ಪಂ. ಶ್ರೀ ಸಿದ್ದೇಶ್ವರ ಶಾಸ್ತ್ರಿ ನಿಧನ
ಪಂ. ಶ್ರೀ ಸಿದ್ದೇಶ್ವರ ಶಾಸ್ತ್ರಿ ನಿಧನ
ನಿಧನ ವಾರ್ತೆ -
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ತೆಲ್ಲೂರು ಗ್ರಾಮದ ವೇದಮೂರ್ತಿ ಕಲ್ಲಯ್ಯ ಸ್ವಾಮಿ ರುದ್ರಮ್ಮ ಹಿರೇಮಠ ದಂಪತಿಗಳ ತೃತೀಯ ಸುಪುತ್ರರಾದ ಕೀರ್ತನ ಪುರಾಣ ಪ್ರವಚನಕಾರರು, ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ನಿಕಟ ಪೂರ್ವ ಸದಸ್ಯರು ಲಿಂಗೖಕ್ಯ ಪಂ. ಶ್ರೀ ಸಿದ್ದೇಶ್ವರ ಶಾಸ್ತ್ರೀಳಗಳು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಹಿರೇಮಠರನ್ನು ಕಳೆದುಕೊಂಡ ಸಾಂಸ್ಕೃತಿಕ ಲೋಕ ಬಡವಾಗಿದೆ. ಕರ್ನಾಟಕ ,ಆಂಧ್ರ,ಮಹಾರಾಷ್ಟ್ರದ ರಾಜ್ಯದ ಅನೇಕ ಮಠ ಮಂದಿರಗಳ ಕೀರ್ತನೆಯ ಧ್ವನಿಸುರಳಿ , ಪುಸ್ತಕಗಳನ್ನು ಹೊರತಂದು , ಸಂಗೀತ ಸಾಹಿತ್ಯ ಕಲಾ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ .
ಇವರಿಗೆ "ಕುಮಾರವ್ಯಾಸ ಪ್ರಶಸ್ತಿ ' ಕರ್ನಾಟಕ ಕಲಾಶ್ರೀ ಪ್ರಶಸ್ತಿ , ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸುವೆ.
ಕಲ್ಯಾಣ ನಾಡಿನ ಕೀರ್ತಿಯನ್ನು ಬೆಳಗಿಸಿದವರು ಇವರ ಅಕಾಲಿಕಮರಣ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಇವರ ಕುಟುಂಬದವರಿಗೂ ಅಭಿಮಾನಿಗಳಿಗೂ ಗದುಗಿನ ಶ್ರೀ ವೀರೇಶ್ವರ ಪೂಣ್ಯಾಶ್ರಮದ ಕಲಾಬಳಗಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ, ಗುರು ಪುಟ್ಟರಾಜ ಶಿವಯೋಗಿಗಳು ಕರುಣಿಸಲಿ ತೆಲ್ಲೂರಿನ ಕೀರ್ತಿಯನ್ನು ಮನೆ ಮನೆಗಳಿಗೂ ಮನಮನಗಳಿಗೂ ಪರಿಚಯಿಸಿದ್ದ ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ತೆಲ್ಲೂರ್ ನಿಧನಕ್ಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ನವ ಕರ್ನಾಟಕ ಸಂಗೀತ ಪಧವೀದರರ ಸಂಘದ ಅಧ್ಯಕ್ಷರು ಶ್ರೀ ಬಂಡಯ್ಯ ಸ್ವಾಮೀಜಿ ಸುಂಟನೂರ , ಕಲಾವಿದರು ಸಂತಾಪ ವ್ಯಕ್ತಿಪಡಿಸಿದರು