ಉದ್ದು, ಸೋಯಾ ಬೆಳೆಗಳಲ್ಲಿ ಕಾಂಡ ನೊಣ ಹಾಗೂ ಎಲೆ ಒಣಗೂ ರೋಗ ನಿರ್ವಹಣೆ

ಉದ್ದು,  ಸೋಯಾ ಬೆಳೆಗಳಲ್ಲಿ ಕಾಂಡ ನೊಣ ಹಾಗೂ ಎಲೆ ಒಣಗೂ ರೋಗ  ನಿರ್ವಹಣೆ

ಆಳಂದ ತಾಲೂಕಿನ ಕಿನ್ನಿ ಅಬ್ಬಾಸ್, ಸಾವಳೇಶ್ವರ ಭಾಗದಲ್ಲಿ ಉದ್ದು, ಸೋಯಾ, ಹೆಸರು ಬೆಳೆಯಲ್ಲಿ ಕಾಂಡ ನೊಣ ಬಾದೆ ಹಾಗೂ ಮಕ್ರೋಫೋಮಿನ ಬ್ಲೈಟ್ ಎಲೆ ಒಣಗುವ ರೋಗ ಕಂಡು ಬಂದಿದ್ದು ಈ ಬಾದೆ ಹತೋಟಿಗೆ ರೈತರು ತಿಯೋಮೇತೋಕ್ಷo ಅರ್ಧ ಗ್ರಾಂ ಹಾಗೂ ಕಾರ್ಬೇಡಜಿಮ್ ಮಂಕಾಜಬ್ ಸಂಯುಕ್ತ ಶಿಲಿಂದ್ರ ನಾಶಕ ಎರಡು ಗ್ರಾಂ ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಕವಲು ಭಾಗ ನೆನೆಯುವಂತೆ ಸಿಂಪಡಿಸಬೇಕು. ಕೃಷಿ ವಿಜ್ಜಾನ ಕೇಂದ್ರ ಮುಖ್ಯಸ್ಥರಾದ ಡಾ. ರಾಜು ಜಿ ತೆಗ್ಗೆಳ್ಳಿ, ಸಸ್ಯ ರೋಗ ತಜ್ಜರಾದ ಡಾ. ಜಹೀರ್ ಅಹಮದ್, ಆಳಂದ ಸಂಗೊಳ್ಳಿಗಿ ಸಿ ಕಿಸಾನ್ ಕ್ಲಿನಿಕ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ಪಾಟೀಲ್, ರಾಮ್ ಪಾಟೀಲ್ , ಕಿನ್ನಿ ಗ್ರಾಮದ ರೈತರು ಕ್ಷೇತ್ರ ಭೇಟಿ ಯಲ್ಲಿ ಭಾಗ ವಹಿಸಿ ಕೀಟ, ರೋಗ, ಬೇಸಾಯ ಕುರಿತು ವೈಜ್ಜಾನಿಕ ಕೃಷಿ ಮಾಹಿತಿ ಚರ್ಚಿಸಿದರು.