ಭಂಕೂರಿನಲ್ಲಿ ರಾಮನವಮಿ ಆಚರಣೆ :..

ಭಂಕೂರಿನಲ್ಲಿ ರಾಮನವಮಿ ಆಚರಣೆ :..

ಭಂಕೂರಿನಲ್ಲಿ ರಾಮನವಮಿ ಆಚರಣೆ :.. 

ಶಹಾಬಾದ : - ರಾಮ ನವಮಿಯ ವಿಶೇಷತೆಯನ್ನು ಇಂದಿನ ಯುವ ಪೀಳಿಗೆಗೆ ಅರ್ಥ ಮಾಡಿಸಲು ಶ್ರೀರಾಮನವಮಿ ಇಲ್ಲಿ ಆಚರಣೆ ಮಾಡಲಾಗುತ್ತಿದೆ, ಎಂದು ಭಂಕೂರಿನ ಗ್ರಾ. ಪಂ ಸದಸ್ಯ ಈರಣ್ಣ ಕಾರ್ಗಿಲ್ ಹೇಳಿದರು.

ಅವರು ಭಂಕೂರ ಗ್ರಾಮದ ಎಸ್ ಬಿ ಐ ಬ್ಯಾಂಕ್ ವತಿಯಿಂದ ಹಮ್ಮಿಕೊಂಡ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಶ್ರೀರಾಮನ ಭಕ್ತರು ಎಲ್ಲೆಡೆ ಇದ್ದರೂ ಶ್ರದ್ದೆಯಿಂದ ಅವರನ್ನು ನೆನೆಯುತ್ತಾರೆ, ಇಂದು ರವಿವಾರ ಬ್ಯಾಂಕ್ ರಜೆ ಇದ್ದರು ಕೂಡ ಎಲ್ಲಾ ಸಿಬ್ಬಂದಿಗಳು ಒಂದಾಗಿ ರಾಮ ನವಮಿಯ ಆಚರಿಸಿರುವುದು ತುಂಬಾ ಸಂತೋಷದಾಯಕ ವಿಚಾರವಾಗಿದೆ, ಜನ ಸಾಮಾನ್ಯರೋಂದಿಗೆ ಬೆರೆಯಲು ಇಂತಹ ಅನೇಕ ಕಾರ್ಯಕ್ರಮಗಳು ಬ್ಯಾಂಕ್ ಮ್ಯಾನೇಜರ್ ಅಸಕ್ತಿವಹಿಸಿ ಆಯೋಜನೆ ಮಾಡುತ್ತಿರುವುದು ತುಂಬಾ ಸಂತೋಷದಾಯಕ ಸಂಗತಿ ಆಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಭಂಕೂರ ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ದೀಪಕ್ ಕುಮಾರ, ಶಹಾಬಾದ್ ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ಸತೀಶ ಕುಮಾರ ರಾಥೋಡ, ಹರಿವಂಶ ಬಾಲ, ಮಲ್ಲಿಕಾರ್ಜುನ ಹಿರೇನೂರು, ಮಲ್ಲಿಕಾರ್ಜುನ ತೋನಸನಹಳ್ಳಿ, ಬಸವರಾಜ್ ಜಾಬಣ್ಣ, ನಾಗೇಂದ್ರ ಕಂಟಿ, ವಿಜಯಕುಮಾರ ನಾಟಿಕರ ಇತರರು ಉಪಸ್ಥಿತರಿದ್ದರು.