ಶಾಂತಾಬಾಯಿ ಕಲ್ಯಾಣರಾವ್ ಮಾಲಿ ಪಾಟೀಲ್ ನಿಧನ – ಅಪಾರ ಶೋಕ

ಶಾಂತಾಬಾಯಿ ಕಲ್ಯಾಣರಾವ್ ಮಾಲಿ ಪಾಟೀಲ್ ನಿಧನ – ಅಪಾರ ಶೋಕ

ಶಾಂತಾಬಾಯಿ ಕಲ್ಯಾಣರಾವ್ ಮಾಲಿ ಪಾಟೀಲ್ ನಿಧನ – ಅಪಾರ ಶೋಕ

ಕಲಬುರ್ಗಿ: ಕಲಬುರ್ಗಿ ತಾಲೂಕಿನ ಕಡಣಿ ಗ್ರಾಮದ ಶಾಂತಾಬಾಯಿ ಕಲ್ಯಾಣರಾವ್ ಮಾಲಿ ಪಾಟೀಲ್ (ವಯಸ್ಸು 85) ಅವರು ವಯೋಸಹಜ ಕಾರಣಗಳಿಂದ ನಿನ್ನೆ (ಜುಲೈ 23) ನಿಧನರಾದರು.

ಗುರು ಉಪದೇಶ ಮಾಸಪತ್ರಿಕೆ ಸಂಪಾದಕರಾದ ಸಿದ್ದಣ್ಣಗೌಡ ಮಾಲಿ ಪಾಟೀಲ್ ಅವರ ದೊಡ್ಡಮ್ಮರಾದ ಮೃತರು, ಸದಾ ದಾನಧರ್ಮ, ಪರೋಪಕಾರದಲ್ಲಿ ತೊಡಗಿದ್ದವರು. ದೀನ ಬಡವರಿಗೆ ನೆರವಾಗುವುದರಲ್ಲಿ ಯಾವತ್ತೂ ಹಿಂದೆ ಆಗದ ಈ ಲಿಂಗೈಕ್ಯ ವ್ಯಕ್ತಿ, ಪ್ರೀತಿ ವಿಶ್ವಾಸದೊಂದಿಗೆ ಸಮಾಜದ ಎಲ್ಲಾ ವರ್ಗಗಳೊಂದಿಗೆ ಬೆರೆತು ಬದುಕಿದವರು.

ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 1:00 ಗಂಟೆಗೆ ಅವರ ಸ್ವಂತ ಜಮೀನಿನಲ್ಲಿ, ಕಡಣಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನ ಪ್ರಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಮೃತರ ಅಗಲಿಕೆಯಿಂದ ಕಡಣಿ ಗ್ರಾಮದ ಜನರಿಗೆ ನೋವುಂಟು ಮಾಡಿದೆ.ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘ, ಗುರು ಉಪದೇಶ ಪತ್ರಿಕೆ, ಕಲ್ಯಾಣ ಕಹಳೆ ಪತ್ರಿಕೆ ಹಾಗೂ ಹಲವಾರು ಬಂಧುಮಿತ್ರರು, ಹಿರಿಯರು ಶೋಕಸೂಚನೆ ವ್ಯಕ್ತಪಡಿಸಿದ್ದಾರೆ.