ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗೇನೂ ಕೊರತೆ ಇಲ್ಲ ಆದರೆ ಆತ್ಮವಿಶ್ವಾಸದ ಕೊರತೆ ಇದೆ. : ಶಿವಾನಂದ ಖಜುರ್ಗಿ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗೇನೂ ಕೊರತೆ ಇಲ್ಲ ಆದರೆ ಆತ್ಮವಿಶ್ವಾಸದ ಕೊರತೆ ಇದೆ. : ಶಿವಾನಂದ ಖಜುರ್ಗಿ.
ಬಹಳಷ್ಟು ಸಾಧಕರು, ಪ್ರತಿಭೆಗಳು ಗ್ರಾಮೀಣ ಭಾಗದಿಂದ ಬಂದಿದ್ದಾರೆ ಅದರಲ್ಲೂ ಬಡತನದ ಹಿನ್ನಲೆಯಿಂದ ಬಂದಿದ್ದಾರೆ ಎಂದು ದಿಶಾ ಪದವಿಪೂರ್ವ ಕಾಲೇಜಿನ ಚೇರ್ಮನ್ ಶಿವಾನಂದ ಖಜುರ್ಗಿ ಹೇಳಿದರು. ಕಲ್ಯಾಣದ ನಾಡಿನಲ್ಲಿ ಪ್ರತಿಭೆಗೇನೂ ಕೊರತೆಯಿಲ್ಲ ಆದರೆ ಮಕ್ಕಳಲ್ಲಿ ಆತ್ಮ ವಿಶ್ವಾಸದ ಕೊರತೆಯಿದೆ. ಹಿಂಜರಿಕೆ ಇದೆ. ಕೀಳರಿಮೆ ಇದೆ ಈ ಭಾವನೆಯನ್ನು ಈ ಮನಸ್ಥಿತಿಯಿಂದ ಹೊರಬಂದರೆ ಖಂಡಿತ ನಮ್ಮ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು ಎನ್ನುವ ಮಾತಿನoತೆ. ಮಕ್ಕಳು ಈ ವಯಸ್ಸಿನಲ್ಲಿಯೇ ನಿಶ್ಚಿತ ಗುರಿ ಇಟ್ಟುಕೊಂಡು ಓದಬೇಕು ಅಂತ ಮಕ್ಕಳಿಗೆ ಗುರುಗಳಾದವರು ಉತ್ತಮ ಮಾರ್ಗದರ್ಶನ ನೀಡುವುದರ ಮುಲಕ ಆ ಮಕ್ಕಳ ಸಾಮಾರ್ಥ್ಯವನ್ನು ಹೊರತರುವ ಪ್ರಯತ್ನ ಮಾಡಬೇಕು ಎಂದು ಎಂದರು. ಮಕ್ಕಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೊಳ್ಳಲು ಗೂಗಲ್ ಗೆ ಮೊರೆ ಹೋಗುವುದಕ್ಕಿಂತ ಪುಸ್ತಕಗಳ ಮೊರೆ ಹೋಗಿ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿ ಇದರಿಂದ ಜ್ಞಾನದ ಜೊತೆಗೆ ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಅಧ್ಯಯನಶೀಲತೆ ಹೆಚ್ಚುತ್ತದೆ ಎಂದು ಹೇಳಿದರು.
ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಸುರೇಖಾ ಯಾದಗಿರಿ ಅವರು ಶಿಕ್ಷಣದ ಜೊತೆಗೆ ಮಕ್ಕಳು ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ಹಾಗೇ ಗುರುಗಳನ್ನು ತಂದೆ ತಾಯಿಯರನ್ನು ಗೌರವದಿಂದ ನೋಡಬೇಕು ಎಂದು ಕಿವಿಮಾತು ಹೇಳಿದರು.
ಸಾನಿದ್ಯವಹಿಸಿದ್ದ ಪೂಜ್ಯರು ಮಾತನಾಡಿ ಹಣವಿದ್ದವರು ಸಮಾಜದಲ್ಲಿ ಸಾಕಷ್ಟು ಜನವಿದ್ದಾರೆ ಆದರೆ ಮಕ್ಕಳಿಗಾಗಿ ಹಣವನ್ನು ಪ್ರತಿಭಾ ಪುರಸ್ಕಾರ ರೂಪದಲ್ಲಿ ಹಣವನ್ನು ನೀಡುವವರ ಸಂಖ್ಯೆ ಕಡಿಮೆ ಅಂತವರ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸದಸ್ಯರಾದ ಜಾಕಿರ್ ಹುಸೇನ್, ದಾನಿಗಳಾದ ತಾರಾ ಪಾಟೀಲ್, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಐ. ಬಡಿಗೇರ್. ಮುಖ್ಯಗುರು ವಿದ್ಯಾಧರ ಖಂಡಳ ಉಪಸ್ಥಿತರಿದ್ದರು.
ಹತ್ತನೇ ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ತಾರಾಬಾಯಿ, ಪೂಜಾ, ಶರಣು ಅವರಿಗೆ ಕ್ರಮವಾಗಿ 25 ಸಾವಿರ, 15 ಸಾವಿರ, 10 ಸಾವಿರ ರೂ ನೀಡಿ ಸತ್ಕರಿಸಲಾಯಿತು. ಅದೇ ರೀತಿ ಪಿಯುಸಿ ಯಲ್ಲಿ ಮೊದಲ ಮೂರು ಸ್ಥಾನ ಪಡೆದ ಹಾಜಿಸಾಬ, ಸೌಂದರ್ಯ, ವಿಜಯಲಕ್ಷ್ಮಿ ಗೆ ಕ್ರಮವಾಗಿ 15000, 10000, 5000 ರೂ ಗಳ ಪ್ರೋತ್ಸಾಹ ಧನ ನೀಡಲಾಯಿತು. ಅದೇ ರೀತಿ ಏಳು, ಎಂಟು ಮತ್ತು ಒಂಬತ್ತನೆ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ತಾರಾ ಪಾಟೀಲ್ ಅವರು ತಲಾ 5000 ರೂ ಗಳನ್ನು ನೀಡಿದರು. ಸಂಸ್ಥೆಯಲ್ಲಿ ಅಧ್ಯಯನ ಮಾಡಿದ 2000ನೇ ಬ್ಯಾಚ್ ನ ಹಿರಿಯ ವಿದ್ಯಾರ್ಥಿಗಳು ಹತ್ತನೇ ಸಾಧಕ ಮಕ್ಕಳಿಗೆ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.
ಸಿದ್ದಲಿಂಗ ಬಾಳಿ ನಿರೂಪಿಸಿದರು. ಈರಣ್ಣ ಹಳ್ಳಿ ಪ್ರಾರ್ಥಿಸಿದರು, ಈಶ್ವರಗೌಡ ಪಾಟೀಲ್ ಸ್ವಾಗತಿಸಿದರು, ಭುವನೇಶ್ವರಿ ಎಂ ವಂದಿಸಿದರು.