ಡಾ. ಸಿದ್ಧರಾಮ ಹೊನ್ಕಲ್ ಕೃತಿಗಳ ನೂರರ ಸಂಭ್ರಮದ ಯಾತ್ರೆ

ಡಾ. ಸಿದ್ಧರಾಮ ಹೊನ್ಕಲ್ ಕೃತಿಗಳ ನೂರರ ಸಂಭ್ರಮದ ಯಾತ್ರೆ

ಡಾ.ಸಿದ್ಧರಾಮ ಹೊನ್ಕಲ್ ರ ಕೃತಿಗಳ ಯಾತ್ರೆ ನೂರರ ಸಂಭ್ರಮದ ಕಡೆಗವರ ಚಿತ್ತ...

ಶೀಘ್ರದಲ್ಲೇ ಡಾ.ಸಿದ್ಧರಾಮ ಹೊನ್ಕಲ್ ಅವರ ಕೃತಿಗಳು ಎಂಬತ್ತರ ಗಡಿ ತಲುಪಲಿವೆ. ಈಗಾಗಲೇ ಪ್ರಕಟಿತ ಹಾಗೂ ಅಚ್ಚಿನ ಮನೆಯಲ್ಲಿ ಇರುವ ಕೃತಿಗಳ ಪಟ್ಟಿ ಈ ಕೆಳಗಿದೆ. ಈ ಕೃತಿಗಳಿಗೆ ಕನಿಷ್ಠ ೬೦ ಕ್ಕಿಂತ ಹೆಚ್ಚು ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ, ಗುಲಬರ್ಗಾ ವಿವಿಯ, ಕೇಂದ್ರ ಕಸಾಪದ ಒಳಗೊಂಡಂತೆ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳು ಗೌರವಧನದ ಜೊತೆಯಲ್ಲಿ ಪುರಸ್ಕಾರ ನೀಡಿ ಗೌರವಿಸಿವೆ.

ನಾಡಿನ ಹಾಗೂ ಹೊರನಾಡಿನ ಸೇರಿ ಒಟ್ಟು ಎಂಟು ವಿಶ್ವ ವಿದ್ಯಾಲಯಗಳಲ್ಲಿ ೧೬ ಕಿಂತ‌ ಹೆಚ್ಚು ಬರಹಗಳಾದ ಕಥೆಗಳು, ಲಲಿತ ಪ್ರಬಂಧಗಳು, ಪ್ರವಾಸ ಕಥನಗಳು,ಗಜಲ್ ಗಳು ಪಠ್ಯವಾಗಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಓದುವಂತಾಗಿರೋದು ಸಾರ್ಥಕತೆ ತಂದಿದೆ.ಇದರಲ್ಲಿ ೨೫-೩೦ ಕ್ಕಿಂತ ಹೆಚ್ಚು ಕೃತಿಗಳು ಎರಡು ಮೂರು ಬಾರಿ ಮರು ಮುದ್ರಣ ಕಂಡಿವೆ.ಕೆಲವು ಕೃತಿಗಳು ೭-೮ ಬಾರಿ ಮರುಮುದ್ರಣ ಕಂಡಿವೆ. ಅವರ ಬರಹ ಬದುಕಿನ ಮೇಲೆ ಪಿಎಚ್ ಡಿ ಅಧ್ಯಯನ,ಕಥೆಗಳ ಮೇಲೆ ಎಂ.ಫಿಲ್ ಅಧ್ಯಯನ ಒಳಗೊಂಡಂತೆ ನಾಡಿನ ಹೊರನಾಡಿನ ಸೇರಿ ಅವರ ಕೃತಿಗಳ ಮೇಲೆ ೨೦ ಕ್ಕಿಂತ ಹೆಚ್ಚು ಸಂಶೋಧನಾ ಕಿರು ಪ್ರಬಂಧಗಳನ್ನು ಸಂಶೋಧನಾರ್ಥಿಗಳು ವಿವಿಗಳಿಗೆ ಸಲ್ಲಿಸಿದ್ದಾರೆ.ಡಾ.ಸಿದ್ಧರಾಮ ಹೊನ್ಕಲ್ ಅವರ 

 ಗ್ರಾಮೀಣ ಹಿನ್ನೆಲೆಯ ಬದುಕು ಬರಹಗಳಿಗಾಗಿ ಬಹು ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳು ಗೌರವಾನ್ವಿತ ಮಾನ್ಯ ರಾಜ್ಯಪಾಲರ,ಉನ್ನತ ಶಿಕ್ಷಣ ಸಚಿವರ ಮೂಲಕ ಗೌರವ ಡಾಕ್ಟರೇಟ್ ನೀಡಿವೆ...ಐದಾರು ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಸಂದಿವೆ.. ನಾಡಿನಾದ್ಯಂತ ಇರುವ ಅವರ ಲೇಖಕ ಮಿತ್ರರ ಪ್ರೀತಿಯ ಕರೆಗೆ ಓಗೊಟ್ಟು ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ರಾಜ್ಯ, ಕೇಂದ್ರ, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರು ಒಪ್ಪಿಸಿದ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ .ಇಷ್ಟು ಒಬ್ಬ ಗ್ರಾಮೀಣ ಹಿನ್ನೆಲೆಯ ನಾನ್ ಅಕಾಡೆಮಿಕ್ ವಲಯದ ಲೇಖಕನಿಗೆ ದೊರೆತಿರೋದು ಅವರಿಗೆ ಸಂತೋಷದ ಸಂಗತಿ.

ಕಾದಂಬರಿ ಪ್ರಕಾರ ಹೊರತು ಪಡಿಸಿ ಉಳಿದಂತೆ ಎಲ್ಲಾ ಪ್ರಕಾರಗಳಲ್ಲಿ ಬರೆದ ಸಂತಸ ಅವರಿಗಿದೆ . ಅವರ ಬರಹಕ್ಕೆ ಪ್ರೀತಿ ಇರಲಿ. ಸರಿಯಾಗಿ ನನಗೆ ಪರಿಚಯವು ಇಲ್ಲದ, ಅವರ ಹೆಸರು ಸಹ ಕೇಳಿರದ ಒಬ್ಬಿಬ್ಬರು ಇವರೇನು ಬರೆದಾರೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದರಂತೆ... ಅವರಿಂದಾಗಿ ಈ ಕೆಳಗಿನ ಪಟ್ಟಿ ಕೊಟ್ಟಿದ್ದೇನೆ. ಎಂದು ಹೇಳಿದರು.

 ನಾನು ನಡೆದಷ್ಟು ದಾರಿ ನಡೆಯೋದು ಇರಲಿ. ಆರಂಭದ ಒಂದು ಹೆಜ್ಜೆ ಆದರೂ ಗಟ್ಟಿಯಾದ ಬರಹದಲ್ಲಿ ಇಡಲಿ ಎಂದವರಿಗೆ ಅವರು ಶುಭ ಕೋರಿದ್ದಾರೆ. 

ಇಷ್ಟು ಬರೆಯೋದು ಬೇಡ.ಇಷ್ಟು ಕೃತಿಗಳಾದರೂ ಓದಿದರೆ ಅವರ ವಂಕ ಬುದ್ಧಿ ಬದಲಾಗಿ ಸಹೃದಯತೆ ಮೈಗೂಡಬಹುದು ಅಂದುಕೊಂಡಿದ್ದಾರೆ.

 ನಾಡಿನಾದ್ಯಂತ ಇರುವ ನನ್ನ ಆತ್ಮೀಯ ಸ್ನೇಹ ಬಳಗ ಪುಸ್ತಕ ತರಿಸಿಕೊಂಡು ಓದುತ್ತಾ ಪ್ರೋತ್ಸಾಹ ನೀಡುತ್ತಲೇ ಇದ್ದಾರೆ. ಸಪ್ನಾ, ನವಕರ್ನಾಟಕ,ಅಂಕಿತ, ಗೀತಾಂಜಲಿ ,ಅಧಿತ್ರಿ, ಸಾಧನಾ,ಹೀಗೆ ಅನೇಕ ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ನಾಡಿನಾದ್ಯಂತ ಕೃತಿಗಳು ಓದುಗರಿಗೆ ಲಭ್ಯವಿವೆ. ಈಗಾಗಲೇ ಪ್ರವಾಸ ಕಥನ,ಗಜಲ್, ಕಥೆಗಳ ಸಮಗ್ರ ಕೃತಿಗಳು ಸಹ ಪ್ರತಿಷ್ಠಿತ ಪ್ರಕಾಶನದ ಮೂಲಕ ಪ್ರಕಟ ಆಗಿವೆ...ಓದುಗ ವಲಯ ತಲುಪಿವೆ ಎಂದು ಹೇಳಿದರು.

ಲೇಖಕ ಡಾ. ಸಿದ್ದರಾಮ ಹೊನ್ಕಲ್ ಅವರ ಪ್ರಕಟಿತ ಕೃತಿಗಳು

ಇವರ ಒಟ್ಟು ಕೃತಿಗಳು: ೭೭ (ಪ್ರಕಟಿತ-೭೦+೦೭ ಅಚ್ಚಿನಲ್ಲಿ)

*ಕಥಾ ಸಂಕಲನಗಳು*

೧).ಕಥೆ ಕೇಳು ಗೆಳೆಯ : ಕಥಾ ಸಂಕಲನ

೨).ಬಯಲು ಬಿತ್ತನೆ : ಕಥಾ ಸಂಕಲನ

೩).ನೆಲದ ಮರೆಯ ನಿಧಾನ :ಕಥಾ ಸಂಕಲನ

೪). ನೆಲದ ನಿಲುವು :ಸಂ.ಪ್ರಾತಿನಿಧಿಕ ಕಥಾ ಸಂಕಲನ

*ಸಂಶೋಧನಾತ್ಮಕ ಜೀವನ ಕಥನಗಳು*

೫).ಕಾಯಕ ದಾಸೋಹಿ ಶ್ರೀ ಚರಬಸವ ಶರಣರು (ಗುಲ್ಬರ್ಗ ವಿ.ವಿ.ಪ್ರಸಾರಾಂಗದ ಉಪನ್ಯಾಸ ಮಾಲೆ ಪ್ರಕಟಿತ)

೬) ನಾಡೋಜ ಶ್ರೀ ಶಾಂತರಸರು : 

೭).ದಾನ ದೈವಜ್ಞ: (ಶ್ರೀ ಮುರುಗೆಪ್ಪ ಖೇಣೇದ ಜೀವನ ಕಥನ ಸಂ)

೮). ಸಕಲೇಶ ಮಾದರಸ : (ವಚನಕಾರರ ಕುರಿತು ಕೃತಿ ಜ್ಞಾನ ಗಂಗೋತ್ರಿ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟಿತ)

೯). ವಿಮೋಚನಾ ಹೋರಾಟಗಾರ:

( ಶ್ರೀಅಚ್ಚಪ್ಪಗೌಡ ಸುಬೇದಾರ ಸಗರ ಅವರ ಕುರಿತು ಕೃತಿ)

೧೦). ಕಾಯಕದ ನಿಜನಾಯಕ:- (ಶ್ರೀಶರಣಬಸಪ್ಪಗೌಡ ದರ್ಶನಾಪುರ ಅವರ ಜೀವನ ಸಂ. ಕೃತಿ)

*ಪ್ರವಾಸ ಕಥನಗಳು*

೧೧).ಪಂಚನದಿಗಳ ನಾಡಿನಲ್ಲಿ ಪ್ರವಾಸ ಕಥನ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರವಾಸ ಯೋಜನೆಯಡಿಯಲ್ಲಿ)

೧೨).ಕನ್ಯಾಕುಮಾರಿಯಿಂದ ಹಿಮಾಲಯದವೆರೆಗೆ  

೧೩).ಕಲ್ಬುರ್ಗಿಯಿಂದ ಕಾಠಮಂಡುವಿನವರೆಗೆ :

೧೪).ಗಾಂಧಿಯ ನಾಡಿನಲ್ಲಿ…ಪ್ರವಾಸ 

೧೫).ಪಂಚವಟಿಯ ನೆಲದಲ್ಲಿ.. ಪ್ರವಾಸ

೧೬).ಮೂರು ದೇಶ ನೂರೊಂದು ಅನುಭವ: (ವಿದೇಶಿ ಪ್ರವಾಸ ಕಥನ.)

೧೭) ಲೋಕ ಸಂಚಾರಿ ( ಸಮಗ್ರ ಪ್ರವಾಸ ಕಥನ)

೧೮) ಲಕ್ನವಿಯಾನ ಒಂದು ಸಾಂಸ್ಕೃತಿಕ ಪ್ರವಾಸ ಕಥನ

೧೯) ದಕ್ಷಿಣ ದ್ರುವದಿಂ ಉತ್ತರ ಧ್ರುವಕೆ…ಪ್ರವಾಸ ಕಥನ 

*ಕಾವ್ಯ*

೨೦).ಅಂತರಂಗದ ಹನಿಗಳು (ಕವನ ಸಂಕಲನ)

೨೧).ಹೊಸ ಹಾಡು : ಕಾವ್ಯ ಸಂಕಲನ)

೨೨).ಅಕ್ಕನಿಗೊಂದು ಪ್ರಶ್ನೆ ಮತ್ತು ಇತರ ಕವನಗಳು : (ಸಂ.ಕಾವ್ಯ ಸಂಕಲನ)

೨೩).ನೂರಾರು ಹನಿಗಳು : (ಹನಿಗವನ ಸಂಕಲನ)

೨೪).ಗೀತಗಾಯನ: ಇವರ ಕಾವ್ಯಗಾಯನದ ಸಂಪಾದಿತ ಕೃತಿ ಮತ್ತು ಸಿಡಿ

೨೫).ಸುಖಿಗೀತ :ಆರೋಗ್ಯ ಇಲಾಖೆ ಕವನಗಳು

೨೬) ಹೊನ್ನ ಹೃದಯದ ಹಾಡು ( ಕವನ ಸಂಕಲನ)

*ಗಜಲ್ ಶಾಯಿರಿ ಹೈಕು ಕಾವ್ಯ*

೨೭) ಆಕಾಶಕ್ಕೆ ಹಲವು ಬಣ್ಣಗಳು: (ಗಜಲ್ ಸಂಕಲನ)

೨೮) ಹೊನ್ನ ಮಹಲ್...(ಗಜಲ್ ಸಂಕಲನ)

೨೯) ನಿನ್ನ ಪ್ರೇಮವಿಲ್ಲದೇ ಸಾಕಿ...(ಗಜಲ್ ಸಂಕಲನ)

೩೦) ಆತ್ಮಸಖಿಯ ಧ್ಯಾನದಲಿ..(ಗಜಲ್ ಸಂಕಲನ)

೩೧). ನಿನ್ನ ಜೊತೆ ಜೊತೆಯಲಿ...( ಸಮಗ್ರ ಗಜಲ್ ಸಂಕಲನ)

೩೨). ಇದು ಪ್ರೇಮ ಮಹಲ್ (ಆಯ್ದ ಗಜಲ್ ಗಳು)

೩೩). ಗಜಲ್ ನಾದಲೋಕ (ಪ್ರಾತಿನಿಧಿಕ ಗಜಲ್ ಸಂಕಲನ)

೩೪).ಗಜಲ್ ಧಾರೆ..( ಗಜಲ್ ಸಂ.ಎರಡು ವಿವಿಗಳಿಗೆ ಪಠ್ಯ)

೩೫) ಹೊನ್ನಗರಿಯ ಹೈಕುಗಳು (ಹೈಕು ಸಂಕಲನ)

೩೬).ಹೊನ್ಕಲ್ ರ ಶಾಯಿರಿಗಳು(ಶಾಯಿರಿ ಸಂಕಲನ)

*ಲಲಿತ ಪ್ರಬಂಧಗಳು*

೩೭).ಹೃದಯ ಗೀತ: (ಲಲಿತ ಪ್ರಬಂಧ ಸಂಕಲನ)

೩೮).ನುಗ್ಗಿ ಬರುವ ನೆನಪುಗಳು: (ಲಲಿತ ಪ್ರಬಂಧ ಸಂಕಲನ)

೩೯) ಎಲ್ಲ ಮರೆತಿರುವಾಗ..:(ಲಲಿತ ಪ್ರಬಂಧ)

೪೦).ಬಿಸಿಲ ನಾಡಿನ ಬುಗ್ಗೆಗಳು:(ಸಂ.ಲಲಿತ ಪ್ರಬಂಧ) 

೪೧). ಮರೆಯುವ ಮುನ್ನ ( ಲಲಿತ ಪ್ರಬಂಧ) 

*ಸಂಪಾದನೆ*

೪೨).ಸೃಜನ: ಸಂಪಾದನೆ (ಸ್ಮರಣ ಸಂಚಿಕೆ)

೪೩).ಕಾಯಕ :ಸಂಪಾದನೆ (ಸ್ಮರಣ ಸಂಚಿಕೆ)

೪೪).ಬೆವರು :ಸಂಪಾದನೆ (ಸ್ಮರಣ ಸಂಚಿಕೆ)

೪೫).ಸಗರಾದ್ರಿ : ಸಂಪಾದನೆ (ಸ್ಮರಣ ಸಂಚಿಕೆ)

೪೬).ಹೊಸದಿಕ್ಕು : ಸಂಪಾದನೆ)

೪೭).ಮಂದಾಕಿನಿ : (ಇವರು ಸರ್ವಾಧ್ಯಕ್ಷರಾದ ಸಮ್ಮೇಳನದ ಸ್ಮರಣ ಸಂಚಿಕೆ-೨೦೧೭)

೪೮) ಗಿರಿಯ ಸಿರಿ: (ಇವರು ನಾಲ್ಕನೇ ಜಿಲ್ಲಾ ಕಸಾಪ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದಾಗಿನ ಸ್ಮರಣೆ ಸಂಚಿಕೆ)

೪೯). ಸೌಹಾರ್ದ ಸಂಸ್ಕೃತಿ (ಸಂಪಾದನೆ-ಸ್ಮರಣ ಸಂಚಿಕೆ)

೫೦). ಅಮರ ಕಲ್ಯಾಣ (ಸ್ಮರಣ ಸಂಚಿಕೆ)

೫೧). ಸಗರನಾಡ ಸಿರಿ (ಸಂಪಾದನೆ)

೫೨). ಹೃದಯವಂತ ವೈದ್ಯ ( ಸಂಪಾದನೆ)

೫೩).ವಿಶ್ವರೂಪ (ಸಂಪಾದನೆ)

*ಹೊನ್ನುಡಿಗಳು*

೫೪).ಹೊನ್ಕಲ್ ರ ಹೊನ್ನುಡಿಗಳು:-(೨೧೦ ಹೊನ್ನುಡಿಗಳ ಸಂಕಲನ)

೫೫).ಚುಟುಕು ನುಡಿ:-ಸಮ್ಮೇಳನ ಅಧ್ಯಕ್ಷೀಯ ನುಡಿಗಳು(ಚು.ಸಾ.ಪ. ಅಧ್ಯಕ್ಷೀಯ ನುಡಿ ಸಂಕಲನ ೨೦೧೩)

೫೬). ಹೊನ್ನುಡಿ : (ಸಮೇಳನಾಧ್ಯಕ್ಷರ ನುಡಿ ಪುಸ್ತಕ. ೨ ನೇ ತಾಲೂಕ ಕಸಾಪ ಸಾಹಿತ್ಯ ಸಮ್ಮೇಳನ, ಶಹಾಪುರ -೨೦೧೭ ರಲ್ಲಿ

೫೭) ಹೊನ್ನುಸಿರು: (ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದಾಗಿನ ಅಧ್ಯಕ್ಷೀಯ ನುಡಿ ಪುಸ್ತಕ-೨೦೧೮)

೫೮). ಕಲ್ಯಾಣ ಪರ್ವ ..(ಅಖಿಲ ಕರ್ನಾಟಕ ೧೦ ನೇ ಕವಿ ಸಮ್ಮೇಳನ ಹಾಗೂ ೬೫ ನೇ ಪ್ರತಿಭೋತ್ಸವ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ನುಡಿ ಪುಸ್ತಕ.2022,)

೫೯).ಹೊನ್ನಸಿರಿ : ಸದರಿ ಲೇಖಕರ ಕುರಿತು ಸಾಹಿತ್ಯ ವಿಮರ್ಶಾ ಕೃತಿ (ಸಂ: ಶ್ರೀಪ್ರಭುಲಿಂಗ ನೀಲೂರೆ, ಶ್ರೀ ಪ್ರಭಾಕರ ಜೋಶಿ)

೬೦).ಹೊನ್ಕಲ್ ಕಥಾಲೋಕ: ಶ್ರೀ ಮಾನಯ್ಯ ಬಿ ಗೋನಾಲರಿಂದ ಇವರ ಕಥೆಗಳ ಮೇಲಿನ ಎಂ.ಫಿಲ್ ಕೃತಿ

೬೧). ಹೊನ್ನೇಸರ :- (ಇವರ ಬದುಕು ಬರಹದ ಮೇಲಾದ ಪಿಎಚ್ಡಿ ಮಹಾ ಪ್ರಬಂಧದ ಸಾಹಿತ್ಯ ಸಮೀಕ್ಷೆಯ ಕೃತಿ ಡಾ.ರೇವತಿ ಶಿರನಾಳ ಅವರಿಗೆ ಡಾಕ್ಟರೇಟ್ ದೊರೆತ ಕೃತಿ)

೬೨). ಹೊನ್ನಸಿರಿಯ ಹೊನ್ನುಡಿಗಳು

*ವಿಮರ್ಶೆ*

೬೩) ಒಲಿದಂತೆ ಹಾಡಿರುವೆ...: (೧೦೧ ಲೇಖಕರ ಕೃತಿಗಳ ಸಾಹಿತ್ಯ ಅವಲೋಕನ ಕೃತಿ)

೬೪).ನುಡಿ ನೋಟ (ವಿಮರ್ಶೆ, ವ್ಯಕ್ತಿ ಚಿತ್ರಣ,ಮಂಡಿಸಿದ ಬರಹಗಳ ಕೃತಿ)

೬೫).ಅವಲೋಕನ (ವಿಮರ್ಶೆ ಕೃತಿ-)

೬೬). ಪ್ರತಿಬಿಂಬ (ಇವರ ಕೃತಿಗಳಿಗೆ ಬಂದ ವಿಮರ್ಶೆ ಸಂಕಲನ)

೬೭). ಹೊನ್ನುಡಿಯ ಸಾಧಕ ಶ್ರೀ ಸಿದ್ಧರಾಮ ಹೊನ್ಕಲ್ (ಶ್ರೀ ಪ್ರಭುಲಿಂಗ ನೀಲೂರೆ ಅವರ ಸಂಪಾದನೆ ಕೃತಿ)

೬೮). ಕನ್ನಡಿಯಲ್ಲಿ ಕಂಡ ಮುಖ (ಇವರ ಕೃತಿಗಳಿಗೆ ಬಂದ ಬರಹಗಳು-)

*ಇತರೆ*

೬೯) ರಾಣಿ ಈಶ್ವರಮ್ಮ ಕೃತಿ( ಶೀಘ್ರದಲ್ಲೇ ಬರಲಿದೆ)

೭೦) ಸೌಹಾರ್ದತೆಯ ಚರಬಸವ ಶರಣರು (ಶೀಘ್ರದಲ್ಲೇ ಬರಲಿದೆ)

೭೧) ಕಲ್ಯಾಣ ಕರ್ನಾಟಕದ ಪ್ರವಾಸ ಕಥನಗಳು:- ಸಂಪಾದನೆ.( ಶೀಘ್ರದಲ್ಲೇ ಬರಲಿದೆ)

೭೨) ಹೊಂಗೆಮರ..(ಆತ್ಮ ಚರಿತ್ರೆ ಸಂಕಲನ ಅಚ್ಚಿನಲ್ಲಿ)

೭೩) ಮುಖಾಮುಖಿ (ವಿಮರ್ಶೆ ಕೃತಿ ೪ನೇ ದು ಅಚ್ಚಿನಲ್ಲಿ)

೭೪).ಜೀವನಾನುಭವಗಳು ( ಅಚ್ಚಿನಲ್ಲಿ)

೭೫) ಗುಲಬರ್ಗಾ ವಿವಿಗಾಗಿ ಪ್ರವಾಸ ಕಥನ (ಸಂಪಾದನೆ ಪಠ್ಯ ಆಗಿಸಲು(ಶೀಘ್ರದಲ್ಲೇ ಬರಲಿದೆ)

೭೬) ನಾಡೋಜ ಶಾಂತರಸಸರ ಜನ್ಮಶತಮಾನೋತ್ಸವ (ಸಂಪಾದನೆ)

೭೭).ಲಂಕೇಶರ ಕುರಿತು (ಸಂಪಾದನೆ-)

ಶ್ರೀ ಅಲ್ಲಮಪ್ರಭು ಪ್ರಕಾಶನ ಹಾಗೂ ಶ್ರೀ ಹೊನ್ಕಲ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಶಹಾಪುರ