ವಿವಿಧ ಕಾಮಗಾರಿಗಳ ಚಾಲನೆ ಶಾಸಕ ಅಲ್ಲಮಪ್ರಭು ಪಾಟೀಲ

ವಿವಿಧ ಕಾಮಗಾರಿಗಳ ಚಾಲನೆ ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ: ನಗರದ ವಾರ್ಡ್ ನಂಬರ್ 52 ರಲ್ಲಿ ಬರುವ ಅಕ್ಕಮಹಾದೇವಿ ಕಾಲೋನಿಯಲ್ಲಿ ಕೆ.ಕೆ.ಆ.ರ್.ಡಿ.ಬಿ ಅನುದಾನದಲ್ಲಿ 1 ಕೋಟಿ ವೆಚ್ಚದ ವೆಸ್ಟ್ ವಿಂಗ್ ರಂಗಮಂದಿರ ಗಾರ್ಡನ್ ಅಭಿವೃದ್ದಿ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಆಳಂದ ಮತಕ್ಷೇತ್ರದ ಶಾಸಕರಾದ ಬಿ. ಆರ್. ಪಾಟೀಲ್ ಅವರು ಜಂಟಿಯಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಯಂಕಚಿ, ಸುಶಿಲಕುಮಾರ ಮಾಮುಡಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಹೆರೂರ, ಭೀಮರಾವ ಮೇಳಕುಂದಾ, ಶಾಂತಕುಮಾರ ನಂದೂರ ಎಇ, ಶಿವಾನಂದ ಎಇ, ಸೌರಬ್ ಎಇಇ, ಶರಣಗೌಡ ಜೆಇ, ಗುತ್ತೇದಾರ ಎಂ.ಡಿ.ಶಫಿ, ಗೋವಿಂದರಾಜ್ ನೀರಡಗಿ, ಎಸ್.ಎಸ್.ಹತ್ತಿ, ದಯಾನಂದ ಹೀರೆಮಠ, ಬಾಬುರಾವ ಹಾಗರಗುಂಡಗಿ, ಸುಶಿಲಕುಮಾರ ರೈಕೋಡ, ಸಂಪತ ಇಂಜಿನಿಯರ್, ರವಿ, ಸಿದ್ದಣ್ಣಾ ಸಜ್ಜನ್, ಮಹಾಂತೇಶ ಪಾಟೀಲ, ಎಸ್.ಹೆಚ್.ತೇಟಿ, ಅಂಬರಿಶ ಪಾಟೀಲ, ವಿಠಲ್ ಶಿವಶರಣಪ್ಪ ಕೆ, ಕೃಷ್ಣಾ ಸಿಂಧೆ, ಸಿದಲಿಂಗ ರೆಡ್ಡಿ, ಶೇಖರ ತಳವಾರ, ಸಂಗಣಗೌಡ ಪೋಲಿಸ್ ಪಾಟೀಲ, ಶ್ರೀಕಾಂತ ನಿರೋಣ, ಶರಣಬಸಪ್ಪ ಪಾಟೀಲ, ಸುಭಾಷಚಂದ್ರ ಡೆಂಕಿ, ಅಂಬರಿಶ ದೇವನಳೆ ಸೇರಿದಂತೆ ಇತರರು ಇದ್ದರು.