ಪ್ರೊ. ಶೋಭಾದೇವಿಗೆ ಅಂತಾರಾಷ್ಟ್ರೀಯ ಸಾಧಕ ವಿಭೂಷಣ ಪ್ರಶಸ್ತಿ

ಪ್ರೊ. ಶೋಭಾದೇವಿಗೆ ಅಂತಾರಾಷ್ಟ್ರೀಯ ಸಾಧಕ ವಿಭೂಷಣ ಪ್ರಶಸ್ತಿ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ *ಕವಿತ್ತ ಕರ್ಮಮಣಿ ಫೌಂಡೇಶನ್ (ರಿ), ನಾಗರಮುನ್ನೋಳಿ* ಸಂಸ್ಥೆಯಿಂದ ೨೦೨೫ನೇ ಸಾಲಿನ ಅಂತಾರಾಷ್ಟ್ರೀಯ *ಸಾಧಕ ವಿಭೂಷಣ ಪ್ರಶಸ್ತಿ*ಗಾಗಿ ಪ್ರೊ. ಶೋಭಾದೇವಿ ಚೆಕ್ಕಿ ಸೇಡಂ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಲಾಲಸಾಬ ಎಚ್. ಪೆಂಡಾರಿ ತಿಳಿಸಿದ್ದಾರೆ.
ಭಾಷೆ, ನೆಲಜಲ, ಸಂಸ್ಕೃತಿ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಜುಲೈ ೨೭, ೨೦೨೫ ರಂದು ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಗೌರವ ಪ್ರದಾನ ಸಮಾರಂಭದಲ್ಲಿ ಪ್ರೊ. ಶೋಭಾದೇವಿ ಅವರು ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.