ಬಸವಣ್ಣ ಸಮಷ್ಟಿ ಚೇತನ ಶಕ್ತಿ

ಬಸವಣ್ಣ ಸಮಷ್ಟಿ ಚೇತನ ಶಕ್ತಿ
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 25ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಘನ ಮಠದ ಶಿವಯೋಗಿಗಳು ಹೇಳುವಂತೆ ಬಸವಣ್ಣ ಕಾಲತೀತನಾಗಿದ್ದಾನೆ.ಬಸವಣ್ಣನವರ ಪ್ರಭಾವದಿಂದ ಎಲ್ಲಾ ಜಾತಿ ಮತ ಪಂಥದವರು ಲಿಂಗವಂತ ಧರ್ಮ ಸ್ವೀಕರಿಸಿದ್ದಾರೆ. ಅವರಿಗೆ ಲಿಂಗವಂತ ಧರ್ಮ ಸಂಸ್ಕಾರ ತಿಳಿಸಿಕೊಡಲು, ದೀಕ್ಷೆ ನೀಡಲು ಮುಂದಾಳತ್ವ ವಹಿಸಿದವರು ಹಿರೇಮಠದವರಾದರು. ಇವರು ಲಿಂಗವಂತ ಧಾರ್ಮಿಕ ಹಿರೇತನ ವಹಿಸುತ್ತಿದ್ದರು. ಶಿಕ್ಷಣ ನೀಡುವವರು ಸಾಲಿಮಠದವರಾದರು , ವಿಭೂತಿ ಮಾಡುವವರು ವಿಭೂತಿ ಮಠದವರಾದರು, ಲಿಂಗದ ಕಂತಿ ಕೊಡುವವರು ಕಂತಿ ಮಠದವರಾದರು. ಪಂಚಾಚಾರ್ಯರು ಬಸವಣ್ಣನವರು ಸ್ಥಾಪಿಸಿದ ಮಠಗಳಾಗಿವೆ, ಬಸವ ಪೂರ್ವದಲ್ಲಿ ಪಂಚಾಚಾರ್ಯರು ಇರಲಿಲ್ಲ .
ವಿರಕ್ತರು ಅಲ್ಲಮಪ್ರಭು ಸಂಪ್ರದಾಯದವರಾಗಿದ್ದಾರೆ. ಪಂಚಾಚಾರ್ಯರಿಗಿಂತ ವಿರಕ್ತರೇ ಶ್ರೇಷ್ಠರು. ಪಂಚಾಚಾರ್ಯರು ಲಿಂಗಾಯತ ಧರ್ಮವನ್ನು ಹಾಳು ಮಾಡುವವರಾಗಿದ್ದಾರೆ. ಪಂಚಾಚಾರ್ಯರು ಕಪೋಲ ಕಲ್ಪಿತರಾಗಿದ್ದಾರೆ. ಇವರು ಬಸವಣ್ಣನವರನ್ನು ಒಪ್ಪಲಿಲ್ಲವೆಂದರೆ ಅವರು ನಶಿಸಿ ಹೋಗುತ್ತಾರೆ . ಜಂಗಮರನ್ನು ಬಸವಣ್ಣನವರೇ ಹುಟ್ಟು ಹಾಕಿದವರಾಗಿದ್ದಾರೆ .
ಜಂಗಮರು ಹಣದಾಸೆಗೆ ಲಿಂಗವಂತ ಸಂಸ್ಕಾರ ಬಿಟ್ಟು ಬ್ರಾಹ್ಮಣರ ಜ್ಯೋತಿಷ್ಯ ಜಾತಕಗಳಿಗೆ ಗಂಟು ಬಿದ್ದರು .ಜಂಗಮರು ಬಸವಪೂರ್ವದವರಲ್ಲ , 12ನೇ ಶತಮಾನದಿಂದಲೇ ಜಂಗಮರು ಬಂದದರಿಂದ ಜಂಗಮರ ಮನೆತನದ ಹೆಸರುಗಳು ಬಸಯ್ಯ , ಮಡಿವಾಳಯ್ಯ, ಮಾದಯ್ಯನೆಂದು ಇವೆ. ಲಿಂಗಾಯುತರು 12ನೇ ಶತಮಾನದಲ್ಲಿ ಸೂತ್ರರಾಗಿದ್ದರು. ಇವರ ಮನೆಗೆ ಬ್ರಾಹ್ಮಣರು ಬರುತ್ತಿರಲಿಲ್ಲ. ಆದ್ದರಿಂದ ಬಸವಣ್ಣನವರು ಅವರಿಗೆಲ್ಲ ಧಾರ್ಮಿಕ ಸಂಸ್ಕಾರ ನೀಡಲು ಜಂಗಮರನ್ನು ಹುಟ್ಟು ಹಾಕಿದರು.
ಸ್ವಾಮಿಗಳನ್ನು ವಿದ್ವತ್ತಿನಿಂದ ಗುರುತಿಸಬಾರದು, ಅವನ ಆಚಾರ ವಿಚಾರದಿಂದ ಗುರುತಿಸಬೇಕು. ಸ್ವಾಮಿಗೆ ಕಾಸಿಯ ಸಂಸ್ಕೃತ ಅಧ್ಯಯನ ಬೇಕಾಗಿಲ್ಲ , ವಚನ ಅಧ್ಯಯನ ಬೇಕು. ಸ್ವಾಮಿಯಾದವನು ಹೊರಗಡೆ ಯೋಗಿ ಒಳಗಡೆ ಭೋಗಿಯಾಗಿರಬಾರದು. ಜಂಗಮರು ಬಸವಣ್ಣನವರ ತತ್ವ ಹೇಳಿದರೆ ಹಣ ದೊರಕುವುದಿಲ್ಲವೆಂದು ಹೊಟ್ಟೆಪಾಡಿಗೆ ವೇದ , ಆಗಮ ಸಂಪ್ರದಾಯಗಳನ್ನು ಹೇಳಲು ಸತ್ಯನಾರಾಯಣನ ಕಥೆ ಹೇಳಲು ಆರಂಭಿಸಿದರು .
ಜೈನರಲ್ಲಿ ,ಲಿಂಗಾಯತರಲ್ಲಿ ಯುವಕರು ಧರ್ಮದ ಕಡೆಗೆ ಹೆಚ್ಚು ವಾಲುತ್ತಿಲ್ಲ .ಬರೀ ವಯಸ್ಸಾದವರು ಮಾತ್ರ ಧರ್ಮದ ಸತ್ಸಂಗಕ್ಕೆ ಬರುತ್ತಿದ್ದಾರೆ. ಇಂದಿನ ಆದಿ ಬಣಜಿಗರು ಹಿಂದಿನ ಶೈವರಾಗಿದ್ದಾರೆ . ದೀಕ್ಷ ಬಣಜಿಗರು ಜೈನರಾಗಿದ್ದಾರೆ. ಬಸವಣ್ಣನವರು ಜೈನ ,ಬ್ರಾಹ್ಮಣ ,ಶೂದ್ರ, ರೆಡ್ಡಿ, ಕಂಬಾರ , ಕುಂಬಾರ , ಹಡಪದ, ಕುರುಬ ಮುಂತಾದವರನ್ನೆಲ್ಲಾ ಒಂದೆಡೆಗೆ ಸೇರಿಸಿ ಲಿಂಗಾಯಿತ ಧರ್ಮ ಕಟ್ಟಿದರು .ಎಂದು ಹೇಳಿದರು.
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ ಪಾಳಾ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸುರ, ನೀಲಕಂಠ ಪಾಟೀಲ್,ಅಣ್ಣಪ್ಪ ಜಾದವ್ , ಡಾ. ಬಿಎ ರುದ್ರವಾಡಿ ,ಹನುಮಂತ್ ಬಿರಾದಾರ್ ಚೆನ್ನಮ್ಮ ಬಿರಾದರ್ ಅವರು ಹಾಜರಿದ್ದರು