ಕುಮಸಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ

ಕುಮಸಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ

ಕುಮಸಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ತಾಲೂಕಿನ ಕುಮಸಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆ ಅನುದಾನದಲ್ಲಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿ.ಸಿ. ರಸ್ತೆ ಕಾಮಗಾರಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಾಧಬಾಯಿ ಭರತಕುಮಾರ ಅವರು ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಮಲ್ಲಮ್ಮ ಶರಣಪ್ಪ ಜಮಾದಾರ, ಯಶವಂತರಾವ ರುಕ್ಕಪ್ಪ ಧನ್ನಿ, ಶರಣಮ್ಮ ಶಿವಾನಮದ ಸಿಂಗೆ, ಅಣ್ಣಾರಾವ ಬಸಲಪ್ಪಾ ಪಾಟೀಲ, ಪ್ರಭುರಾಜ ಸಿದ್ದಣ್ಣ, ಚಂದ್ರಕಾಂತ ಬೇಲೂರ, ರಾಣಣ್ಣಪ್ಪ ವಗ್ದರ್ಗಿ, ಸುರೇಶ ಜಮಾದಾರ, ಕರಣಕುಮಾರ ಜಮಾದಾರ, ಸಿದ್ರಾಮಪ್ಪ ಹಿಪ್ಪರಗಿ, ರಾಣೋಜಿ ಸಿಂಗೆ, ಶರಣಪ್ಪಾ ಜಲದೆ, ಕಾಶಿನಾಥ ಹೂಗಾರ, ಸಿದ್ದರಾಮ ಸಿಂಗೆ, ಶಿವಯೋಗಿ ಕೆ., ಭೀಮಶಾ ಮೈನಾಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈ ರಸ್ತೆ ಸಹಾಯಕವಾಗಲಿದೆ. ಕಾಮಗಾರಿ ನಿಗದಿತ ಅವಧಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.