ಮುದಗಲ್ಲ ಮಹಾಂತ ಸ್ವಾಮೀಜಿಗಳಿಗೆ ಮಾತೃ ವಿಯೋಗ

ಮುದಗಲ್ಲ ಮಹಾಂತ ಸ್ವಾಮೀಜಿಗಳಿಗೆ ಮಾತೃ ವಿಯೋಗ
ಮಾತೋಶ್ರೀ ಈರಮ್ಮ ತಾಯಿಯವರ ಅಗಲಿಕೆ
ಮುದಗಲ್ಲ:ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರಮಠ, ತಿಮ್ಮಾಪೂರದ ಪ್ರವಚನಯೋಗಿ ಪೂಜ್ಯ ಶ್ರೀ ಮಹಾಂತ ಸ್ವಾಮೀಜಿಗಳ ಮಾತೋಶ್ರೀ ಅಂ. ಪೂಜ್ಯ ಮಾತೋಶ್ರೀ ಈರಮ್ಮ ತಾಯಿಯವರು (ಸಾಲಿಮಠ, ಮುದಗಲ್ಲ) ಇಂದು ಬೆಳಿಗ್ಗೆ 9:45ಕ್ಕೆ ಲಿಂಗೈಕ್ಯರಾದರು.
ಮೃತ್ಯುವಿನ ಸುದ್ದಿ ಧರ್ಮಪ್ರಿಯರು ಹಾಗೂ ಭಕ್ತರಲ್ಲಿ ದುಃಖದ ಕಂಗೊಳಿಸಿಟ್ಟಿದೆ.
ಅಂತ್ಯಕ್ರಿಯೆ ನಾಳೆ (ಜುಲೈ 15, 2025) ಮಂಗಳವಾರ ಬೆಳಿಗ್ಗೆ 10:30ಕ್ಕೆ ಮುದಗಲ್ಲ, ಆಶ್ರದ ಪುಣ್ಯಪ್ರಾಂಗಣದಲ್ಲಿ ಅಂತ್ಯಸಂಸ್ಕಾರ ನೆರವೇರುವುದು
ಶೋಕಸಂತಪ್ತ ಕುಟುಂಬದವರ ಮತ್ತು ಕಲ್ಯಾಣ ಆಶ್ರಮದ ಪರವಾಗಿ ಹಾಗೂ ಕಲಬುರಗಿ ಬಸವ ಸಮಿತಿಯ, ವಿಲಾಸವತಿ ತುಂಬಾ, ಡಾ.ಆನಂದ ಸಿದ್ದಾಮಣಿ , ಪತ್ರಕರ್ತ ಶರಣಗೌಡ ಪಾಟೀಲ ಪಾಳಾ,ಶ್ರ ದ್ಧಾಂಜಲಿಯನ್ನು ಅರ್ಪಿಸಲಾಗಿದೆ.