ಕಲಾವಿದರಿಗೆ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ನೀಡಿ: ಡಾ. ವಂಟಿ
ಕಲಾವಿದರಿಗೆ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ನೀಡಿ: ಡಾ. ವಂಟಿ
ಕಲಬುರಗಿ: ನಗರದ ಕಲಮಂಡಲದಲ್ಲಿ ರಂಗಸುರಗ ಸಾಂಸ್ಕೃತಿಕ ಕಾಲ ಶಿಕ್ಷಣ ಸಂಸ್ಥೆ ವತಿಯಿಂದ "ಜಾನಪದ ಸಂಗೀತ" ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಸುನಿಲಕುಮಾರ ವಂಟಿ ಮಾತನಾಡಿ ಕಲಾವಿದರಿಗೆ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ಕಲೆ ಬೆಳೆಯುತ್ತದೆ ಸಂಸ್ಕೃತಿ ಉಳಿಯುತ್ತದೆ ಕಲಾವಿದರ ಕಷ್ಟಗಳು ಕಲಾವಿದರ ಬೇಡಿಕೆಗಳನ್ನು ಸರ್ಕಾರ ಗಮನವಹಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಎಂ ಬಿ ನಿಂಗಪ್ಪ, ನಾಗಭೂಷಣ್ ಅಗಸ್ತ್ಯತೀರ್ಥ, ರೇವಮ್ಮ ಸಿಂದಗಿ, ಶರಣಮ್ಮ ಮದುರಿ, ಸಿದ್ದಮ್ಮ ಟೆಂಗ್ಲಿ, ಮುರಿಗೆಪ್ಪ ತೋರಿವಾಡಿ, ಸರಸ್ವತಿ ನಾಯರ್, ಶ್ರೀದೇವಿ ಖಾನಾಪುರ್, ಶ್ರೀಮಂತ ವಟವಟಿ, ಶಿವಲಿಂಗಪ್ಪ ಹೂಗಾರ್, ಮನಮೋಹನ್ ಸಾಗರ, ಅಭಯ್ ಪ್ರಕಾಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.