆಚರಣೆ ತರುವಂತೆ ಮಾನ್ಯ ಶಾಸಕರಿಗೆ ಒತ್ತಾಯಿಸಲಾಯಿತು ಈ ಸಂದರ್ಭದಲ್ಲಿ ಸಮಾಜದ ದಲಿತ ಮುಖಂಡರು ಪಿಂಟು ಕಾಂಬ್ಳೆ ರಾಕೇಶ್ ಗುಪ್ತ ಹಾಗೂ ಅನೇಕ ದಲಿತ ಯುವಕರಿಂದ ಮನವಿ ಮಾಡಲಾಯಿತು