ನೇಕಾರ ಸಮುದಾಯಕ್ಕೆ ಮೊದಲ ಆದ್ಯತೆ ನೀಡಬೇಕು - ಪ್ರಮೋದ್ ಮಧ್ವರಾಜ್

ಹಿಂದುಳಿದ ವರ್ಗಗಳ ವಿಚಾರಗೋಷ್ಠಿ: ನೇಕಾರ ಸಮುದಾಯಕ್ಕೆ ಮೊದಲ ಆದ್ಯತೆ ನೀಡಬೇಕು - ಪ್ರಮೋದ್ ಮಧ್ವರಾಜ್
ಕಲ್ಯಾಣ ಕಹಳೆ ವಾರ್ತೆ
ಕಲಬುರಗಿ, ಜು.13:ಎಚ್.ಕೆ. ಸಂಸ್ಥೆಯ ಆವಣದಲ್ಲಿರುವ ಶಾಕ್ ಸಭಾಂಗಣದಲ್ಲಿ "ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ" ಅಡಿಯಲ್ಲಿ ಹಮ್ಮಿಕೊಳ್ಳಲಾದ *ಹಿಂದುಳಿದ ವರ್ಗಗಳ ಹಿನ್ನೆಲೆ ಮುನ್ನಲೆ ವಿಚಾರಗೋಷ್ಠಿ* ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಜಿಲ್ಲಾ ಗಾಣಿಗ ಸಮಾಜದ ಮುಖಂಡ ಸುರೇಶ್ ಸಜ್ಜನ ರವರು ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಅವರು, “ಈ ಭಾಗದ ನೇಕಾರ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಇವರಿಗೆ ಮೊದಲ ಆದ್ಯತೆ ನೀಡಬೇಕಾಗಿದೆ” ಎಂದು ಒತ್ತಾಯಿಸಿದರು.
"ವಚನ ಸಾಹಿತ್ಯದ ಜನಕ ದಾಸಿಮಯ್ಯನವರು ಈ ಭಾಗದವರು. ನೇಕಾರ ಸಮುದಾಯದ ವಾಸ್ತವ ಹಾಳಾಗಿರುವುದು ನೋವಿನ ಸಂಗತಿ. ದಾಸಿಮಯ್ಯರ ವಚನಗಳು ಭಾರತದ ಸಂವಿಧಾನಕ್ಕೆ ಮೂಲ ಸೆಲೆ ಎಂದು ಹೇಳಬಹುದು" ಎಂದು ತಿಳಿಸಿದರು.
“ಈ ಭಾಗದ ನೇಕಾರರು ಕಳೆದ 30 ವರ್ಷಗಳಿಂದ ರಾಜಕೀಯ ನಾಯಕತ್ವ ರೂಪಿಸಲು ನೆರವಾದರೂ, ಯಾವ ರಾಜಕೀಯ ಪಕ್ಷವೂ ಅವರ ನೋವುಗಳಿಗೆ ಸ್ಪಂದಿಸಿಲ್ಲ. ಇದು ದುಃಖದ ಸಂಗತಿ” ಎಂದ ಅವರು, ನೇಕಾರ ಸಮುದಾಯದ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸುತ್ತಿರುವ ನ್ಯಾಯವಾದಿ ಜೆ.ಎಸ್. ವಿನೋದ ಕುಮಾರರಿಗೆ ಪ್ರಮುಖ ಮಂಚಗಳಲ್ಲಿ ಅವಕಾಶ ಕಲ್ಪಿಸಬೇಕೆಂಬುದು ಸಮಾಜದ ನಿರೀಕ್ಷೆ ಎಂದರು.