ದೊಡ್ಡಪ್ಪ ಅಪ್ಪ ಪ.ಪೂ. ವಿಜ್ಞಾನ ಕಾಲೇಜಿನಲ್ಲಿ ವರ್ಷದ ವಿಜ್ಞಾನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ - 2025 ಹಾಗೂ ಸ್ವಾಗತ ಸಮಾರಂಭ

ದೊಡ್ಡಪ್ಪ ಅಪ್ಪ ಪ.ಪೂ. ವಿಜ್ಞಾನ ಕಾಲೇಜಿನಲ್ಲಿ ವರ್ಷದ ವಿಜ್ಞಾನ ಚಟುವಟಿಕೆಗಳ  ಉದ್ಘಾಟನಾ ಸಮಾರಂಭ - 2025 ಹಾಗೂ ಸ್ವಾಗತ ಸಮಾರಂಭ
ದೊಡ್ಡಪ್ಪ ಅಪ್ಪ ಪ.ಪೂ. ವಿಜ್ಞಾನ ಕಾಲೇಜಿನಲ್ಲಿ ವರ್ಷದ ವಿಜ್ಞಾನ ಚಟುವಟಿಕೆಗಳ  ಉದ್ಘಾಟನಾ ಸಮಾರಂಭ - 2025 ಹಾಗೂ ಸ್ವಾಗತ ಸಮಾರಂಭ

ದೊಡ್ಡಪ್ಪ ಅಪ್ಪ ಪ.ಪೂ. ವಿಜ್ಞಾನ ಕಾಲೇಜಿನಲ್ಲಿ ವರ್ಷದ ವಿಜ್ಞಾನ ಚಟುವಟಿಕೆಗಳ 

ಉದ್ಘಾಟನಾ ಸಮಾರಂಭ - 2025 ಹಾಗೂ ಸ್ವಾಗತ ಸಮಾರಂಭ

ಹೃದಯವಂತ ಹೃದಯವೈದ್ಯ ಡಾ. ಈರಣ್ಣ ಹೀರಾಪುರ ಹೇಳಿಕೆ ತಂಬಾಕು ಸೇವನೆ ಹೃದಯಘಾತಕ್ಕೆ ಕಾರಣ ಭಾರತೀಯರ ಜೀವನ ಶೈಲಿಯಲ್ಲಿ ಬದಲಾವಣೆಯಾಗಿರುವುದು ಹೃದಯಕ್ಕೆ ಕಾರಣವಾಗಿದೆ. ನಡೆದಾಡುವಂತಹ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ .ಮನುಷ್ಯ ದಿನಕ್ಕೆ ಕನಿಷ್ಠ 45 ನಿಮಿಷವಾದರೂ ನಡೆಯುವುದು ಉತ್ತಮ ಅಭ್ಯಾಸ . ಒಂದೇ ಕಡೆಗೆ ಕುಳಿತು ಕೆಲಸ ಮಾಡುವುದು, ಅತಿ ಹೆಚ್ಚು ಆಹಾರ ಸೇವನೆ ಮಾಡಿ ಅದನ್ನು ಕರಗಿಸಲು ವ್ಯಾಯಾಮ ಮಾಡದಿರುವುದು ಕೂಡ ಹೃದಯಾಘತಕ್ಕೆ ಕಾರಣವಾಗಿದೆ .ಹೃದಯಕ್ಕೆ ರಕ್ತ ಪರಿಚಲನೆ ನಿಂತಾಗ ಹೃದಯ ಬಡಿತ ನಿಲ್ಲುತ್ತದೆ. ಅತಿ ಹೆಚ್ಚು ತೂಕ ಬೊಜ್ಜು ಹೃದಯಾಘಾತಕ್ಕೆ ಕಾರಣ .ಯುವಕರಲ್ಲಿ ಮತ್ತು ಹಳ್ಳಿಗಳಲ್ಲಿಯೂ ಕೂಡ ಹೃದಯಾಘಾತ ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿಯಲ್ಲಿ ದೈಹಿಕ ಶ್ರಮ ಕಡಿಮೆಯಾಗಿದೆ.ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿದೆ .ಎದೆಯಲ್ಲಿ ಸತ್ತೆ ಹೋಗುತ್ತೇನೆ ಎಂಬ ನೋವಾಗುತ್ತಿದ್ದರೆ ಸಮೀಪದ ಆಸ್ಪತ್ರೆಗೆ ಹೋಗಿ ಇಸಿಜಿ ಮಾಡಿಸಿಕೊಳ್ಳಿ. ಹೃದಯದ ನೋವು ಆದಷ್ಟು ಬೇಗ ಮೂರು ಆರು ಹನ್ನೆರಡು ತಾಸುಗಳಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.ನಡೆಯುವಾಗ ಧಾಪು ಬಂದರೆ ಅದು ಹೃದಯ ಕಾಯಿಲೆ ಆಗಿರುತ್ತದೆ .ಯಾವುದೇ ರೀತಿಯ ತಂಬಾಕು ಸೇವನೆ ಹೃದಯಾಘಾತಕ್ಕೆ 6 ಕಾರಣವಾಗಿದೆ.

ಹೃದಯಾಘಾತದ ಲಕ್ಷಣ ಕಂಡುಬಂದರೆ ಬೇಗನೆ ಹೃದಯಕ್ಕೆ ಕೈಯಿಂದ ಒತ್ತುವ ಬಿಡುವ ಒತ್ತುವ ಬಿಡುವ ಪೂರ್ವ ಚಿಕಿತ್ಸೆ ಕೊಡಬೇಕು .ಅತಿ ಹೆಚ್ಚು ಮೊಬೈಲ್ ಬಳಕೆ ಮಾಡಿ, ಪ್ರಾಣಾಯಾಮ ಯೋಗಾಸನ ಮಾಡದಿರುವುದರಿಂದ ಹೃದಯಘಾತವಾಗುತ್ತದೆ.

ಸಾನಿಧ್ಯ ವಹಿಸಿದ ಲಿಂಗಸೂರು ಮುದಗಲ್ ಕಲ್ಯಾಣ ಆಶ್ರಮದ ಪರಮಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಮಾತನಾಡಿ ಕಲೆ ವಾಣಿಜ್ಯ ವಿಜ್ಞಾನ ಯಾವುದೇ ವಿಭಾಗದಲ್ಲಿ ಅಧ್ಯಯನ ಮಾಡಿರಲಿ ಹೃದಯ ಸಂತೋಷವಾಗಿರಲಿ ಅಂದರೆ ಮಾತ್ರ ಹೃದಯಘಾತ ಸಮೀಪವು ಸುಳಿಯುವುದಿಲ್ಲ .ವಿದ್ಯಾರ್ಥಿಗಳು ಧನಾತ್ಮಕ ವಿಚಾರ ಮಾಡಬೇಕು ಹೊರತಾಗಿ ಋಣಾತ್ಮಕ ವಿಚಾರ ಮಾಡಬಾರದು, ಉನ್ನತಮಟ್ಟದ ಸಾಧನೆಗೆ ಕನ್ನಡ ಮಾಧ್ಯಮದ ಕಲಿಕೆ ಪೂರಕವಾಗುತ್ತದೆ. ಕಲಿಕೆಗೆ ಶಿಸ್ತು ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳು ಶಿಸ್ತು ಅಳವಡಿಸಿಕೊಳ್ಳಬೇಕು.ಜೀವನದ ಅಡೆತಡೆಗಳು ಕೌಟುಂಬಿಕ ಸಮಸ್ಯೆಗಳು ಬಂದರೆ ಅವುಗಳನ್ನು ಪರಿಹರಿಸಿಕೊಂಡು ಬದುಕಬೇಕು .ದೇವರು ಕೊಟ್ಟಿರುವ ಮನುಷ್ಯ ಜನ್ಮ ಎಂಬ ಬಿಳಿ ಹಾಳೆಯಲ್ಲಿ ಬರೆದು ಬದುಕು ರೂಪಿಸಿಕೊಂಡು ಇತಿಹಾಸವಾಗಬೇಕು ಎಂದು ಆಶೀರ್ವಾದ ಮಾಡಿದರು .

ಅಧ್ಯಕ್ಷೀಯ ನುಡಿಗಳನ್ನು ಆಡಿದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಮಕೃಷ್ಣ ರೆಡ್ಡಿ ಅವರು ಮಾತನಾಡಿ ಅಧ್ಯಾತ್ಮ ಮತ್ತು ವಿಜ್ಞಾನ ಒಟ್ಟಿಗೆ ಸಾಗಿದಾಗ ವಿದ್ಯಾರ್ಥಿಗಳಲ್ಲಿ ನೈಜ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ , ವಿಜ್ಞಾನ ಮತ್ತು ಅಧ್ಯಾತ್ಮ ಒಟ್ಟಿಗೆ ಸೇರಿದರೆ ಮಾತ್ರ ಜೀವನ ಪರಿಪೂರ್ಣಗೊಳುತ್ತದೆ . ಕಲಿಕೆಯಲ್ಲಿ ಶ್ರದ್ದೆ ನಿಷ್ಠೆ ಸಮರ್ಪಣಾ ಭಾವ ಇದ್ದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಿದೆ. ಇರುವ ಸೌಲಭ್ಯಗಳಲ್ಲಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡು ಆದರ್ಶ ಮೆರೆಯಬೇಕು ಎಂದು ನುಡಿದರು.

2025 ನೇ ಸಾಲಿನ ಪಿಯುಸಿ ದ್ವಿತೀಯ ವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕುಮಾರ ಬಸಂತ್ ರೆಡ್ಡಿ, ಕುಮಾರಿ ನವಮಿ, ಕುಮಾರ್ ಆದಿತ್ಯ, ಕುಮಾರಿ ಶ್ರದ್ಧಾ ರೆಡ್ಡಿ ಅವರನ್ನು ಮತ್ತು ಅವರ ಪಾಲಕರನ್ನು ಗೌರವಿಸಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ವಿನೋದ್ ಕುಮಾರ್ ಎಲ್ ಪತಂಗೆ ಅವರು ಸ್ವಾಗತಿಸಿದರು. ಶ್ರೀಮತಿ ಭಾಗ್ಯವತಿ ಎನ್ ಪಾಟೀಲ್ ಮತ್ತು ಸಿದ್ದರಾಮಯ್ಯ ಅವರು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು