ಕರ್ನಾಟಕ ರತ್ನ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ

ಕರ್ನಾಟಕ ರತ್ನ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ

ಕರ್ನಾಟಕ ರತ್ನ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ

ಕಲಬುರಗಿ: ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ವತಿಯಿಂದ ಕರ್ನಾಟಕ ರತ್ನ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಕೋಟಿಗೊಬ್ಬ ಕ್ಯಾಲೆಂಡರ್ ಅನ್ನು ತಾಲ್ಲೂಕು ದಂಡಾಧಿಕಾರಿಗಳಾದ ಮಲ್ಲಣ್ಣ ಯಲ್ಲಗೊಡ ಅವರು ಬಿಡುಗಡೆಗೋಳಿಸಿದರು.

ನಂತರ ಮಲ್ಲಣ್ಣ ಯಲ್ಲಗೊಡ ಅವರು ಮಾತನಾಡಿ ನಾನು ಕೂಡ ವಿಷ್ಣುವರ್ಧನ್ ಅವರ ಅಪ್ಪಟ್ಟ ಅಭಿಮಾನಿ ಅವರು ಈ ನಾಡಿಗಾಗಿ ಸೇವೆ ಸಲ್ಲಿಸಿದ್ದು ಕನ್ನಡ ನಾಡು ನುಡಿ ಭಾಷೆ ವಿಷಯದ ಹೋರಾಟದಲ್ಲಿ ವಿಷ್ಣು ಸರ್ ಮೊದಲಿಗರು ಎಂದರೆ ತಪ್ಪಾಗಲಾರದು, ಅವರಿಂದ ನಾವು ನೀವುಗಳು ಕಲಿಯಬೇಕಾಗಿದ್ದು ತುಂಬಾ ಇತ್ತು ಆದರೆ ದೇವರು ಅವರನ್ನು ಬೇಗ ಕರೆದುಕೊಂಡುಬಿಟ್ಟ ಇನ್ನೂ ವಿಷ್ಣು ಸರ್ ಇರಬೇಕಾಗಿತ್ತು ಎಂದು ನೋವಿನ ನುಡಿಗಳಾಡಿದ್ದರು ಹಾಗೆ ಜೇವರ್ಗಿಯಲ್ಲಿ ವಿಷ್ಣು ಸರ್ ಹೆಸರಿನಲ್ಲಿ ಡಾ. ವಿಷ್ಣು ಸೇನಾ ಸಮಿತಿ ಕಟ್ಟಿಕೊಂಡಿದಿರಾ ಈ ನಿಮ್ಮ ಸಮಿತಿಯಿಂದ ನಮ್ಮ ಭಾಗದಲ್ಲಿ ರೈತರಿಗಾಗಿ, ಬಡವರಿಗಾಗಿ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ನಿತ್ಯ ನಿರಂತರ ಸೇವೆ ಸಲ್ಲಿಸುತ್ತಾ ತುಂಬಾ ಒಳ್ಳೆ ಒಳ್ಳೆಯ ಕೆಲಸ ಕಾರ್ಯಗಳು ಮಾಡುತ್ತಾ, ಬರುತ್ತಿದೆ ಈಗೆ ಮುಂದೆವೂ ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಲೇಂದು ಶುಭ ಹಾರೈಸಿದರು.

ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ಅಧ್ಯಕ್ಷರಾದ ಬಸವರಾಜ ಬಿ ಬಾಗೇವಾಡಿ ಮಾತನಾಡಿ ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕರ್ನಾಟಕ ರತ್ನ ಸಾಹಸ ಸಿಂಹ ವಿಷ್ಣುವರ್ಧನ್ ರವರ ಜೀವನ ಮತ್ತು ಅವರ ಸಾಧನೆಯ ಹೆಜ್ಜೆಗುರುತುಗಳನ್ನು ಮತ್ತು ಈ ನಾಡು ನುಡಿ, ನೆಲ ಜಲ, ಭಾಷೆ ಸಂಸ್ಕೃತಿ ಹಾಗೆ ಡಾ. ವಿಷ್ಣು ಸೇನಾ ಸಮಿತಿ ನಡೆದು ಬಂದ ಹೆಜ್ಜೆಗುರುತುಗಳ ಒಳಗೊಂಡಂತೆ ಹಲವಾರು ವರ್ಷಗಳಿಂದ ಈ ನಾಡಿಗಾಗಿ ಸೇವೆ ಸಲ್ಲಿಸಿದ ವಿಷ್ಣುವರ್ಧನ್ ರವರ ಹಲವಾರು ಚಿತ್ರಗಳ ಪೋಟೋ ವಿನ್ಯಾಸದೊಂದಿಗೆ ಈ ಕೋಟಿಗೊಬ್ಬ ಕ್ಯಾಲೆಂಡರ್ ತಯಾರಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದರ್ಶನ ಸೇರಿದಂತೆ ತಾಲ್ಲೂಕು ಆಡಳಿತ ಸಿಬ್ಬಂದಿಯವರು ಇದ್ದರು.