ಕಮಲನಗರ | ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಅಂತರ ಶಾಲಾ ಮಟ್ಟ ಕ್ರೀಡಾಕೂಟಕ್ಕೆ ಡಾ. ಅಜಿತ್‍ಕುಮಾರ ಶಾಸ್ತ್ರೀ ಚಾಲನೆ

ಕಮಲನಗರ ಭಾಗಿರಥಿ ಪಬ್ಲಿಕ್ ಶಾಲೆ: ಅಂತರ್ ಶಾಲಾ ಮಟ್ಟದ ಕ್ರೀಡೆಗೆ ಚಾಲನೆ,

ಕಮಲನಗರ: ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಆರೋಗ್ಯವಾದ ಶರೀರದಲ್ಲಿ ಆರೋಗ್ಯಕರವಾದ ಮನಸ್ಸಿರುತ್ತದೆ ಎಂದು ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಅಜಿತಕುಮಾರ ಶಾಸ್ತ್ರೀ ಹೇಳಿದರು. 

ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಮಕ್ಕಳ ದಿನಾಚರಣೆ ಅಂಗವಾಗಿ ಎರಡು ದಿನಗಳ ಕಾಲ ಆಯೋಜಿಸಿದ್ದ ಅಂತರ್ ಶಾಲಾ ಮಟ್ಟದ್ ಕ್ರೀಡಾಕೂಟಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. 

ಕ್ರೀಡೆಗಳು ವಿದ್ಯಾಭ್ಯಾಸದ ಒಚಿದು ಅಂಗವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ್ಯದರಿಂದ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಆರೋಗ್ಯ ಚೆನ್ನಾಗಿರುವವರಿಗೆ ಮಾನಸಿಕ ಏಕಾಗ್ರತೆ ಹಾಗೂ ಆರೋಗ್ಯ ಲಭಿಸುತ್ತದೆ ಎಂದರು.

ಮುಖ್ಯ ಶಿಕ್ಷಕ ಮನೋಜಕುಮಾರ.ಎಸ್.ಹಿರೇಮಠ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕಾದ ಅಗತ್ಯವಿದೆ. ಕ್ರೀಡಾಪಟುಗಳು ಸೋಲು-ಗೆಲುವಿಗಿಂತ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು. 

ಕ್ರೀಡೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಭಾಗವಹಿಸಿದವರೆಲ್ಲ ಗೆಲ್ಲಲು ಸಾಧ್ಯವಿಲ್ಲ. ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಸೋಲು ಗೆಲುವಿನ ಸೋಪಾನ. ಶ್ರಮವಹಿಸಿ ಸತತ ಅಭ್ಯಾಸ ಮಾಡಿದರೆ ಜಯ ದೊರೆಯುತ್ತದೆ. ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂ ಮನವಿ ಮಾಡಿದರು.

ದೈಹಿಕ ಶಿಕ್ಷಕ ಶೇಖ್ ಇಜಾಜ್, ಶ್ರೀದೇವಿ ಸೋನಕಾಂಬಳೆ, ದೀಪಮಾಲಾ, ರಾಜೇಶ್ರೀ ಸಿರಗಿರೆ, ಶೀತಲ ನಂದು ಹಂಗರಗೆ, ಉಷಾ ವಿದ್ಯಾಸಾಗರ, ಅಂಜಲಿ ಸ್ವಾಮಿ ಸೇರಿದಂತೆ ಶಾಲೆ ಮಕ್ಕಳು ಇದ್ದರು.